ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪಿ ಪಿ ಉಪಾಧ್ಯ ಕವಿತೆ- ಬಡವನೊಬ್ಬನ ಕನಸುಗಳು…

ಪಿ ಪಿ ಉಪಾಧ್ಯ

ದಿನವಿಡಿ ದುಡಿಯುವ ಬಡವನಿಗೆ
ತುತ್ತಿನ ಊಟಕೆ ತತ್ವಾರ
ಸಂಕಟವೇ ಬದುಕಾಗಿರುವಾತಗೆ
ಹಗಲೆಲ್ಲಾ ಹಸಿವೋ ಹಸಿವು.
ಆ ಹಸಿವಿನಲ್ಲೇ ಮಲಗುವ ಅವನಿಗೆ
ರಾತ್ರಿಯೆಲ್ಲ ಬರೀ ಕನಸುಗಳೇ
ಮನದಾಳದ ಆಸೆಯ ನೆಕ್ಕುವ ಕನಸು
ಈಡೇರದ ಬಯಕೆಯ ಕಕ್ಕುವ ಕನಸು
ಬಡತನವೇ ಅನುದಿನವಾದಂತಹ ಬದುಕಲಿ
ಸಿರಿವಂತಿಕೆ ಕೈಸೇರಿದ ಕನಸು
ನೆಲದ ಮೇಲೆ ಮಲಗಿದ ದೇಹಕೆ
ಮುಗಿಲೆತ್ತರಕೇರಿದ ಕನಸು
ಹಸಿವನು ನೀಗಿಸಲಾಗದ ಜೀವಕೆ
ಕಂಡದ್ದೇ ಬಿಸಿ ಊಟದ ಕನಸು
ಇದ್ದೊಂದೇ ಬಟ್ಟೆಯ ತೊಟ್ಟಿರುವವಗೆ
ಸಾವಿರ ಉಡುಗೆಯ ಉಟ್ಟಂತಹ ಕನಸು
ಹಸಿವಿನಿಂದ ಕಂಗೆಟ್ಟಿಹ ಮಕ್ಕಳು
ಹೊಟ್ಟೆ ತುಂಬಿ ಕುಣ ದಾಡಿದ ಕನಸು
ತುಂಬಿದ ಹೊಟ್ಟೆಯ ನೇವರಿಸುತ್ತ


ಹೆಂಡತಿ ಎದುರಿಗೆ ಬಂದಂತಹ ಕನಸು
ಹೀಗೇ ಕನಸಿನ ಸರಮಾಲೆಯ ಸೆಳೆತ
ಒಂದರ ಮೇಲೊಂದರ ಹೊಡೆತ
ಬದುಕೆಲ್ಲಾ ಬರೀ ಕನಸೇ ತುಂಬಿ
ನಿಜ ಜೀವನದಲ್ಲಿ ಬರಿ ನರಳಾಟವೇ ಎಲ್ಲ
ಹಾಗೆಯೇ ಪರಿ ಪರಿ
ಕನಸನು ಕಂಡಿಹ ಜೀವಕೆ
ಅದರಲ್ಲೊಂದೂ ನನಸಾಗದ ಚಿಂತೆ
ಜೀಣ ðಸಲಾಗದ ಕನಸಿನ ಹೊಡೆತಕೆ
ಹೆದರಿ ಎದ್ದೇಳುವ ಸೆಳೆತ;
ಆದರೂ ಆಸೆ; ಹೊಸ ಕನಸಿನ ಕನಸು
ಸಹಿಸಲಾಗದ ಜೀವನದಲ್ಲೂ, ಬದುಕಿನ ಆಟದ
ಬಿರು ಮಳೆಯಲ್ಲೂ ಕಂಡಿಹ ಕನಸಲಿ
ಒಂದಾದರೂ ನಿಜವಾಗಲಿ ಎನ್ನುವ ಆಸೆ
ಬದುಕದು ಚಿಗುರಿ ನಳನಳಿಸೀತು
ಬಯಕೆಗಳೀಡೇರಿ ಸಂಭ್ರಮಿಸೀತು
ಎನ್ನುವ ಭ್ರಮೆಯಲಿ ಬದುಕುವುದೇ ಬದುಕು
ಕನಸಿನ ದಾಳಿಗೆ ಮೈಯ್ಯೊಡ್ಡುವ ಬಡವಗೆ
ಸೊಗಸೇ ಕನಸಿನ ಬದುಕು
ಅದುವೇ ಅವನನುದಿನಗಳ ಬಾಳು

‍ಲೇಖಕರು Admin

19 February, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading