ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪಿ ಆರ್ ವೆಂಕಟೇಶ್ ಕವಿತೆ- ಒಳ ಹನಿಯ ರುಚಿ ಒಂದೆ

ಪಿ ಆರ್ ವೆಂಕಟೇಶ್

ಸಾಲು ದಿಪದ ಬೆಳಕ ತೋರಣವ ಕಟ್ಟಿರುವೆ
ಬದುಕ ದೀವಟಿಗೆಯ ಕರುಳ ಹೊಸೆದು.
ಕನಸೇ ನೀ ಬೆಳಕಾಗು ಬಾನ ಕತ್ತಲೆಗೆ
ಹಾಲ ಬೆಳದಿಂಗಳ ಬಯಲ ಕಟ್ಟಿ.

ಕಣ್ಣ ಕನ್ನಡಿಯಲ್ಲಿ ಕಾಪಿಟ್ಟ ದಿನಗಳೆ
ತುಂಬು ಪಾತ್ರೆಯ ತಳಕೆ ತಂಪು ಬೆಸೆದು
ಬಯಕೆ ಬಟ್ಟೆಯ ಮೈಗೆ ಬಣ್ಣ ತೊಡಿಸಿ
ಅಂತರಂಗದ ಸಿಕ್ಕ ಸಡಿಲ ಗೊಳಿಸಿ.

ಒಲವ ಬನದಲಿ ಎಂದು ಬೆಂಕಿಯನು ಉಸುರದಿರಿ
ನಂಟಿ ನೂಲನು ಹೊಸೆದ ಬದುಕ ಬಂಧುರಕೆ
ವಿವಿಧ ಘಮ ಉಕ್ಕಲಿ ಒಳ ಹನಿಯ ರುಚಿ ಒಂದೆ
ಪ್ರೀತಿ ಗುಡಿಯೊಳಗಿನ ಬದುಕ ದೇವನಿಗೆ.

ಕುದಿತಗಳ ಮಸೆಯದಿರಿ ಹರಿತಗಳ ಹರಿಸದಿರಿ
ಕೊಸರಿ ಬಿಡಿ ರೊಚ್ಚುಗಳ ಕುಲುಮೆಯೊಳಗೆ
ಮನುಜ ರೂಪವ ತೊಟ್ಟು ಬೆಳಕ ಸಂಗವನುಟ್ಟು
ಜಗದ ಮೈ ಬಳ್ಳಿಯಲಿ ಸಮರಸದ ಹುಟ್ಟು.

‍ಲೇಖಕರು Admin

16 September, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading