ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪಾಪು ಕೇಳುವಂಥದ್ದು ಹೊಸಾ ಫ್ಲೇವರಿನ ಕಥೆ…..

ಇವತ್ತಿನ ಪ್ಲೇವರು

– ಶಾ೦ತಲಾ ಭ೦ಡಿ

ಶಾ೦ತಲಾ ಭ೦ಡಿ ಒಂದು ಅಕ್ಕಿ ಕಾಳೊಳಗೆ ಮುಷ್ಟಿ ತುಂಬ ಶಕ್ತಿ ಹಾರಿ ಹೋಯ್ತು ಹಕ್ಕಿ ಇನ್ನೊಂದೇ ತುತ್ತಾ ಲಾಸ್ಟು… ಮುಗ್ದೋಯ್ತು ಈಗ ಹಕ್ಕಿ ಹಾರೋಗಿದ್ದು ನಿಜ ನೀರು ಕುಡಿ ಊಹ್ಞೂ… ಚೆಲ್ತು ಚೆಲ್ತು ಚೆಲ್ಲೇ ಹೋಯ್ತು ಹಕ್ಕಿ ಹಾರೋಯ್ತಾ ಈಗ ಹೇಳು ಒಂದೇ ಒಂದಕ್ಕಿ ಕಾಳೊಳಗೆ ಎಷ್ಟು ಶಕ್ತಿ?… ಮುಷ್ಟಿ ಶಕ್ತಿ   ಹೇಳಬೇಕು ಕಥೆ ಆದರೆ ಇಂಥದ್ದಲ್ಲ ಸುಳ್ಳೇ ಕಥೆ ಹೇಳಿದ್ರೆ ಒಪ್ಪುತ್ತಾನ ಅಂವ? ಮಾಡುತ್ತಾನೆ ಸರ್ಚು ಗೂಗಲ್ಲು ಮತ್ತೆ ಚರ್ಚೆ ಶುರು   ಹೊಸಾ ಬೇಬಿಫುಡ್ಡು ಆನ್ ಲೈನೇ ಆರ್ಡರ್ರು ಯಾರೋ ತಟ್ಟಿದರು ಬಾಗಿಲು ಫೆಡ್ ಎಕ್ಸಿನವ ಇರಬೇಕು ಬೇಬಿ ಫುಡ್ಡು ಇವತ್ತು ಬರಬೇಕು   ತಟ್ಟಿದ ಸದ್ದಿಗೆ ಬಾಗಿಲು ಹಕ್ಕಿ ಹಾರೇ ಹೋಯ್ತು ಕಟ್ಟಿಟ್ಟ ಕಥೆ ಅಲ್ಲೇ ಉಳೀತು ಮಮ್ಮಾ… ರೈಸು ವೇಸ್ಟು ಬರೇ ಕಾರ್ಬೋ ವೆನಿಲ್ಲ ಫ್ಲೇವರ್ರು ಬೋರು   ಅಮ್ಮನೀಗ ಹೊಸಕಥೆಯನ್ನೇ ಹುಡುಕಬೇಕು ಗೂಗಲ್ಲಿನಲ್ಲಿಲ್ಲದ್ದು ಅಂವ ಒಪ್ಪುವಂಥದ್ದು ಪಾಪು ಕೇಳುವಂಥದ್ದು ಹೊಸಾ ಫ್ಲೇವರಿನ ಕಥೆ]]>

‍ಲೇಖಕರು G

28 May, 2012

2 Comments

  1. sunil rao

    very nice

  2. SunnyS

    Nice flavour Story…………

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading