ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪಾಠ ಕಲಿಸು..

ಪಂಪಾರೆಡ್ಡಿ ಹರಳಹಳ್ಳಿ

ನಾನು
ಅವಳಂತಾಗಲು, ಅವನಂತಾಗಲು
ಹೇಗೆ ಸಾಧ್ಯ
ಬೆಳಗುವ ದೀಪದಿಂದ
ಎಣ್ಣೆ, ಉರಿವ
ಬತ್ತಿಯನು ಬೇರ್ಪಡಿಸಿದಂತೆ
 
ಸುಟ್ಟ ಗಾಯಗಳಿಂದ
ಮತ್ತೆ ಮತ್ತೆ
ಉರಿವ ನೆನಪುಗಳು
ಮುಲಾಮಿನ ವಾಸನೆ ಬಡಿಯುತ್ತಿದೆ

ಕಣ್ಣೀರು ಹರಿದು
ನದಿಯ ಸೇರಿದೆ
ಹರಿವ ನೀರಿನಂತಾಗಲು
ಆಳ, ಅಗಲದ ಭಯ
ರಕ್ಷಿಸುವ ಕಣ್ಣುಗಳ ದೃಷ್ಠಿ ಬಡಿಯಿತು
 
ಯಾರಂತೆ ಆಗಲಿ
ಸುಡುವ ಬತ್ತಿಯಿಂದ ಬೇರ್ಪಡಿಸಿದ
ಸುಟ್ಟ ಗಾಯದಂತೆ,
ಉರಿವ ನೆನಪುಗಳ ನೆನೆದು
ಹರದಿ ಬಟ್ಟೆಯಂತೆ,
ಕಣ್ಣುಗಳ ದೃಷ್ಠಿಗೆ ಸಿಲುಕಿ
ಸುಡುವ ಸೂರ್ಯನಂತೆ
 
ಮೌನ ದೂರ ಚಲಿಸಬೇಡ
ನಿನ್ನಂತೆ ಶಾಂತಿಯ
ಪಾಠ ಕಲಿಸು
ಎಲ್ಲರಂತಾಗುತ್ತೇನೆ.
 

‍ಲೇಖಕರು G

12 September, 2013

4 Comments

  1. Kajooru sathish

    nice poem .

  2. MANJUNATH.P

    KAVITE CHENNAGIDE…

  3. mmshaik

    maarmika kavana..

  4. ಹನುಮಂತ ಹಾಲಿಗೇರಿ

    ಚನ್ನಾಗಿ ಬಂದಿದೆ ಪಂಪ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading