ಮಂಜುಳ ಸಿ ಎಸ್
ಪ್ರೇಮ- ಸರತಿಗೊಂದಾವತಿ೯
ಪಂಚ-ಪಾಂಡವರಿಗು ಹಂಚಲು
ಅಳತೆಗೆ ಸಿಗುವ ವಸ್ತುವೇ?
ಪಾಂಡು ಪತ್ನಿ ಕುಂತಿದೇವಿ ಪಡೆದ
ಕಾಯಾ ವಾಚ ಧರ್ಮ
ಪಾಲನೆಯ ಭಾಷೆ!
ತನುವನೊಲಿಸಿ ವರುಷ – ಸೇವೆ ಸಲ್ಲಿಸಿ
ಕುಂದಿಲ್ಲದೆ – ಮನಸನೊಲಿಸಲು ಸಾಧ್ಯವಿಲ್ಲವೆಂಬುದೇ
ನಿನಗರಿವಾಗದ ಸತ್ಯ॥
ಒಂಟಿ ಚಂದ್ರನೊಬ್ಬನನೆ ಬಿಡಬಾರದೆಂದು
ಕವನ ಕಟ್ಟಿ ಕೊರೆವಿರುಳಲು ಮಾಳಿಗೆಯಲಿ
ತಬ್ಬಿ ಸುರಪಾನ ನಶೆಗಿಂತ
ನಿನ ಜತೆ ಚಂದವೆಂದ ಸಖ ಪಾಥ೯ ನಲ್ಲವೇ
ಮನದನ್ನ॥
ಹೇ ಆತ್ಮಸಖ ನೀ ಕಟ್ಟಿ ಕೊಟ್ಟ ರಸನಿಮಿಷಗಳ
ಬುತ್ತಿ ಮುಂದಿನ ಸರತಿಯ ಪಾಲನೆಗೆ ಚಾಕಲಶಕ್ತಿ॥

ನಾ ಗೆದ್ದು ತಂದವಳು! ಸರತಿ ಪಾಲನೆಯ
ಮುರಿಯಗೊಡದೆ ಬಯಸಿದವನ
ಕೂಡಲು ಬಿಡದವಳ ಧಿಕ್ಕರಿಸಿ
ದೇಶಾಂತರ ಹೊರಟವ
ಉಲೂಚಿ – ಚಿತ್ರಾಂಗದೆಯ ವರಿಸಿ
ಸುಭದ್ರೆಯ ತಂದು
ಸವತಿ – ಮತ್ಸರವಿರದೆ ನಕ್ಕವಳ
ದಿಟ್ಟಿಸಲಾರದೆ ತಲೆ ತಗ್ಗಿಸಿದವನಿಗೆಂತು
ತಿಳಿಯಬಹುದೇ
ಮನದರಸಿಗಾದ ವ್ಯಥೆ॥
ಸಖನೇ ಕನಸ ಹಿಂಗಿಸಿ
ಮನದ ಬೆಳಕ ಬತ್ತಿಸಿ
ವ್ರತ ಪಾಲನೆಗೊಪ್ಪಿಸಿ
ನಿನ ಸಖಿಯ – ತ್ಯಜಿಸಿ
ಹೊರಟವನಿಂದೆ ಬರಲಾಗದ
ಪಂಚ ಪಾಂಡವರ ಪತ್ನಿಗಿಂದು
ಪ್ರೇಮರಾಹಿತ್ಯ ಬಾಳ್ವೆಯ ದುಗ೯ತಿ॥






0 Comments