ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಪದ’ ಹುಡುಕಿದರು…

ಕೇಸರಿ ಹರವೂ

ಸುಮಾರು ಐದಾರು ವರ್ಷಗಳ ಹಿಂದಿನ ಮಾತು. ಚಲನಚಿತ್ರ ಪ್ರಕಾರಗಳಲ್ಲಿ ಕಥಾಚಿತ್ರ, ಸಾಕ್ಷ್ಯಚಿತ್ರ, ಜಾಹೀರಾತು ಚಿತ್ರ ಹೀಗೆ ಹಲವು ಇವೆ ಅಲ್ಲವೇ? ಇಂಗ್ಲಿಷಿನಲ್ಲಿ feature / fiction films ಮತ್ತು ಜಾಹೀರಾತು ಚಿತ್ರಗಳನ್ನು ಹೊರತುಪಡಿಸಿ ಮಿಕ್ಕೆಲ್ಲ ಸೃಜನಾತ್ಮಕ ಚಿತ್ರಗಳನ್ನು non-feature films ಎಂದು ಕರೆಯಲಾಗುತ್ತದೆ. ಅವುಗಳಲ್ಲಿ ಸಾಕ್ಷ್ಯಚಿತ್ರವೂ ಒಂದು. ಆದರೆ ಕನ್ನಡದಲ್ಲಿ ಈ ಪ್ರಕಾರಗಳ ಎಲ್ಲ ರೀತಿಯ ಚಿತ್ರಗಳನ್ನೂ ಸಾಕ್ಷ್ಯಚಿತ್ರ ಎಂದೇ ಕರೆಯುತ್ತಾರೆ.

ನಾನು ಮಾಡಿರುವ ಕೆಲವು ಚಿತ್ರಗಳು non-feature ಗುಂಪಿಗೆ ಸೇರುತ್ತವೆಯಾದರೂ ಅವನ್ನು ಡಾಕ್ಯುಮೆಂಟರಿ ಎಂದೇ ಕರೆದುಬಿಡುತ್ತಿದ್ದರು. ನನಗೆ ಮುಜುಗರ ಆಗುತ್ತಿತ್ತು. ಒಂದು ಸಭೆಯಲ್ಲಿ ಚಿತ್ರ ಪ್ರಕಾರಗಳ ಕುರಿತ ಉಪನ್ಯಾಸವನ್ನ ನಾನು ಮಾಡುವುದಿತ್ತು. ಹಿಂದಿನ ದಿನ ಪ್ರೊಫೆಸರ್ ಜಿವಿ ಅವರ ಮನೆಗೆ ಫೋನ್ ಮಾಡಿದೆ. ಅವರ ಪುತ್ರ ಫೋನ್ ತೆಗೆದುಕೊಂಡರು. ನನ್ನ ಸಮಸ್ಯೆಯನ್ನು ವಿವರಿಸಿ, ಕನ್ನಡದಲ್ಲಿ non-feature films ಗೆ ಒಂದು ನಿರ್ದಿಷ್ಟ ಪದ ಪುಂಜ ಸಾಧ್ಯವೇ? ಎಂದು ತಿಳಿಯಬೇಕಿತ್ತು ಎಂದೆ. ತಂದೆಗೆ ವಿಷಯ ತಿಳಿಸುತ್ತೇನೆ, ನಾನೇ ನಿಮಗೆ ನಾಳೆ ಫೋನ್ ಮಾಡುತ್ತೇನೆ ಎಂದರು.

ಮರುದಿನ ಫೋನ್ ಬಂತು. ಜಿವಿ ಅವರು ಬಹಳ ಮುತುವರ್ಜಿ ಮತ್ತು ಆಸಕ್ತಿಯಿಂದ ಸಾಕಷ್ಟು ತುಲನೆ ಮಾಡಿದರಂತೆ. ಬೆಳಿಗ್ಗೆ ಮಗನಿಗೆ ‘ಅಕಥಾ ಚಿತ್ರ’ ಎಂದು ಬಳಸಬಹುದು ಎಂದು ಅವರಿಗೆ ತಿಳಿಸು ಎಂದರಂತೆ. ಇಂತಹ ಹಿರಿಯರ ಜೊತೆ ನಾನೂ ಕಾಲವನ್ನು ಹಂಚಿಕೊಂಡಿದ್ದೇನೆ ಎನ್ನುವುದೇ ಖುಷಿಯ ವಿಚಾರ.

‍ಲೇಖಕರು Avadhi

19 April, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading