
Juzt Shafi
ಆತ್ಮಸಾಕ್ಷಿಯ ನ್ಯಾಯಾಲಯದಲ್ಲಿ
ಸಾಕ್ಷಿಯಿದೆ ಸಲ್ಮಾನ್
ಬೀಯಿಂಗ್ ಹ್ಯೂಮನ್ ಅಂದರೆ
ಅವುಗಳಿಗೆ ಮಾತು ಕಲಿಸುವುದು
#
ಒಂದು ಸ್ಟವ್, ಸ್ವಲ್ಪ ಅಕ್ಕಿ
ಮತ್ತೊಂದು ಚಾಪೆಗೆ
ಪಟ ಕ್ಲಿಕ್ಕಿಸಿ ನನ್ನಪ್ಪನ ಅವಮಾನಿಸಬೇಡ
ನಾನು ದುಡಿದು ಮರಳಿಸುತ್ತೇನೆ.
#
ಅಗೋಚರವಾಗಿರುವ ಕವಿಯ
ಕವಿತೆಯೊಂದಿಗಷ್ಟೇ ನಂಟಿರಬೇಕು
ಬಗಲಿನವರರ ಬಗೆಗೆಲ್ಲ
ನಾವು ದೂರುಗಳನ್ನೇ ಹೊಂದಿರುತ್ತೇವೆ
#
ಸಂಜೆಯಾದರೆ ಕತ್ತಲೂ ದಿಟ
ಕತ್ತಲಾದರೆ ಕ್ರೌರ್ಯವೂ ದಿಟ
ನೆನಪು ಹೊತ್ತು ಸಾಗುವವರ ಸವಾಲುಗಳು
ಹಗಲಿನಲ್ಲೂ ಚರ್ಚೆಯಾಗದು ದಿಟ
#
ನಿನ್ನ ಹಳೆಯ ಕವಿತೆ ಸಾಲೊಂದನ್ನು
ಹಿತಶತ್ರುವೊಬ್ಬ ಎತ್ತಿಟ್ಟುಕೊಂಡಿದ್ದಾನೆ
ನಾನು ಲವಲವಿಕೆಯಿಂದಿರುವಾಗೆಲ್ಲ
ಆತ ಅದನ್ನು ಜೋರಾಗಿ ಓದುತ್ತಾನೆ





ಮನ ಮುಟ್ಟುವಂತಿದೆ..
ನಿನ್ನ ಹಳೆಯ ಕವಿತೆ ಸಾಲೊಂದನ್ನು
ಹಿತಶತ್ರುವೊಬ್ಬ ಎತ್ತಿಟ್ಟುಕೊಂಡಿದ್ದಾನೆ
ನಾನು ಲವಲವಿಕೆಯಿಂದಿರುವಾಗೆಲ್ಲ
ಆತ ಅದನ್ನು ಜೋರಾಗಿ ಓದುತ್ತಾನೆ
ವಾವ್..ಸೂಪರ್
ಎಂತಹ ಸೆಳೆತ, ಕವಿತೆಯ ಆಳದಲ್ಲಿ, ವ್ಹಾ.. ಬಹಳ ಚೆನ್ನಾಗಿದೆ