ಪಂಚರಂಗಿ ಹಾಡುಗಳು,
ಪಂಚರ್ ಅಂಗಡಿ ಟೈರುಗಳು,
ಏಳೋ ಎಂಟೋ ಸ್ವರಗಳು,
ಎಲ್ಲಾ ಬಿಟ್ಟಿ ಪದಗಳು,
ಮನೆ ಮೇಲೆ ವಾಟರ್ ಟ್ಯಾಂಕುಗಳು.
ಬೆಣ್ಣೆ ಬಿಸ್ಕತ್ ಚಕ್ಲಿಗಳು,
ಅಮ್ಮ ಅಪ್ಪ ಮಕ್ಲುಗಳು,
ಇನ್ನು ಹಾಡು ಕೇಳ್ತಾ ಇದ್ರೆ ಥ್ಯಾನ್ಕ್ಸುಗಳು.
ಪಂಚರಂಗಿ ಹೂವುಗಳು,
ಒಂಚೂರ್ ನೀವು ನಾವುಗಳು,
ಏನೋ ರಿಲೀಶನ್-ಗಳು,
ಎಂಥ ಕನೆಕ್ಷನ್-ಗಳು,
ಎಲ್ಲಾ ಟ್ವೆಂಟಿ ಟ್ವೆಂಟಿ ಮ್ಯಾಚುಗಳು.
ಎಲ್ರೂ ಒಳ್ಳೆ ಕೂಸುಗಳು,
ನಾವೇ ಮೆಂಟಲ್ ಕೇಸುಗಳು,
ನಾವು ನೆಡದಾದೋ ಸ್ಟ್ಯಾಚುಗಳು.
ಎಸ್ಸೆಸ್ಸೆಲ್ಸಿಗಳು,
ಪಿಯುಸಿಗಳು,
ಸಿಇಟಿಗಳು,
ಎಂಜಿನೀಯರಂಗು, ಪಂಜಿನೆಯರಿಂಗು, ಮೆಡಿಕಲ್-ಗಳು.
ಹಲ್ಲು ಕಿವಿ ಮೂಗು ಬಾಯಿ ಡಾಕ್ಟರ್-ಗಳು,
ಕೈ ಬೀಸಿ ಕರೆದು ಕೆರದಲ್ಲಿ ಹೊಡೆವ ಸಿಲಬಸ್ಸುಗಳು,
ಪಾಸ್ ಮಾಡಲು ಮನಸೇ ಬಾರದ ಕೋರ್ಸ್-ಗಳು.
ಕಷ್ಟದ ಸೀಟುಗಳು,
ಗುತ್ತಿಗೆ ಡೊನೇಶನ್ ಗಳು,
ಸತ್ತರು ಪೇರೆಂಟ್ಸ್-ಗಳು,
ಇದ್ದರು ಸ್ಟೂಡೆಂಟ್ಸ್-ಗಳು,
ಕಿಲಿ ಕಿಲಿ ಕಿಲಿ ನಗುವ ಕಾಲೇಜುಗಳು,
ಯಸ್ ಸರ್ ನೋ ಸರ್ ಅಟೆಂಡೆನ್ಸುಗಳು,
ಕ್ಲಾಸ್ ರೂಮುಗಳು.
ಡೆಸ್ಕಿನ ಮೇಲೆ ಐ ಲವ್ ಯು ಸ್ಮಿತ, ಮಾಲಿನಿ, ಪ್ರಿಯ ಎಂಬ ಬರಹಗಳು,
ಬ್ಲಾಕ್ ಬೋರ್ಡ್ ಮೇಲೆ ಕೆಮಿಸ್ಟರಿ ಆಲ್ಜೀಬ್ರಾ ವಿರಹಗಳು,
ಹೊಸ ಹುಡುಗಿಯರ ಮಿಡಿತಗಳು,
ಹಳೆ ಹೃದಯಗಳ ಕೆರೆತಗಳು,
ಗುರುವರ್ಯ, ಇವತ್ತಿಗಿಷ್ಟು ಸಾಕು, ನಾನು ತಿರುಗಿ ನಾಳೆ ಮಾತಾಡಲೇ?
ಪೆನ್ಸಿಲುಗಳು,
ರಬ್ಬರುಗಳು,
ರಿಬ್ಬನ್ನುಗಳು,
ಮುದ್ದು ಜಡೆಗಳು.
ಬಿಲ್ಡಿಂಗುಗಳು,
ಹೆಲ್ಮೆಟ್ಟುಗಳು,
ಮಳೆಗಾಲಗಳು,
ಒದ್ದೆ ಕೊಡೆಗಳು.
ಮ್ಯಾರೇಜ್ ಬ್ಯುರೋಗಳು,
ಹೂವು ಮುಡಿದ ಚೌಲ್ಟ್ರಿಗಳು,
ಹೆರಿಗೆ ವಾರ್ಡುಗಳು,
ಸಾಂಬ್ರಾಣಿಗಳು.
ಪಂಚರಂಗಿ ಹೂವುಗಳು,
ಒಂಚೂರ್ ನೀವು ನಾವುಗಳು ಗಳು ಗಳು ಗಳು…
ಕೊನೆ ಪೇಜಲ್ಲಿ ಬರೆದ ಪ್ರಿನ್ಸಿಪಾಲ್ ಕಾರ್ಟೂನ್ ಗಳು,
ಹಳೇ ಬುಕ್ಕು, ಹೊಸಾ ರಟ್ಟುಗಳು,
ಟ್ಯುಶನ್-ಗಳು,
ಎಕ್ಸಾಮ್-ಗಳು,
ಡಿಬಾರ್-ಗಳು,
ಡಿಸ್-ಮಿಸ್ -ಗಳು,
ಪೇಪರ್ ದೋಣಿಯ ಮುಳುಗಡೆಗಳು.
ಮಾರ್ಕ್ಸ್ ಕಾರ್ಡುಗಳು,
ಅಪ್ಪ ಅಮ್ಮಂದಿರ ಸೈನುಗಳು,
ಉಳಕೊಂಡ ಸಬ್ಜೆಕ್ಟ್-ಗಳು,
ಮಾಡ್ಕೊಂಡ ಎಡವಟ್ಟುಗಳು.
ಕಾಲೇಜ್ ಡೇಗಳು,
ಲವ್ ಸ್ಟಾರ್ಟಿಂಗ್-ಗಳು,
ಎಂಡಿಂಗ್-ಗಳು,
ಇಂಟರ್ವ್ಯೂಗಳು,
ಕೆಲಸಗಳು,
ಸಂಬಳಗಳು.
ಕಾಲೇಜಲ್ಲೇ ಉಳಿವ ಹಳೇ ಕನಸುಗಳು,
ಆಫೀಸಲ್ಲಿ ಕೊಲ್ಲುವ ಹೊಸಾ ಕೆಲಸಗಳು.
ಇಂಥ ಸಂಧರ್ಬದಲ್ಲಿ ನಾವು ಓದುತ್ತೇವೆ, ನೀವು ಪಾಠ ಮಾಡುತಿದ್ದಿರಿ.
ಗುರುವರ್ಯ, ಕ್ಲಾಸು ಬೋರು, ನಾ ತಿರುಗಿ ನಿದ್ದೆ ಮಾಡಲೇ?
ಗಂಡ್ಮಕ್ಲುಗಳು, ಆಹಾ,
ಹೆಣ್ಮಕ್ಲುಗಳು, ಓಹೋ,
ಕರೆಂಟುಗಳು,
ಕಾಗೆ ಕಾಲ್-ಗಳು, ಆಗ್ಲಪ್ಪ.
ಸಂಬಂಧಗಳು, ಹುಂ,
ಗಿಂಬಂಧಗಳು, ಆಮೇಲೆ,
ಸಂಸಾರಗಳು,
ರಾಗಿ ಬಾಲ್-ಗಳು, ಓಹೋ,
ಆತ್ಮ ಶಾಂತಿ ಅಂಗಡಿಗಳು,
ದೇವರ ಮೊಬೈಲ್ ನಂಬರ್-ಗಳು,
ಹಪ್ಳ ಸಂಡಿಗೆ, ಹುಟ್ಟು ಸಾವು ಸ್ಯಾಂಪಲ್-ಗಳು
ಎಲ್ಲಾ ಮಹಾ ಬೋರು ಗಳು, ಹುಂ ಹುಂ,
ಒಡೆದ ಟೆನ್ನಿಸ್ ಬಾಲುಗಳು, ಆ…ಯ್ತು ಬಿಡಪ್ಪ,
ಹೊಸ ಹೊಟ್ಟೆ ಉರಿಗಳು,
ಹೇಳು ತಪ್ಪು ಸರಿಗಳು,
ನಗುವುದು ಮರೆತಿವೆ ಹೃದಯಗಳು…, ಚೆ ಚೆ,
ಒಂದು ಒಳ್ಳೆ ನಗುವಿಗೆ, ಮೀನಿಂಗ್ ಫುಲ್ ಬದುಕಿಗೆ ಎಲ್ಲಯ್ತಪ್ಪ ಇಲ್ಲಿ ಜಾಗಗಳು.
ಪಂಚರಂಗಿ ಹೂವುಗಳು.
(ಕಾವ್ಯ ಕವನ)
ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





ಮನಸ್ಸಿಗೆ ಮುದ ನೀಡೋ ಬ್ಲಾಗುಗಳು
ಕೆಲಸಕ್ಕೆ ಬಾರದ ಜಾತಿ ಜಗಳಗಳು
ಅಮೆರಿಕಾದಲ್ಲಿ ಅಕ್ಕ ಸಮ್ಮೇಳನಗಳು
ಒಬಾಮ ಅಣ್ಣನ ಹೊರಗುತ್ತಿಗೆ ರಗಳೆಗಳು
ರಾ.ಚಂ ಗೌಡರ ರಾಜೀನಾಮೆಗಳು
ಎಲ್ಲಾ ಯೋಗರಾಜ ಭಟ್ಟರ ಆಶೀರ್ವಾದಗಳು……….
ಸಂದೀಪ್, ತಮ್ಮ ಪಾದದ ಜೆರಾಕ್ಸ್ ಪ್ರತಿಯೊಂದನ್ನು ಕೂಡಲೇ ಮೇಲ್ ಮಾಡಿ ಪ್ಲೀಸ್ …
yakri shama papa sandeep en madidru 🙂
tumba channa g i idhe