ಅವಳೇ ಹಾಗೆ
ಎಲ್ಲೆಂದರಲ್ಲಿ ಹೇಗಿದ್ದರೆ ಹಾಗೆ
ಆವರಿಸುವ ಮಾಯೆ!
ಹೆಜ್ಜೆ ಜಾಡನು ಹುಡುಕುತ್ತಾ
ಎದೆಯ ಬಂಜರಲೆಲ್ಲ ಅಲೆದೆ,
ಮೆದುಳ ಪಕ್ಕೆಗೆ ಒದ್ದು
ಒಳಗಣ್ಣ ಹರೆವಂತೆ ತಿಕ್ಕಿದೆ
ರೂಪವೂ ಗುರುತೂ ಹತ್ತಲಿಲ್ಲ!
ಗತ ಜನ್ಮದ ಸವಕಲಲೆಲ್ಲೋ
ಅವಳು ಮಾತ್ರ ನನಗೆ
ಕಳಚಿಕೊಂಡ ಕೊಂಡಿ…
ಮತ್ತೆ ಮತ್ತೆನೆನಪಾಗುವಳು
ಅವಳು,
ಯಾವುದೋ ನಿಲುಕಿನಲ್ಲಿ?
ಒಮ್ಮೆ ಮುಂಜಾವಿನಂತೆ
ಮಗದೊಮ್ಮೆ ಕಾರಿರುಳಿನಂತೆ!








ಬದರಿನಾಥರ ಕವನಗಳೇ..ಹಾಗೆ..
ಮತ್ತೇರಿಸುತ್ತವೆ..
ರಾತ್ರಿ ಕಂಡ ಕನಸೂ ಕೂಡ ಕೆಲವೊಮ್ಮೆ ಹೀಗೆ. ಒಮ್ಮೆ ನೆನಪಾದಂತೆ, ಮಗದೊಮ್ಮೆ ಮರೆತಂತೆ. ಸಾರ್ ತುಂಬಾ ಚೆನ್ನಾಗಿದೆ.
ಸೂಪರ್ ಕವಿತೆ!!
ಮೊದಲಿಗೆ ನನ್ನ ಅಙ್ಞಾತ, ಅನಾಥ ಬ್ಲಾಗನ್ನು ಅವಧಿಯಲ್ಲಿ ಪರಿಚಯಿಸಿದ ಮೋಹನ್ ಸಾರ್ ನಿಮಗೆ ನಮೋ ನಮಃ
Very nice..
Lovely.Lively.
chennagide.