ಅಂತಿಮ ದಿನಾಂಕ ಜನವರಿ 5!

ಈಗ ಇಲ್ಲಿ ಹಾಕಿರುವ ಐದು ವಿನ್ಯಾಸಗಳೂ ಸೇರಿದರೆ ಇದುವರೆಗೆ ಒಟ್ಟು 45 ಮುಖಪುಟಗಳನ್ನು ನೋಡಿದ್ದೀರಿ. ಛಂದ ಪುಸ್ತಕದ ಇನ್ಬಾಕ್ಸ್ನಲ್ಲಿ ಇನ್ನೂ ಮೂವತ್ತು ಕಾದುಕೂತಿವೆ. ಸಂತಸದ ಸುದ್ದಿಯೇನೆಂದರೆ ಇಂದು ಮುಗಿಯಬೇಕಿದ್ದ ಗಡುವನ್ನು ವಿಸ್ತರಿಸಲಾಗಿದೆ.
ಯಾವುದೇ ಕಾರಣಕ್ಕೆ ನೀವು ನಿಮ್ಮ ವಿನ್ಯಾಸವನ್ನು ಪೂರ್ಣಗೊಳಿಸಲಾಗದಿದ್ದಲ್ಲಿ, ಚಿಂತಿಸಬೇಕಿಲ್ಲ. ಮುಂದಿನ ಐದು ದಿನ ನಿಮಗೆ ಅವಕಾಶವಿದೆ. ಮಾಡಿ ಕಳಿಸಿ. ಜನವರಿ ೫ನೇ ತಾರೀಖಿನೊಳಗೆ ನಮ್ಮನ್ನು ತಲುಪುವ ಎಲ್ಲ ವಿನ್ಯಾಸಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದು. ಹೊಸ ವರ್ಷದ ಶುಭಾಶಯಗಳು.
~ಛಂದಪುಸ್ತಕ
ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





0 Comments