ಪೋಲೇನಹಳ್ಳಿ ರಮೇಶ್
ಕೆಂಡದಂತಹ ಕವಿಗೆ
ಹೊಟ್ಟೆಯಲಿ
ಇತ್ತು
ಬೆಟ್ಟದಷ್ಟು ನೋವು
ಬದುಕಿಗೆ ಹತ್ತಿದೆ ಗೆದ್ದಲು
ಜಟಕಾ ಬಂಡಿ ಅಲ್ಲ ರೂಪಕ
ಹಳಿ
ಸುಡುವ ಕಲ್ಲಿದ್ದಲು
ಚಿತ್ತ ಹುತ್ತ ಕಟ್ಟುವ ಮುನ್ನ
ಆಗಲಿ
ಹೃದಯ
ಸಾರಾಸಗಟು ಬೆತ್ತಲು.

ಚಪ್ಪಲಿ ಹೊಲೆಯುವವನ
ಬರಿಕಾಲು ಬಲ್ಲದು
ಮುಳ್ಳಿನ ಆಳ
ಮೆಟ್ಟಿದವ ಅಲ್ಲ
ನೋವ ಮರೆಸುವ
ನವಿರು ಕಾವ್ಯ
ಒಗ್ಗರಣೆ
ಬರೀ ಚಿತಾವಣೆ
ಕೆಂಡ ಆರಿಸಿ
ಇದ್ದಿಲ ಮಾರುವ ಕೆಲಸ
ಉದ್ದಿಮೆ
ಅಲ್ಲ ಸುಧಾರಣೆ.






ಕೆಂಡ ಆರಿಸಿ
ಇದ್ದಿಲು ಮಾರುವ ಕೆಲಸ
ಉದ್ದಿಮೆ ಅಲ್ಲ
ಸುಧಾರಣೆ
– ಎಲ್ಲಿರುತ್ತವೆ ಇಂತಹ ಸಾಲುಗಳು!!
ಮತ್ತೆ ಮತ್ತೆ ಓದಲೇಬೇಕೆಂದು ಹಠಕ್ಕೆ ಕೂರುವ ಕವಿತೆ.