
ನೂರುಲ್ಲಾ ತ್ಯಾಮಗೊಂಡ್ಲು
ಕಣ್ಣ ಚಿಟ್ಟೆಯ ನೋವನು ಕಡೆದ ಭಾವದಲಿ ಬಣ್ಣಿಸಲಾರೆ ಇನ್ನು
ಸ್ವರ್ಗಕ್ಕೂ ಹಾರುವ ಗಂಧರ್ವದ ಕಲ್ಪನೆಯ ಶೋಧದಲಿ ಹಾರಲಾರೆ ಇನ್ನು
ಮಣ್ಣ ಗರ್ಭದಲಿ ಪಿಸು ನುಡಿಯೊಂದು ಹೊರಳುತಿದೆ
ಆಕಾಶ ತುತ್ತ ತುದಿಯಲಿ ನಿಂತು ಪೀಚಿನ ದನಿಯನ್ನು ಆಲಿಸಲಾರೆ ಇನ್ನು
ಹೃದಯಕ್ಕಿಂತ ಮನಸ್ಸಿನ ವಾಸನೆ ಹಿತವಲ್ಲ

ಕರುಳ ಕಾರುಣ್ಯವ ತೆಗಳಿ ಯಾವ ಹಾಡು ಹಾಡಲಾರೆ ಇನ್ನು
ಅಮ್ಮನ ಕೈ ಬೆರಳಿನ ಮೇಲೆ ಚಂದ್ರ ಜೋತು ಬೀಳಲಿ ಬೇಕಾದರೆ
ಅಮ್ಮನ ಎದೆ ಹಾಲಿನ ಬಿಸಿಯುಸಿರಕ್ಕಿಂತ ದೂರ ಇರಲಾರೆ ಇನ್ನು
ಜೀವನ ಪ್ರೀತಿಯನ್ನು ಆಕಾಶ ತೋರಿಸಿ ಬಣ್ಣಿಸಲಾಗದು ‘ಸಾಘರ್’
ಬದುಕೆಂದರೆ ನೆಲದ ಪ್ರೀತಿ, ಇದಿರು ಹಳಿಯಲಾರೆ ಇನ್ನು






ತುಂಬಾ ಚೆಂದದ ಗಝಲ್..ಅರ್ಥಪೂರ್ಣ ಭಾವಾಭಿವ್ಯತಿ
ತುಂಬ ಧನ್ಯವಾದಗಳು ಬೀಜೀ…