ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೀವೇ ದೂರಿರಿ ಸಾಧ್ಯವಾದರೆ..

ದೂರಿರಿ ನೀವೇ..

divya anjanappa

ದಿವ್ಯ ಆಂಜನಪ್ಪ

womanನಾನೇ ದೂರಬೇಕಾದ್ದ
ಅಷ್ಟೂ ಅಂಶಗಳನ್ನು
ನಿಮ್ಮಲ್ಲಿ ಕಾಣುತ್ತೇನೆ
ನಾನೀಗ ನಿಮ್ಮಂತೆ ಆಗಬಯಸುತ್ತೇನೆ

ಪ್ರಾಮಾಣಿಕ ಪ್ರೇಮಿಯಾಗಿ
ವಿಹರಿಸಿಯೂ ಕರಗದಂತೆ ಉಳಿದು
ಬನಗಳಲಿ ಸುತ್ತಿ ಬರುತ್ತೇನೆ
ಹೂಗಳ ಕಂಡೆಣಿಸಿ…
ಆಘ್ರಾಣಿಸಿ ತಾಗದಂತೆ ನಿಂತು..

ಬಂಧಿತ ಕೈದಿಯಾಗಿ
ನಿಂತು ಕೈ ಚಾಚುವೆಯಷ್ಟೇ
ದೂರದ ನೋಟಕೆ ಮೈಮಾಟಕೆ
ಅಪರಾಧವೆಸಗದೆ ಹೀಗೆ ನಿಷ್ಠೆಯಿಂದ

ಮುಖ್ಯವಾಗಿ ಮುಖ್ಯವಾಗಿಸಿ
ನಿಮ್ಮನ್ನೇ ನಿಮ್ಮಂತೆಯೇ ನಾನು
ಒಪ್ಪುತೇನಷ್ಟೇ ಅಪ್ಪಿಕೊಳ್ಳದೆ
ಯಾವುದೇ ವೃತ್ತದ ಕೆಂದ್ರವಾಗದೆ…

ನಾನೇ ದೂರಬೇಕಾದ್ದ
ಅಷ್ಟೂ ಅಂಶಗಳನ್ನು
ನಿಮ್ಮಲ್ಲಿ ಕಾಣುತ್ತೇನೆ
ನೀವೇ ದೂರಿರಿ ಸಾಧ್ಯವಾದರೆ
ನಾನೀಗ ನಿಮ್ಮಂತೆ ಆಗಬಯಸುತ್ತೇನೆ

‍ಲೇಖಕರು admin

4 March, 2016

1 Comment

  1. sangeetha raviraj

    ಚೆನ್ನಾಗಿದೆ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading