ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೀರ ಮೇಲಿನ ನೀರವ ಯಾನದ ಸಂಗಾತಿ..

ಅಜಯ್ ಅಂಗಡಿ

**

ದೋಣಿ! ತೇಲಿಸಬಲ್ಲದು, ಮುಳುಗಿಸಲೂಬಹುದು

ಎರಡೂ ಸಾಧ್ಯ ಸಂದರ್ಭಾನುಸಾರ.

ತೇಲಿದರೂ ಮುಳುಗುವಂತೆ

ಮುಳುಗಿದರೂ ತೇಲಿದಂತೆ

ಭಾಸವಾಗುವುದು ಒಮ್ಮೊಮ್ಮೆ.

ನೀರ ಮೇಲಿನ ನೀರವ ಯಾನದ ಸಂಗಾತಿ

ನಡುವೆ ಸುಳಿವ ಸುಳಿಗಳ ಎದುರಾಗುವ

ಅಲೆಗಳ ದಾಟಿ ಸಾಗಬೇಕು ದೂರ ತೀರಕೆ.

ಒಂದೊಮ್ಮೆ ಎಚ್ಚರ ತಪ್ಪಿದರೆ, ಎಡವಿದರೆ

ಮುಗುಚುವುದು ದೋಣಿ, ಬದುಕಿನ ಸಮೇತ!

ನೀರ ಮೇಲಿರಲು ತೀರದ ಹಂಬಲ,

ತೀರದಿ ನಿಂತಾಗ ನೀರಿಗಿಳಿವ ಕಾತರ.

ದೋಣಿಯ ಬದುಕು ಹೀಗೆ,

ನಿರಂತರ ಸ್ಥಿತ್ಯಂತರಗಳ ಸುಳಿಯಾಚೆ

ತೇಲುತ ಗಮ್ಯವ ತಲುಪುವ ಮಹಾಪಯಣ.

‍ಲೇಖಕರು Admin MM

1 June, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading