ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೀನು ನೀಲಿಯನೇಕೆ ಈ ಪರಿ ಪ್ರೀತಿಸುತ್ತೀಯೆ..

ಬಣ್ಣ

ಪ್ರಕಾಶ್ ಪೊನ್ನಾಚಿ

ನನಗೆ ಗೊತ್ತಿಲ್ಲ
ನೀನು ನೀಲಿಯನೇಕೆ ಈ ಪರಿ
ಪ್ರೀತಿಸುತ್ತೀಯೆಂದು

ಎಲ್ಲ ಬಣ್ಣಗಳಿಗೂ
ಒಂದೊಂದು ಅಸ್ತಿತ್ವವಿದೆ ನಿಜ
ಈ ನೀಲಿಯಲಿ ತುಸು ಹೆಚ್ಚು
ಅದು ನಿನಗೆ ಕಂಡದ್ದೂ ನೀ ಮೆಚ್ಚಿದ್ದು
ಎರಡೂ ಸೋಜಿಗವಲ್ಲ

ನೀನು ಯಾವಾಗಲೂ ನಿರೂಪಿಸುತ್ತೀಯ
ಬಣ್ಣಗಳೆಂದರೆ ಬದುಕೇ ಆದ ಕಥೆ
ಆ ಬದುಕಿಗೆ ಹೆಣಗಾಡುವ ವ್ಯಥೆ
ಒಟ್ಟಿನಲ್ಲಿ ಸಾಗರದ ನೀಲಿಗೂ
ಆಕಾಶದ ನೀಲಿಗೂ ನಂಟು ಬೆಸೆದದ್ದು ಮಾತ್ರ
ನಿನ್ನ ಖಯಾಲಿಗಳೇ ಎಂಬುದಂತು ಖರೆ

ನನ್ನ ಕಣ್ಣಿಗೆ
ಕಪ್ಪುಗಳೇ ಇಷ್ಟವಾಗುವುದಕ್ಕೆ
ನೂರು ಕಾರಣಗಳನು ನಾ ಹುಡುಕಲಾರೆ
ಆದರೇನು
ಬಿಳಿಯಲ್ಲೇ ಲೀನವಾದ ಎಲ್ಲಾ ಬಣ್ಣಗಳು
ಸಾಲಗಾರವೆ
ಅವು ನಿನ್ನ ನೀಲಿಯೂ
ನನ್ನ ಕಪ್ಪೂ

ಕುಂಚದಲದ್ದಿದರೆ ಎಲ್ಲವೂ ನವಿರು
ಈಗ
ಅವರಿಗೆ ಹಸಿರೋ ಕೆಂಪೋ ನೇರಳೆಯೋ
ನನಗೆ ನನ್ನ ಕಪ್ಪು
ನಿನಗೆ ನಿನ್ನ ನೀಲಿ
ಒಟ್ಟಿನಲ್ಲಿ ಹಾಳೆಗಳಿಗೋ ಮತ್ತೆ ಮತ್ತೆ
ಬೆತ್ತಲಾಗುವ ತವಕ

ಏಳರಿಂದಾಚೆ ಮತ್ತಷ್ಟು
ಕಾಣಸಿಗುವುದಿಲ್ಲ, ಸಿಕ್ಕರೆ ಅವು
ಬಣ್ಣವೂ ಅಲ್ಲ
ಮತ್ತೇನು??
ನಿನ್ನ ನೀಲಿಗೆ ಸಂಗಾತಿಯೆ?
ಇಲ್ಲ ನನ್ನದೇ ಕಪ್ಪಿಗೆ ವೈರಿಯೇ?
ಗೊತ್ತಿಲ್ಲ…!!

‍ಲೇಖಕರು avadhi

2 June, 2018

2 Comments

  1. ಪ್ರಕಾಶ್ ಪೊನ್ನಾಚಿ

    ಧನ್ಯವಾದಗಳು ಅವಧಿ..

  2. ಸಂಧ್ಯಾರಾಣಿ ಪಿಎಸ್

    ಚಂದ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading