ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೀನಲ್ಲದೇ ಇಲ್ಲಿ ಕಾಣುತ್ತಿಲ್ಲವಲ್ಲ ಇತ್ತಿತ್ತಲಾಗಿ..

ಸಿದ್ಧರಾಮ ಹೊನ್ಕಲ್

ಮಿಸ್ರಾ- ಅನುಸೂಯಾ ಜಾಗೀರದಾರ

ನಾ ಪ್ರೇಮ ಪಾಶದಲ್ಲಿ ಒಲವು ನಸೀಬಿನಲ್ಲಿಲ್ಲ ಇತ್ತಿತ್ತಲಾಗಿ
ನೀನಲ್ಲದೇ ಇಲ್ಲಿ ಬೇರೆನೂ ಕಾಣುತ್ತಿಲ್ಲವಲ್ಲ ಇತ್ತಿತ್ತಲಾಗಿ

ಯಾವ ತನುವ ಸೇರಿ ಮರೆತಿರಬಹುದೆಂಬ ಭಯ
ಹುಚ್ಚ ತಾ ಹೌದೆಂದು ಉತ್ತರಿಸುವನಲ್ಲ ಇತ್ತಿತ್ತಲಾಗಿ

ಯಾಕೆ ಹೀಗಾದಳೆಂದು ಸದಾ ತನ್ನೊಳಗೆ ತಾ ಧ್ಯಾನದಲಿ
ಅದೆಷ್ಟು ಸಲ ತಾ ಮೂರ್ಖ ಆಗಿರಬಹುದಲ್ಲ ಇತ್ತಿತ್ತಲಾಗಿ

ಆ ಮೌನದಲೇ ಕೊಂದವಳ ಬಗ್ಗೆ ಕಳವಳವು ಅದೇಕೋ
ಏನೋ ಕಷ್ಟದಲಿಹಳೆಂಬ ಚಿಂತೆ ಸುಖವನಿಸುತಿಲ್ಲ ಇತ್ತಿತ್ತಲಾಗಿ

ನಮಗೆ ತಿಳಿದಂತೆ ನಾವು ಸತ್ಯ ಏನಿದಿಯೋ ಬಲ್ಲವರಾರು
ಹೊನ್ನು’ಮರೆಯಲೆಂದರೂ ಮರೆಯಲಾಗುತ್ತಿಲ್ಲ ಇತ್ತಿತ್ತಲಾಗಿ

‍ಲೇಖಕರು Admin

30 May, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading