ಎಂ ಆರ್ ಕಮಲ
ಇಂದು ನಿಸಾರರ 80ನೆಯ ಹುಟ್ಟು ಹಬ್ಬ. ಡಿಗ್ರಿಯಲ್ಲಿ ನಿಸಾರರ ಆಯ್ದ ಕವಿತೆಗಳು ನನಗೆ ಪಠ್ಯವಾಗಿತ್ತು. ಅವರ ಕಾವ್ಯದ ಆಕರ್ಷಣೆಗೆ ಸಿಲುಕಿ ಕವಿತೆ ಬರೆಯಲು ಆರಂಭಿಸಿದೆ. ಈ ಕವಿತೆಯನ್ನು ಹತ್ತು ವರ್ಷದ ಹಿಂದೆ ಅವರ ಹುಟ್ಟು ಹಬ್ಬದ ದಿನ ಬರೆದು ಓದಿದ್ದೆ. ಇಲ್ಲಿರುವ ಭಾವಚಿತ್ರ ಇನ್ನೂ ಹಳೆಯದು.ಇದರ ವಿಶೇಷವೆಂದರೆ ಇಲ್ಲಿ ನಿಸಾರರ ಜೊತೆ ಶಂಕರ ಮೊಕಾಶಿ ಪುಣೇಕರ ಮತ್ತು ಕಾವ್ಯಾನಂದ(ಸಿಧ್ಧಯ್ಯ ಪುರಾಣಿಕ) ಇದ್ದಾರೆ.
ನಿಸಾರ್ – ಎಪ್ಪತ್ತರ ಹೊಸ್ತಿಲಲ್ಲಿ

ಎಪ್ಪತ್ತರ ದಶಕದಲ್ಲಿ ಇಪ್ಪತ್ತರ ಹುಡುಗಿಯ
ಮನದಂಗಳದಲ್ಲಿ, ಕಾವ್ಯದ ಬಳ್ಳಿ
ನೆಟ್ಟ ನಿಸಾರರು ಎಪ್ಪತ್ತರ ಹೊಸ್ತಿಲಲ್ಲಿ!
ಬನ್ನಿ, ಶುಭ ಕೋರೋಣ, ನಿತ್ಯೋತ್ಸವದ ಕವಿಗೆ.
೨
ಎಷ್ಟು ಬಾರಿ, ನಿಮಗೆ ನಾನು ಆಭಾರಿ
ಪಾಠ ಹೇಳದೆಯೇ ಗುರುವಾದಿರಿ
ನವ್ಯದ ಕಗ್ಗತ್ತಲ ಕಾಡು, ಅರಿಯದೆ ಜಾಡು
ಅಲೆವ ನಮ್ಮ ಪಾಡು ಕಂಡವರಂತೆ
ಹರಿಸಿದಿರಿ ಸಿರಿ ಬೆಳಕಿನ ಹಾಡು
ಕಲ್ಲಲ್ಲಿ ಸಿರಿ, ನೆಲದಲ್ಲಿ ಝರಿ
ಕಾಡೊಳಗು ದಾರಿ ತೋರಿದಿರಿ.
ಅಡಿಗಡಿಗು ಕೌತುಕ, ಖುಷಿ,
ಅನಿರೀಕ್ಷ್ಯ ಘಟಿತಗಳನ್ನೂಡಿ
ಹರ್ಷದುಲ್ಲಾಸ ಹೊಮ್ಮಿಸಿ
ನಗೆಯ ಶಾಮಿಯಾನವನ್ನೇ ತೆರೆದಿರಿ!
೩
ಮಾತು, ಮಾತು, ಮಾತು, ಮಾತಿನದೇ ಗೈರತ್ತು
ಅವರಿವರ ಶೈಲಿಯ ದಗಲ್ಬಾಜಿಸಿ
ಗಬಕಾಯಿಸಿದ್ದಲ್ಲ, ಸ್ವಂತ ಮೆಹನತ್ತಿನ ಗಮ್ಮತ್ತು
ಸುತ್ತಲಿನ ಗಬ್ಬು ಗಲೀಜಿಗೆ
ಮೂಗು ಮನಸ್ಸನ್ನು ರಾಜಿಗೊಳಿಸದೆ
ಠಕ್ಕು ಮಾತುಗಳ ಕಕ್ಕುವವರ ದಬಾಯಿಸಿ
ಒಳಗೊಳಗೆ ಬೇರುಕೊಯ್ದು, ಮೇಲೆ
ನೀರು ಹೊಯ್ಯುವ ಜನರ ನಿಭಾಯಿಸಿ
ಎರಡು ಧರ್ಮಗಳ ನಡುವೆ ಸೇತುವಾದಿರಿ
೪
ಬೇರೆಯವರಂತಲ್ಲ ನೀವು
ಸಿಕ್ಕಿದಾಗೆಲ್ಲ ವಿಚಾರಿಸುತ್ತ ಕುಶಲವನ್ನು
ಕಣದಷ್ಟು ಗುಣ ಕಂಡರೂ
ಮಣದಷ್ಟು ಹೊಗಳಿಕೆ ಹೇರಿದಿರಿ
ಅಂದು ನನ್ನ ಕಾವ್ಯ ಪ್ರವೇಶಕ್ಕೆ
ಉಡುಗೊರೆಯಾಗಿ ನೀವೇ ಕೊಟ್ಟ
ಕಾವ್ಯ ಮಲ್ಲಿಗೆಯ ಅಂಟು ಚಿಗುರಿ,
ಹಬ್ಬಿ, ಹಂದರವಾಗಿ ರಾಶಿ ಹೂವು!
ಈ ಅಂಟಿನ ನಂಟು ಬಯಸಿ
ಬಂದವರೆಲ್ಲ ಮುರಿದೊಯ್ದಿದ್ದಾರೆ.
ತಮ್ಮ ಮನೆಯಂಗಳದಲ್ಲಿ ನೆಟ್ಟಿದ್ದಾರೆ
ಅಲ್ಲೆಲ್ಲ ಈಗ ಕಾವ್ಯದ್ದೇ ಸಂಭ್ರಮ
ಒಳ ಹೊರಗೆಲ್ಲ ಘಮ ಘಮ







ಎಂಬತ್ತರ ನಿಸಾರ್ ಅವರಿಗೆ ಅವರನ್ನು ಸ್ಮರಿಸಿ ಕವನ ಕೊಟ್ಟ ಎಂ.ಆರ್. ಕಮಲ ಮೇಡಂಗೆ ಥ್ಯಾಂಕ್ಸ್.
Very apt and timely!..
ಚೆನಾಗಿದೆ ಮೇಡಂ 🙂
ಮತ್ತೆ ಓದಿದಾಗಲು ಅದೇ ಘಮ !
ವಾಹ್!!
cnhennagide – olleya uduare kamala avare.
-narayan raichur
Beautiful and sensational.
ತುಂಬ ಚೆಂದದ ಸಾಲುಗಳು!! ಸದಾ ಇವರು ಹೀಗೆಯೇ ಪದ್ಯ ನನಗೆ ಪದವಿಯಲ್ಲಿತ್ತು