ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿರ್ವೀರ್ಯರಿಗೂ ನಿಯೋಗದ ಪಟ್ಟವಿದೆ….

ವಿದ್ಯಾ ಕುಂದರಗಿ

ಬಿಟ್ಟು ಬಿಡು ತ್ರೇತಾಯುಗದ ಮಾತು
ಈಗ ಮಧುಚಂದ್ರದಲ್ಲೇ
ವಿಚ್ಛೇದನದ ಹೊರಳು,
ಬೆಳದಿಂಗಳ ಬದುಕಿನ
ಶಾಂತ ಸರೋವರದಲ್ಲಿ
ಕಾರ್ಗತ್ತಲೆಯ ನೆರಳು.
 
ಅರ್ಥವಿದೆಯೇ ಆದರ್ಶಗಳಿಗೆ?
ಸುಶಿಕ್ಷಿತ ಸು(ಳ್ಳು)ವಿಚಾರಗಳಿಗೆ.
ಸುಂದರ ಹಂದರದಲ್ಲೂ
ಸುಳಿಗಾಳಿಗಳು,
ಹಣ, ಶಿಕ್ಷಣ, ಸೌಂದರ್ಯಗಳ
ಮೋಹದ ಬಲೆ ಇದ್ದಿದ್ದರೆ
ಸಮ್ಮೋಹನಾಸ್ತ್ರ ಕಾರ್ಯಗತವಾಗುತ್ತಿತ್ತು.
 
ಗಂಡರದ್ದಲ್ಲ ಈ ಪ್ರಶ್ನೆ…
ಅವರೊಳಗಿನ ಭಂಡತನದ್ದು
ಅದಕ್ಕೇ..
ಅದಕ್ಕೇ……. ನೋಡು
ನಿರ್ವೀರ್ಯರಿಗೂ ನಿಯೋಗದ
ಪಟ್ಟವಿದೆ.
ಕೃತಘ್ನ ,ಕುರುಡು ಕಾನೂನಿಗೂ
ಕಾವಲಿದೆ.
ಅಳ್ಳೆದೆ ಮೇಲೂ ಇಂದು
ಬುಲೆಟ್ ಫ್ರುಫ್ ಇದೆ.
 
ಸಂಸ್ಕೃತಿಯ ಜೀವಂತಿಕೆ
ಹೆಣ್ಣಿನಲ್ಲೇ ಮಡುಗಟ್ಟಿದ್ದರೂ,
‘ಗಂಡು ಮೆಟ್ಟಿದ……’ಎನ್ನುವಲ್ಲಿ
ಗಂಡಿಗೆನೇ ಬೇಡಿಕೆ-ಪೋಷಣೆ
ಎರಡೂ ಇದೆ.
 
ನಗು
ನಗು ಬರದೇ… ನಿನಗೆ… ?
ಝಾಡಿಸಿ ಬಿಡು ಜನಪದರ ಹಾಡು
ಮನದುಂಬಿ ನಕ್ಕುಬಿಡು,
ನಕ್ಕುಬಿಡೇ…ಗೆಳತಿ
ಆಷಾಡದ ಮೊದಲ ಮಳೆಯ ಹಾಗೆ…,
 
ಮೊದಲ ರಾತ್ರಿಯಲಿ
ಬಿಸಿ ಏರುವ ಮೊದಲೇ
ಭದ್ರವೆಂದುಕೊಂಡ ಬದುಕು
ಬರಿದಾಯಿತೆಂದು
ಗಲ್ಲಕ್ಕೆ ಕೈಕೊಟ್ಟು
ಹೀಗೆ ದಿಗ್ಭ್ರಮಿಯಾಗದೆ
ಕಲಿಯುಗದಲ್ಲೂ ನಕ್ಕುಬಿಡೆ….
ದ್ವಾಪರದ ದ್ರೌಪದಿಯ ಹಾಗೆ.
 
ಪ್ರಳವಾಗಲಿನ್ನೊಮ್ಮೆ
ಭೂತದಲಿ ಹೂತ
ಕುರುಕ್ಷ್ರೇತ್ರದ ಹಾಗೆ……
ಮಹಾ…ಭಾರತದ ಹಾಗೆ.

‍ಲೇಖಕರು avadhi

3 April, 2013

6 Comments

  1. ಡಾ.ಪ್ರಕಾಶ ಗ.ಖಾಡೆ

    ಮನ ಮಿಡಿದ ಕವಿತೆ.

  2. shanthi k.a.

    olleya kavite

  3. D.Ravivarma

    ಮೊದಲ ರಾತ್ರಿಯಲಿ
    ಬಿಸಿ ಏರುವ ಮೊದಲೇ
    ಭದ್ರವೆಂದುಕೊಂಡ ಬದುಕು
    ಬರಿದಾಯಿತೆಂದು
    ಗಲ್ಲಕ್ಕೆ ಕೈಕೊಟ್ಟು
    ಹೀಗೆ ದಿಗ್ಭ್ರಮಿಯಾಗದೆ
    ಕಲಿಯುಗದಲ್ಲೂ ನಕ್ಕುಬಿಡೆ….
    ದ್ವಾಪರದ ದ್ರೌಪದಿಯ ಹಾಗೆ…….manakaaduva bhaavanegalu ….

  4. mmshaik

    nice very nice..

  5. sharaamllur

    gandu mettid,,,,,salu vicharakke hacchitu

  6. sharada mumllur

    hennina manad maatugala pratidvani ide

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading