ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿರ್ಮಲಾ ಬಟ್ಟಲ ಕವಿತೆ- ಮಾತೆಯ ಹರಕೆ…

ಡಾ ನಿರ್ಮಲಾ ಬಟ್ಟಲ

ಹೇಗೆ ಬಿಡಲಿ ಮಗಳೆ
ನಿನ್ನ ಮಡಿಲಿನಿಂದ ಅಂಗಳಕೆ…?
ನೆರೆ ಮನೆಯ ಕಾಮುಕ
ಹದ್ದುಗಳು ನಿನ್ನ ಬಾಲ್ಯವನ್ನು ಕುಕ್ಕಿ
ಹಸಿಮಾಂಸ ತಿನ್ನಲು
ಕಾಯುತ್ತಿವೆ…!!

ಹೇಗೆ ಕಳಿಸಲಿ ಮಗಳೆ
ನಿನ್ನ ಮನೆಯಿಂದ ಶಾಲೆಗೆ..?
ಜ್ಞಾನ ವಿವೇಕ ನೀಡುವ
ಶಿಕ್ಷಕರೆ ಭಕ್ಷಕರಾಗಿ
ಹದಿ ಹರೆಯನ್ನು
ಹೊಸಕಿ ಹಾಕುತ್ತಿದ್ದಾರೆ…!!

ಹೇಗೆ ಕಳಿಸಲಿ ಮಗಳೆ
ನಿನ್ನ ಮಠ ಮಾನ್ಯಗಳ
ವಸತಿ ನಿಲಯಕ್ಕೆ..?
ಒಡಲ ಕುಡಿಗಳಂತೆ
ರಕ್ಷಿಸುವರೆ೦ದು ನಂಬಿದವರೆ
ಅರಿಯದಹರೆಯದ
ಮಕ್ಕಳ ಮಡಿಲು
ತುಂಬುವ ಹೇಯ
ಕೃತ್ಯವೆಸಗುತ್ತಿದ್ದಾರೆ…!!

ಬೆಚ್ಚಿ ಬಿದ್ದಿರುವೆ ಮಗಳೆ
ಭ್ರೂಣವಾಗಿ ಗರ್ಭದೊಳು
ಬೆಚ್ಚಗಿದ್ದು ಬಿಡು
ಹೆಜ್ಜೆ ಹೆಜ್ಜೆಗೂ ಹೆಣ್ತನಕೆ
ಹಿಂಸೆ ಕೊಡುವಕಾಮುಕರ
ನೆರಳು ಬೀಳದಿರಲಿ…!!

ಹುಟಿ ಬರುವೆಯಾದರೆ
ಕಾಳಿ ದುರ್ಗಿಯರಅವತಾರವಾಗಿ
ಕಾಮುಕರ ಹುಟ್ಟಡಗಿಸುವ
ದಿಟ್ಟೆಯಾಗಿ ಬಾ…!
ಸೋಗಲಾಡಿತನ ಸಭ್ಯತೆಯ
ಮುಖವಾಡಗಳ ಕಳಚುವ
ಪಣತೊಟ್ಟು ಬಾ…!!

‍ಲೇಖಕರು Admin

2 September, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading