ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿರೀಕ್ಷೆಯ ಬಿಸಿಯೇ ಸುಡಲಿ

ನಿರೀಕ್ಷೆಯ ಬಿಸಿಯೇ ಸುಡಲಿ

– ಡಾ ಎಚ್ ಎಸ್ ಅನುಪಮ

ಲಡಾಯಿ ಪ್ರಕಾಶನ ನೀನೆದ್ದು ಹೋಗಿ ದಿನಗಳೇ ಉರುಳಿದವು ಕೆನ್ನೆ ಮೇಲಿನ ಕುರುಹು ಹೊತ್ತು ನಿಂತಿದೆ ನೂರು ಪ್ರಶ್ನೆಗಳನ್ನು ಮೂಲೆಮೂಲೆ ಮಿನುಗುವ ಕಳೆದ ಕ್ಷಣಗಳ ನೆನಪು ಜೀವ ಬಿಗಿ ಹಿಡಿದು ಕಂಗೆಡಿಸಿದೆ ಮತ್ತೆ ಕಿಂಕಿಣಿಯ ಸದ್ದಿಗೆ ಎದೆ ಕಾತರಿಸಿದೆ *** ಆ ರಾತ್ರಿಯ ಏಕೈಕ ಸಾಕ್ಷಿ ನಸು ನಗುತ್ತಿದ್ದ ಎಳೆಯಚಂದ್ರ ಈ ಖಾಲಿ ಕೋಣೆ ನೋಡಲಾರದೇ ದಿನದಿನವೂ ಕ್ಷಯಿಸುತ್ತಿದ್ದಾನೆ ನಿನ್ನ ಬಳಿ ಅತ್ತು ಕರೆದು ದನಿಯ ಕರುಣೆಗೇ ಕರಗುವ ಮೋಡಗಳು ನನ್ನ ಬಳಿ ಬಿಕ್ಕುತ್ತ ಬಿಸಿಯುಸಿರು ಸುರಿಸುತ್ತಿವೆ.. *** ಎಲ್ಲ ಅಡೆತಡೆ ಒಡೆದು ಹಿಗ್ಗಿ ಒಳ ನುಗ್ಗಿರುವೆ ಗೆದ್ದ ನೆಲದಲಿ ಮತ್ತೆ ಮೂಡತಾವೆ ಹೆಜ್ಜೆ ಒಂಟಿ ಸಲಗದ ಮದವು ಇಳಿಯಲಾರದು ಬೇಗ ತಲ್ಲಣಿಸದಿರು ಕಂಡ್ಯ ತಾಳು ಮನವೆ *** ಮಧುರ ನೆನಪುಗಳೆಲ್ಲ ಸುಖದ ಕನಲಿಕೆಗಳಾಗಿರುವಾಗ ಯಾವ ನೆರಳೂ ನನಗೆ ಬೇಡ ನಿನ್ನ ನಿರೀಕ್ಷೆಯ ಬಿಸಿಯೇ ಸುಡಲಿ ಆ ಭೀಮ ಬಾಹುಗಳ ಬರಸೆಳೆವ ಅಪ್ಪುಗೆಯ ನೆನಪಿಗೆ ಇಕೋ ಈ ಮೌನ ರಾತ್ರಿಗಳ ಅರ್ಪಣೆ…]]>

‍ಲೇಖಕರು G

20 April, 2012

2 Comments

  1. D.RAVI VARMA

    ಮಧುರ ನೆನಪುಗಳೆಲ್ಲ
    ಸುಖದ ಕನಲಿಕೆಗಳಾಗಿರುವಾಗ
    ಯಾವ ನೆರಳೂ ನನಗೆ ಬೇಡ
    ನಿನ್ನ ನಿರೀಕ್ಷೆಯ ಬಿಸಿಯೇ ಸುಡಲಿ
    ಆ ಭೀಮ ಬಾಹುಗಳ
    ಬರಸೆಳೆವ ಅಪ್ಪುಗೆಯ ನೆನಪಿಗೆ
    ಇಕೋ ಈ ಮೌನ ರಾತ್ರಿಗಳ ಅರ್ಪಣೆ……….ತುಂಬಾ ಅರ್ಥಪೂರ್ಣವಾದ ಹಾಗು ಮೈನವಿರೇಳಿಸುವ ಹಾಗೆ ನಿಮ್ಮ ಭಾವನೆಗಳನ್ನು ಹೊರಹೊಮ್ಮಿವೆ. ಅಭಿನಂದನೆಗಳು
    ರವಿ ವರ್ಮ ಹೊಸಪೇಟೆ .

  2. Rashmi

    vastavadalli ee bhavanegalu irutta?
    beralenike janara manada mataage uliutteno ee bhavanegalu anta annisuttade……..
    Beautiful poem…….. Thank you………

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading