ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿಮಗೆಷ್ಟು ಜನ ಹೆಂಡಿರು-ಮಕ್ಕಳು?

bnpm0340

ಸಂತೋಷ ತಾಮ್ರಪರ್ಣಿ

ನಿಮಗೆಷ್ಟು ಜನ ಹೆಂಡಿರು-ಮಕ್ಕಳು?

ಇತ್ತೀಚಿನ ದಿನಗಳಲ್ಲಿ ಇದೊಂದು ದೊಡ್ಡ ಯಕ್ಷಪ್ರಶ್ನೆಯಂತೆ ನನ್ನನ್ನು ಕಾಡಲು ಶುರು ಮಾಡಿದೆ. ಅದೇನೆಂದರೆ, ಯಾರಾದರೂ ಹೊಸಬರು ಸಿಕ್ಕಾಗ, ಹೆಸರುಗಳನ್ನು ಬದಲಾಯಿಸಿಕೊಂಡ ನಂತರ ಸಾಮಾನ್ಯವಾಗಿ ಹಾರಿ ಬರುವ ಪ್ರಶ್ನೆ ‘ತಾವು ಎಲ್ಲಿಯವರು?’ ಎಂಬುದು. ಅದಲ್ಲದೆ, ನಿಮ್ಮದು ಯಾವ ಕಡೆ? ಯಾವ ಸೀಮೆ ನಿಮ್ಮದು? ಇವೆಲ್ಲ ಹೆಚ್ಚು ಕಡಿಮೆ ಅದೇ ಉತ್ತರವನ್ನು ಬಯಸುವ ಬೇರೆ ತೆರನಾದ ಪ್ರಶ್ನೆಗಳು.

ಇದು ಮೇಲ್ನೋಟಕ್ಕೆ ತುಂಬಾ ಸೀದಾ ಸಾದಾ ಪ್ರಶ್ನೆಯಂತೆ ಕಂಡರೂ ಇದರ ಆಳ ಮತ್ತು ಅಗಲ ತುಂಬಾ ದೊಡ್ಡದು. ಸಾಮಾನ್ಯವಾಗಿ ಹೊಸ ಪರಿಚಯವನ್ನು ಇನ್ನಷ್ಟು ಹತ್ತಿರಗೊಳಿಸಲಿಕ್ಕೆ ಈ ಪ್ರಶ್ನೆ ಕೇಳಲಾಗುತ್ತದೆಯಾದರೂ, ಇದರ ನಂತರ ಬರುವ ಪ್ರಶ್ನೆಗಳ ದೊಡ್ಡ ಸರಪಳಿಯೇ ಇರುವುದು ಕಾಣಿಸುವುದಿಲ್ಲ. ಉದಾಹರಣೆಗಾಗಿ, ಹೀಗೆ ಸಾಗುತ್ತೆ ಮಾತುಕತೆ. ನಾನು ಧಾರವಾಡದವನು ಅಂತ ಹೇಳಿದರೆ, ‘ಧಾರವಾಡದಲ್ಲಿ ಎಲ್ಲಿ’ ಎಂಬುದು ಮುಂದಿನ ಪ್ರಶ್ನೆ.
‘ಮಾಳಮಡ್ಡಿ’
‘ಮಾಳಮಡ್ಡಿಯಲ್ಲಿ ಎಲ್ಲಿ?’
‘ರಾಯರ ಮಠದ ಹತ್ತಿರ’
‘ಹೌದಾ? ಹಾಗಾದರೆ, ನೀವು ನಮಗೆ ಹತ್ತಿರದವರು ಅಂದಹಾಗೆ ಆಯ್ತು’
‘ಅಂದ್ರೆ ನೀವೂನು ಅಲ್ಲಿಯವರೇನಾ?
‘ನಾವು ಅಲ್ಲಿಯವರೇನಲ್ಲ; ಆದರೆ, ನಮ್ಮ ಚಿಕ್ಕಮ್ಮನ ನಾದಿನಿಯ ಮೂರನೇ ಮಗಳು ಅಲ್ಲೇ ರಾಯರ ಮಠದ ಹತ್ರಾನೆ ಇರೋದು’
‘….’
speech-bubbles-and-circles‘ ಅರಳಿಕಟ್ಟಿ ಅಂತ ಅವರ ಸರ್ ನೇಮ್. ನಿಮಗೆ ಗೊತ್ತಿರಬೇಕಲ್ಲ …’
ಊರು ಬಿಟ್ಟು ಇಪ್ಪತ್ತು ವರ್ಷ ಆದ್ಮೇಲೆ ಯಾವ ಕಟ್ಟೆ ತಾನೇ ನೆನಪಿರುತ್ತೆ ಹೇಳಿ? ಆದ್ರೆ, ಗೊತ್ತಿಲ್ಲಾ ಅಂದ್ರೆ ಹತ್ರ ಆಗೂವರ್ಗೂ ಬಿಡಲ್ಲ. ಗೊತ್ತಿದೆ ಅಂದ್ರೆ ನಾನು ಇನ್ನೂ ಹತ್ರ ಆಗ್ಬಿಡ್ತೀನಿ ಮತ್ತು ಬೇರೆ ತರಹದ ಪ್ರಶ್ನೆಗಳು ಶುರುವಾಗುತ್ತವೆ.

ಇಷ್ಟಕ್ಕೆ ತೃಪ್ತಿ ಇಲ್ಲಾ ಸ್ವಾಮೀ ಜನಗಳಿಗೆ. ನಾನೀಗ ಅಲ್ಲಿ ಯಾಕೆ ಇಲ್ಲ, ನಾನಿಲ್ಲಾ ಅಂದ್ರೆ ಅಲ್ಲಿ ಈಗ ಯಾರು ಇರ್ತಾರೆ? ಅಲ್ಲಿ ನನಗೇನಾದರೂ ಹೊಲ-ಮನೆ ಇವೆಯಾ, ಅಲ್ಲಿ ನನಗಿರುವುದು ಸ್ವಂತ ಮನೆಯಾ ಅಥವಾ ಬಾಡಿಗೆ ಮನೆಯಾ? ಸ್ವಂತ ಮನೆ ಅಂತಂದ್ರೆ, ಮನೆ ಕಟ್ಟಿಸಿದ್ದಾ ಅಥವಾ ಕೊಂಡಿದ್ದಾ? ಹಾಗು ಯಾವಾಗ ಮತ್ತು ಎಷ್ಟಕ್ಕೆ? ಈಗ ಆ ಮನೆಯಲ್ಲಿ ಯಾರಿರ್ತಾರೆ? ಅವರು ಎಲ್ಲಿಯವರು? ಅವರೂ ಹತ್ತಿರದವರಾ?
ತಪ್ಪಿಸಿಕೊಳ್ಳೋಕೆ ಬಾಡಿಗೆ ಮನೆ ಅಂತ ಅಂದ್ರೆ, ಅದಕ್ಕೆ ಬೇರೆ set of questions ಇವೆ.

ಇಷ್ಟು ನನ್ನ ಆಸ್ತಿ ಹಾಗೂ ಭೌಗೋಳಿಕ ವಿವರಗಳ ನಂತರ ನನ್ನ ವೈಯಕ್ತಿಕ ವಿವರಗಳ ಸರದಿ ಶುರು. ನಂದು ಮದುವೆ ಆಗಿದೆಯಾ? ಆಗಿದ್ದರೆ, ಎಷ್ಟು ಹೆಂಡತಿ ಮತ್ತು ಮಕ್ಕಳಿದ್ದಾರೆ ಮತ್ತು ಯಾಕೆ? (ಎಷ್ಟಿದ್ದಾರೆ ಅಂತ ಹೇಳಬಹುದೇನೋ ಆದರೆ ಯಾಕೆ ಅನ್ನೋದಕ್ಕೆ ಎನೂಂತ ಉತ್ತರ ಕೊಡೋದು?) ಅದರಲ್ಲಿ ಗಂಡೆಷ್ಟು ಮತ್ತು ಹೆಣ್ಣೆಷ್ಟು? ಮತ್ತವರೆಲ್ಲ ಎಲ್ಲೆಲ್ಲಿದ್ದಾರೆ ಮತ್ತು ಅಲ್ಲಲ್ಲಿಯೇ ಯಾಕಿದ್ದಾರೆ? ನೀವು ಎಲ್ಲೆಲ್ಲಿ ಯಾವಾಗ್ಯಾವಾಗ ಹೋಗ್ತಿರ್ತೀರಿ? ನಿಮ್ಮ ಹೆಂಡತಿಯ ತವರು ಮನೆ ಎಲ್ಲಿ? ಅದಾದ ನಂತರ ನನ್ನ ಹೆಂಡತಿ ಇವರ ಹೆಂಡತಿಗೆ ಹತ್ತಿರವಾಗುವ ತನಕ ಬಿಡುವುದಿಲ್ಲ.
ಮದುವೆ ಆಗಿಲ್ಲಾ ಅಂದ್ರೆ ಯಾಕೆ ಆಗಿಲ್ಲ,…. ಮತ್ತೆ ಶುರು.

ಇವಿಷ್ಟು ವಿವರಗಳನ್ನು ತಿಳಿದುಕೊಂಡು ಅವರು ತಮ್ಮ ಜನರಲ್ ನಾಲೆಜ್ ಹೆಚ್ಚಿಸಿಕೊಳ್ಳುತ್ತಾರೆ. ಆಮೇಲೆ ಶುರುವಾಗುತ್ತೆ ನೋಡಿ ನನ್ನ ಜನರಲ್ ನಾಲೆಜನ್ನು test ಮಾಡೋ ಪ್ರಶ್ನೆಗಳು. ಧಾರವಾಡದ ಪ್ರಖ್ಯಾತ ವ್ಯಕ್ತಿಗಳು ಮತ್ತು ರಾಜಕಾರಣಿಗಳು (ಅದರಲ್ಲಿ ಓಡುತ್ತಿರುವ, ಓಡಿ ನಿಂತಿರುವ ಹಾಗೂ ಮುಂದೆ ಓಡಬೇಕಾಗಿರುವ ಅನ್ನೋ sub category ಬೇರೆ), ನದಿಗಳು, ಬಿಸಿಲು, ಮಳೆ ಮತ್ತು ಚಳಿಯ ವಿವರ (ಕನಿಷ್ಟ ಹಿಂದಿನ ಎರಡು-ಮೂರು ವರ್ಷಗಳ ಮಾಹಿತಿ), ಬೆಳೆಯ ಪ್ರಮಾಣ, ಬರ, ಸರಕಾರದ ‘ಭಾಗ್ಯ’ಗಳು, ಶಾಲೆಗಳು ಮತ್ತು ಅಲ್ಲಿಯ ಡೋನೇಷನ್, ಬಸ್ಸುಗಳ ಮತ್ತು ಟ್ರೈನ್ ಗಳ ಸೌಲಭ್ಯ, ಸಿಟಿ ಬಸ್ ಮತ್ತು ಅಟೋ ವ್ಯವಸ್ಥೆ, ಅಕ್ಕ-ಪಕ್ಕದ ನೋಡಬೇಕಾದ (ಮತ್ತು ನೋಡಲೇಬಾರದ) ಸ್ಥಳಗಳು, ಅಲ್ಲಿ ಹೋಗುವ ಬಗೆ, ….

ಅವರು ಕೇಳೋ ರೀತಿ ನೋಡಿದ್ರೆ, ಒಂದೋ ಅವರಿಗೆ ಅಲ್ಲೇ ಹೋಗಿ settle ಆಗುವ ವಿಚಾರ ಇದೆ ಅಥವಾ ಆ ಕಡೆ ತಮ್ಮ ಮಗಳನ್ನ ಮದುವೆ ಮಾಡಿ ಕೊಡುವವರಿದ್ದಾರೆ ಅಂತ ಅನ್ನಿಸುತ್ತದೆ. ಇನ್ನು ಉತ್ತರ ಕರ್ನಾಟಕದವರಾದ್ರಂತೂ ಮುಗಿದೇ ಹೋಯಿತು ನನ್ನ ಕಥೆ. ನನ್ನ ಬಗ್ಗೆ ಅಷ್ಟೇ ಅಲ್ಲ, ನನ್ನಪ್ಪ, ಅವರಪ್ಪ ನ ಬಗ್ಗೆ ಕೇಳುತ್ತಾ, ನಮ್ಮ ವಂಶ ವೃಕ್ಷವನ್ನೇ ಅಲ್ಲಾಡಿಸಿಬಿಡುತ್ತಾರೆ.

ಹಾಗಿದ್ದರೆ ಇಂಥವರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ? ಊಹೂಂ , ಸಾಧ್ಯವಿಲ್ಲ ಮತ್ತು ತಪ್ಪಿಸಿಕೊಳ್ಳಲೂ ಬಾರದು. ಅವರು ಅಷ್ಟು ಪ್ರೀತಿಯಿಂದ ನಮ್ಮ ಬಗ್ಗೆ ಕೇಳುತ್ತಾ ಇರಬೇಕಾದರೆ, ನಾವು ತಪ್ಪಿಸಿಕೊಂಡು ಅವರಿಗೆ insult ಮಾಡುವುದು ಸರಿಯಲ್ಲ. ಅಂತಹ ಸಂದರ್ಭಗಳಲ್ಲಿ ನಾನೇನು ಮಾಡುತ್ತೇನೆ? ಅವರ ಪ್ರಶ್ನೆಗಳಿಗೆ ಉತ್ತರ ಕೊಡೋದಿಲ್ಲವೇ? ಛೆ, ಉತ್ತರ ಕೊಡದೇ ಇರುವಷ್ಟು ಕೊಬ್ಬಿನ ಮನುಷ್ಯ ನಾನಲ್ಲ. So, ಅವರ ಎಲ್ಲ ಪ್ರಶ್ನೆಗಳಿಗೂ ವಿಧೇಯವಾಗಿ ಉತ್ತರಿಸುತ್ತೇನೆ ಯಾಕೆಂದರೆ ಉತ್ತರ ಕೊಟ್ಟ ಮೇಲೇ ತಾನೆ ನನಗೆ ನನ್ನ ಜನರಲ್ ನಾಲೆಜ್ ಹೆಚ್ಚಿಸಿಕೊಳ್ಳೋ ಅವಕಾಶ ಸಿಗೋದು!

‍ಲೇಖಕರು Admin

26 April, 2016

16 Comments

  1. ಸಂತೋಷ ತಾಮ್ರಪರ್ಣಿ

    ಈ ನನ್ನ ತಲೆಹರಟೆಯನ್ನು ತಿದ್ದಿ, ಅದಕ್ಕೊಂದು ತಲೆಬರಹ ನೀಡಿದ ನನ್ನ ಸ್ನೇಹಿತನಾದ ಸಂಜು ಗೆ ಧನ್ಯವಾದಗಳು.

    – ಸಂತೋಷ ತಾಮ್ರಪರ್ಣಿ

  2. Shrinivas. Huddar

    ಸುಂದರವಾಗಿದೆ.
    ಸಂತೋಷ ನಾನೂ ಧಾರವಾಡದವನೇ……. ex ಮಾಳಮಡ್ಡಿಯವನು….ಈಗ ಸಾಧನಕೇರಿ..
    ಅಂದಹಾಗೆ ನೀವು ತಾಮ್ರಪರ್ಣಿ ಅಂದರೆ…..

    • ಸಂತೋಷ ತಾಮ್ರಪರ್ಣಿ

      ಧಾರವಾಡದ ಮಾಳಮಡ್ಡಿಯಲ್ಲಿ ಚಿಕ್ಕೆರೂರ (ವೆಂಕಟರಮಣನ ಗುಡಿಕಡೆ ಅದ ಅವರ ಮನಿ) ಅವರ ಮನಿ ಮ್ಯಾಲ ಇದ್ವಿ. ಈಗ ಅಲ್ಲಿ ಯಾರೂ ಇರಂಗಿಲ್ಲ, ಎಲ್ಲಾರೂ ಮೈಸೂರಿಗೆ ಶಿಫ್ಟ್ ಆಗೇವಿ. ಪ್ರಹ್ಲಾದ ನಿಲಯದ ಕಡೆ ಒಬ್ರು ಹುದ್ದಾರ ಅಂತ ಇದ್ರು. ನೀವು ಅಲ್ಲಿಯವರ ಎನೂ?
      (ಜನರಲ್ ನಾಲೆಜ್ ಬೆಳೀಬೇಕಲ್ಲ, ಅದಕ್ಕ ಕೇಳಿದೆ.)

      • Shrinivas. Huddar

        ಅವ ನಮ್ಮ ಅಣ್ಣ…,,, ಇನ್ನಷ್ಟ ಜನರಲ್ ನಾಲೇಜ ಬೇಳಿತು ಹ ಹ ಹಾ

  3. Sanju Walikar

    Nice Santosh..keep writing..continue the momentum.

    • ಸಂತೋಷ ತಾಮ್ರಪರ್ಣಿ

      Thank you for compliment. I shall keep writing as long as readers tolerate me!

  4. nagaraj

    Very nice lines by santoo…keep it up bro it gives us a energy and love wherever we go..

    Hats off…
    Nimma Dharwadian,
    Nagaraj

    • ಸಂತೋಷ ತಾಮ್ರಪರ್ಣಿ

      Thank you very much.

  5. prashant kulkarni

    Santy you wrote this article only for me anta nanag anasalikattadale, keeping me in your mind, brilliant sense of humour, keep it up le, again you proved you are different, I appreciate buddy

    • ಸಂತೋಷ ತಾಮ್ರಪರ್ಣಿ

      ಹ ಹ ಹ ಹಾ…. ನಿಂದು ಕಾಮೆಂಟಾ ಅಥವಾ ಕಾಂಪ್ಲಿಮೆಂಟಾ ಅಂತಾ ಗೊತ್ತಾಗ್ಲಿಲ್ಲ. ಇರಲಿ, ನಿನ್ನನ್ನು ಗುರಿಯಾಗಿಸಿ ಬರೆದ ಲೇಖನವಲ್ಲ ಇದು. ಯಾವುದಕ್ಕೂ ಇದನ್ನು ಓದಿ ನಿನ್ನ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು.

  6. !! Māń'ž !!

    ಧಾರವಾಡ್ದಾಗ್ ಸ್ವಲ್ಪ ಮಾತ್ ಕಮಿ ಹಂಗ ನೋಡಿದ್ರ! ಬಿಜಾಪುರ, ಬಾಗಲಕೋಟೆ ಮಂದಿ ಸಿಕ್ರ ಮುಗದ್ಹೋತು, ಕತಿ ಅಧೋಗತಿ..¿ ಏಳು ಜನ್ಮ ಜಾಲಾಡಿ ಬಿಡ್ತಾರ್#… ಖರೇ ಮಜಾ ಸಿಗೋದು passenger trainದಾಗ್ full ಟೈಮ್ ಪಾಸ್sss.. ಅಲ್ಲಿ ಸಿಗೋದ್ ಖರೇ ‘ನಾಲೇಜು’..!! ಅಲ್ಲಿ ಯಾರ್ ದೊಡ್ಡಾವ್ರು-ಸಣ್ಣಾವ್ರು, ಶ್ರೀಮಂತಾ-ಬಡವಾ, ಜಾತಿ-ಪಾತಿ ಏನು ಸಂಬಂಧ್aa ಬರುಲ್ಲ್, ಮಜಾ ಭಾಳ ಬರ್ತದ್a.. 4-5 ತಾಸ್ 1 ನಿಮಿಷ ಸರಿ, ಮಾತಿನ್ ಮಲ್ರು ಸಿಕ್ರ್a.. ನೀವು ಎಷ್ಟ ಕಡೆ ತಿರ್ಗ್ಯಾಡಿದ್ರು ಇಷ್ಟ ಮಜಾ ಬರುಲ್ಲ್.. ಎಷ್ಟೋ ಜನರ life change ಮಾಡೇದ ಈ train!! article ಓದಿ ಮಜಾ ಬಂತು, ಒಮ್ಮೆee ಧಾರವಾಡ ನೆನಪ್ ಬಂತು, ಭಾಳ್ ಖುಶಿ ಆತು. ಹಿಂಗ articles ಬರೀತ್ ಬಾಪಾ ಅಣ್ಣಾ.. ಸ್ವಲ್ಪ ಉತ್ತರ ಕರ್ನಾಟಕ ಸೊಗಡು ಇರ್ಲಿ ಬರಹದಾಗ, ಓದ್ಲಿಕ್ಕ್ ಇನ್ನೂ ಮಜಾ ಇರ್ತದaa… well done.. all the best.. ☝✨

    • ಸಂತೋಷ ತಾಮ್ರಪರ್ಣಿ

      ನೀ ಹೇಳಿದ್ದೂ ಖರೆ ಅದ ನೋಡ್ಪಾ. Passenger train ದಾಗಿನ ಮಜಾ ನ ಬ್ಯಾರೆ. ಹಂಗ ನೋಡಿದ್ರ ನೀನು ಛೊಲೋನsss ಬರದೀದಿ. Keep writing.
      Thank you.

  7. pavan v

    anusarane prakrutiya niyam, pratiyobbaru tamm hiriyarannu anusarisuttare, hige prashne keluvavrige yavude vishayad bagge tilid koluv mahatwakannkhe iruvdil ,chikandinind nodi hagu keli kalit sangatigalannu anusarisuttare ashte ,
    uttam lekhan , hagu uttam shirshike

    • ಸಂತೋಷ ತಾಮ್ರಪರ್ಣಿ

      ದೊಡ್ಡವರನ್ನು ನೋಡಿ ಚಿಕ್ಕವರು ಕಲಿಯುವುದು ಸಾಮಾನ್ಯವೇನೋ ಹೌದು. ಆದರೆ ಚಿಕ್ಕವರಿಂದಲೂ ಕಲಿಯಬೇಕಾದವು ಬಹಳಷ್ಟಿವೆ. ಅಲ್ಲವೇ? ಇರಲಿ, ಪ್ರಶ್ನೆಗಳನ್ನು ಕೇಳುವುದು ಪರಿಚಯವನ್ನು ಬೆಳೆಸಿಕೊಳ್ಳುವುದಕ್ಕೆ ತಾನೇ? ಹಾಗೆ ಮಾಡಿದಾಗ ತಾನೇ ಒಬ್ಬರ ಬಗ್ಗೆ ಇನ್ನೊಬ್ಬರಿಗೆ ಗೊತ್ತಾಗೋದು.

      ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ತಲೆಬರಹ ಕೊಡಲು ನೆರವಾದ ನನ್ನ ಗೆಳೆಯ ‘ಸಂಜು’ ಗೆ ಸ್ವಲ್ಪ ಶ್ರೇಯಸ್ಸು ಸಲ್ಲಬೇಕು.

  8. vadiraj kulkarni

    Hey Super Santosh!!! Chennagide article!!!

    Ivanarava Ivanarava anta prashnegala surimale aad mele namaga tilitada, ivanammava ivanammava anta….. Bhal cholo adari nimma pyla published article…. Hinga ‘SANTOSH’dinda baritirri… navu odi santosh padtevi!!!

    • ಸಂತೋಷ ತಾಮ್ರಪರ್ಣಿ

      Thank you very much for your comments.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading