ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನ ಮಡಿಲೊಳಗಡಗಿಸಿಕೊಂಡು..

ಶೋಕೇಸ್

geetha hegde kalmane

ಗೀತಾ ಹೆಗ್ಡೆ ಕಲ್ಮನೆ 

ಅಂದದ ಗೊಂಬೆ
ಚಿಕ್ಕಂದಿನ ಅಡಿಗೆ ಆಟದ ಸಾಮಾನು
ಅಮ್ಮ ಹೆಣೆದ ಮುತ್ತಿನ ಮಂಟಪ
ಧ್ಯಾನ ಮುಕ್ತ ಬುಧ್ಧ
ಹಲವು ದೇವರ ಚೌಕಟ್ಟು
0b8871ce-236f-4818-913b-d4bdff34c7e1ಸಂಭ್ರಮದಿ ತಂದಿಟ್ಟ ನಮ್ಮೂರಿನ
ಶಾಲೆಯಲಿ ಗೆದ್ದ ಪ್ರಶಸ್ತಿಗಳು
ಅಜ್ಜಿಯ ನೆನಪಿಗೆ ತಂದಿಟ್ಟುಕೊಂಡ
ಹಳೆಯ ಕಾಲದ ಕುಟ್ಟಣಿ
ಒಂದಾ ಎರಡಾ!

ಮಗ ಹೊಸದಾಗಿ ಮನೆ ಕಟ್ಟಿದ
ಸಂಭ್ರಮೋ ಸಂಭ್ರಮ
ಶುಭ್ರವಾಗಿಸಿ ಇಡಲು ಹೋದೆ
ನೋಡಿದೆ ಗೋಡೆಯೆಲ್ಲ
ಖಾಲಿ ಖಾಲಿ
ಬರೀ ಬಣ್ಣದ ಗೋಡೆ
ಕೇಳಿದರೆ ಉಲಿದ
ಅಮ್ಮ ಅದೀಗಿನ ಸ್ಟೈಲ್
ಪೆಚ್ಚಾದ ಮುಖ ಹೊತ್ತು
ಎತ್ತಿಟ್ಟೆ ಎಲ್ಲ ರಟ್ಟಿನ ಡಬ್ಬದಲ್ಲಿ
ಆಗಾಗ ಬಗ್ಗಿ ಬಗ್ಗಿ ನೋಡುವೆ
ಕಣ್ಣು ಮಂಜಾಗಿಸಿ.

ಗಮ್ಮನೆ ಬೀಗುತ್ತ
ಮನೆಗೊಂದು ಶೋಭೆಯಾಗಿ
ಜಗುಲಿಯ ಗೋಡೆಯಲಿ
ಚಿತ್ತಾರದ ಮರದ ಸುತ್ತು ಕಟ್ಟು
ಗ್ಲಾಸಿನೊಳಗೆ ಥಳಥಳಿಸುತ್ತ
ae2fb0e9478c3dde63f77ded85a9a332ಊರೆಲ್ಲ ಸುತ್ತಿ ಬಂದ
ಒಂದೊಂದು ನೆನಪು
ನಿನ್ನ ಮಡಿಲೊಳಗಡಗಿಸಿಕೊಂಡು
ಕಂಡಾಗಲೆಲ್ಲ ಬೆಚ್ಚನೆಯ ಶಾಖ ಕೊಟ್ಟಂತೆ
ನೆನಪುಗಳ ಗರಿ ಬಿಚ್ಚಿಡುತ್ತಿದ್ದೆ.

ನೀನು ಈಗಿಲ್ಲ.
ವ್ಯಥೆಯಾಗುತ್ತಿದೆ ನನಗೆ
ಥಳುಕು ಆಧುನಿಕತೆ
ನಿನ್ನ ಮೂಲೆಗೆ ತಳ್ಳಿತಲ್ಲ
ಅನಾಥ ಪ್ರಜ್ಞೆ ಕಾಡುತ್ತದೆ
ಹಳತಕ್ಕೆ ಎಂಥಾ ಕಾಲ ಬಂದಿತೈಯ್ಯ!
ಈಗ ಬೆತ್ತಲೆಗೆ ಪ್ರಾಶಸ್ತ್ಯ
ಹೊಸ ಮನೆಯ
ಗೋಡೆಯೆಲ್ಲ ಬಣಬಣ
ಆಧುನಿಕ ಹೆಣ್ಣಿನ ಹಣೆಯಂತೆ!

‍ಲೇಖಕರು admin

8 July, 2016

0 Comments

Trackbacks/Pingbacks

  1. ನಿನ್ನ ಮಡಿಲೊಳಗಡಗಿಸಿಕೊಂಡು.. | | Sandhyadeepa…. - […] http://avadhimag.online/2016/07/08/%e0%b2%a8%e0%b2%bf%e0%b2%a8%e0%b3%8d%e0%b2%a8-%e0%b2%ae%e0%b2%a1%e0%… […]
  2. ನಿನ್ನ ಮಡಿಲೊಳಗಡಗಿಸಿಕೊಂಡು.. | – Sandhyadeepa…. - […] http://avadhimag.online/2016/07/08/%e0%b2%a8%e0%b2%bf%e0%b2%a8%e0%b3%8d%e0%b2%a8-%e0%b2%ae%e0%b2%a1%e0%… […]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading