ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನ ಬಿಳಿಹಲ್ಲುಗಳ ನಕ್ಷತ್ರಕಡ್ಡಿಯ ನಡುವಿಂದ..

ಹಣತೆ ಹನಿಗಳು

12122617_10206724270158305_7505518837187278373_n
ವೈಶಾಲಿ ಹೆಗ್ಡೆ

ಕಣ್ಣಲ್ಲಿ ಹಚ್ಚಿಟ್ಟ ಹಣತೆಯ ದೀಪಕ್ಕೆ ಮಿನುಗಿಚಟಪಟಿಸಿದ್ದು

ನಿನ್ನ ಬಿಳಿಹಲ್ಲುಗಳ ನಕ್ಷತ್ರಕಡ್ಡಿ

match stick burningಯ ನಡುವಿಂದ

ಹೊರಟ ಬೆಳಕಿನ ಸದ್ದು

**
ಇರಲಿ ಬಿಡು ಸುತ್ತೆಲ್ಲ ಕತ್ತಲೆ

ಇಲ್ಲದಿರೆ ನನ್ನ ಹಣತೆಗೆಲ್ಲಿ ಬೆಲೆ!

ನಿನ್ನ ಮೊಗದ ಮೇಲಿನ ನನ್ನ ಕಣ್ರೆಪ್ಪೆಯ ನೆಳಲಿಗೆ

ಕಂಡಷ್ಟು ಬೆಳಕು ಸಾಕು

ಬೆಳಗಾದಮೇಲೂ

ಹಣತೆಯಲ್ಲೆಲ್ಲ ಈಗೀಗ ಎಣ್ಣೆ ಸುರಿಯುವುದಿಲ್ಲವಂತೆ

ನೆತ್ತರ ಬಸಿದೆರೆದು ಬೆನ್ನಹುರಿ ಹೊಸೆದು ಹೊತ್ತಿಸಿದ

ಬತ್ತಿಯಾ ಉರಿ ಬಹು ಪ್ರಖರವಂತೆ

**

ಹಬ್ಬವಾಗುವುದೇನೆ ಹುಡುಗಿ

ಅಬ್ಬರದ ಸದ್ದಲ್ಲಿ ಬೊಬ್ಬಿರಿವ ಊರಲ್ಲಿ

ಬೊಟ್ಟು ಚೀಪುವ ನಿನ್ನ ಬಾಯಲ್ಲಿ ಬತ್ತಾಸು ಬರುವುದೇನೆ?

‍ಲೇಖಕರು admin

12 November, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading