ಮಹಾದೇವ ಎಸ್ ಪಾಟೀಲ
ನಿನ್ನ ಪ್ರೀತಿಗಾಗಿ ಹೀಗೆ ಅದೆಷ್ಟು ಕಾಯಬೇಕು
ಮೋಹದ ಮಾತಿಗೆ ಮತ್ತೆಷ್ಟು ಕಾಯಬೇಕು
ದುಡುಕಿ ನೀ ಕೇಡಬೇಡ ಒಲವನು ತೊರೆದು
ಈಗ ಬೆರೆತು ಸಾಗಲು ಇನ್ನೆಷ್ಟು ಕಾಯಬೇಕು
ಮೌನದ ಮಂತ್ರವ ಪಠಿಸಬೇಡ ಒಂದಾಗಲು
ನಲ್ಮೆ ದೀಪ ಹಚ್ಚಲು ನಾನೆಷ್ಟು ಕಾಯಬೇಕು

ಕಂಗಳಲಿ ಸೂಜಿಗಲ್ಲಿನ ವಿರಹದ ಸೆಳತವಿದೆ
ಆ ಸಿಹಿ ರಾತ್ರಿಗಾಗಿ ದಿನಗಳೆಷ್ಟು ಕಾಯಬೇಕು
ನಿನ್ನಲಿ ಮೂಡಿರುವ ನೆನಪುಗಳು ಮಾಸದಿರಲಿ
ಬೇಗುದಿಯ ಮಿಲನಕೆ ಕಾಲವೆಷ್ಟು ಕಾಯಬೇಕು
ಮಹಾದೇವಗೆ ಕನಸುಗಳು ಕಂಡು ಸಾಕಾಗಿದೆ
ಒಂದುಗೂಡಲು ಸಮಯವೆಷ್ಟು ಕಾಯಬೇಕು






0 Comments