ಹೆಪ್ಪುಗಟ್ಟಿದ ಬದುಕು

ಭಾರತಿ ಬಿ ವಿ
ಬನ್ನಿ ಬಾಚಿ ಅಪ್ಪುವೆ
ಹೆಪ್ಪುಗಟ್ಟಿದ ಬದುಕುಗಳೇ
ನೀವು ದ್ರವಿಸಲೆಂಬಾಸೆ
ನನ್ನ ಉಸಿರುಗಟ್ಟಿಸುವ ಗಾಢ ಬಿಸುಪಿಗೆ
ಅವತ್ತು ಬಾಯಾರಿದ
ನಮ್ಮ-ನಮ್ಮ ಬದುಕುಗಳು
ಪರಸ್ಪರ ಗುಟುಕಾದ ಘಳಿಗೆಗಳಲ್ಲೂ
ಯಾಕೆ ಘನಿಸಿಯೇ ಇದ್ದವು ?
ಒಮ್ಮೆ ಮಾತ್ರ ಉರಿವ ಪಾದ ತಣ್ಣಗಾಯ್ತಲ್ಲ
ಆಗ ಕರಗಿದ್ದು ಹೌದೇನೋ ಅಂತ
ಸುಮ್ಮ ಸುಮ್ಮಗಾದರೂ ಭ್ರಮಿಸುವಷ್ಟರಲಿ
ಕಂಡಿತ್ತು ಸತ್ತು ಬಿದ್ದ ಮೃಗತೃಷ್ಣೆ ;
ಎದೆಯಲ್ಲಿ ಮೂಡಿದ ಚೀತ್ಕಾರಕ್ಕೆ ಗೊತ್ತಿತ್ತು
ಒಳಗೊಳಗೆ ಹೆಪ್ಪುಗಟ್ಟಿದ ನಾವು ಹತ್ತಿರವಾದರೂ
ಒಬ್ಬರಿಗೊಬ್ಬರು ತಗುಲಿದರೆ
ಬರೀ ಗಾಯ, ರಕ್ತ, ಕೀವು …
ಈಗ ಕರಗಿದರೂ ಯಾವ
ಅದ್ಭುತದ ನಿರೀಕ್ಷೆಯಿದೆ ಹೇಳು !
ಮತ್ತೆ ನಿನ್ನ ಪಾತ್ರಗಳಲಿ ನಿನ್ನಿರುವು
ಎಂದಿನಂತೆ ನನ್ನ ಪಥದಲಿ ನನ್ನ ಹರಿವು …






abba! sthambeebhoota! simply superb!
Flows so spontaneously!like it:)
ಮತ್ತೆ ನಿನ್ನ ಪಾತ್ರಗಳಲಿ ನಿನ್ನಿರುವು
ಎಂದಿನಂತೆ ನನ್ನ ಪಥದಲಿ ನನ್ನ ಹರಿವು touchy….