ಸದ್ದಿಲ್ಲದೇ……….
– ಪ್ರಜ್ಞಾ ಮತ್ತಿಹಳ್ಳಿ
ನಿನ್ನ ನೆನಪಿನ ಕಾವಿಗೆ ಖಾಲಿ ಮಧುಪಾತ್ರೆ ಬೆವರಿದೆ
ಹನಿಹನಿ ಜಿನುಗಿ ತು೦ಬಿತದು ಸದ್ದಿಲ್ಲದೇ
ಹಾಳು ಲಜ್ಜೆ ಮುತ್ತಿ ಬೆರಳು ನಿರ್ಬಲವಾಗಿದೆ
ಅ೦ತೂ ಇ೦ತೂ ಕೈ ಚಾಚಿದರೆ ನೀನೆದ್ದು ಎಷ್ಟೋ ಹೊತ್ತಾಗಿದೆ
ಬೇಡದವರು ಮುತ್ತಿಕೊ೦ಡು ಹಗಲು ಹ೦ಚಿಕೊ೦ಡಾಗಿದೆ
ನಿನ್ನ ಕದ ಸಿಗುವಸ್ಟರಲ್ಲಿ ಸ೦ಜೆಯೊ೦ದೇ ಉಳಿದಿದೆ
ತುಟಿಯ ಸಖ್ಯ ಸಿಕ್ಕ ಕೊಳಲು ಸುಖದ ರಾಗವಾಗಿದೆ
ಉಸಿರ ಬಿಸಿಯ ಕೂಡಿ ಗಾಳಿ ತನ್ನ ಹೆಸರೇ ಮರೆತಿದೆ
ಹಲ್ಲೂರಿ ರಸವ ಹೀರಿ ತಿ೦ದ ಹಣ್ಣು ನೆನೆದರೆ
ತೋಪು ಹಾದು ಬ೦ದ ತೇವ ಗೇರು ಕಳಿತ ವಾಸನೆ
ಹೊ೦ಗೆ ಮರಕೆ ಸುಖದ ಜೊ೦ಪು ಇರುಳು ನೆರಳ ನು೦ಗಿದೆ
ಮಕರ೦ದ ಮುಗಿದ ತಟ್ಟಿ ರಾಣಿ ಜೇನ ಕಾದಿದೆ
]]>






istvAyitu-raju hegde