ಮೂಲ: ರಾಜೇಶರೆಡ್ಡಿ

ಕನ್ನಡಕ್ಕೆ : ಮೆಹಬೂಬೀ
ಈಗೇನು ಹೇಳಲಿ ಮುರಿದಿದ್ದೇನೆ ಎಷ್ಟು ಎಲ್ಲಿಂದ ನಾನು
ಸ್ವತಃ ಆಯುತ್ತಿರುವೆ ಇಲ್ಲಿಂದ ಅಲ್ಲಿಂದ ನಾನು..
ಗೊತ್ತಿಲ್ಲ ಅದಾವ ಲೋಕದಲ್ಲಿ ದೊರಕುತ್ತದೆಯೋ ನೆಮ್ಮದಿ ನನಗೆ
ಆಗಸದಿಂದ ಮುನಿಸಿದೆ ಸಿಟ್ಟಾಗಿದ್ದೇನೆ ಭುವಿಯಿಂದ ನಾನು…
ಈಗಂತೂ ಮರಿಚಿಕೆಯಿಂದಲೇ ನೀಗಿಸಿಕೊಳ್ಳುತ್ತಿರುವೆ ದಾಹವನ್ನು
ತೆಗೆದುಕೊಳ್ಳುತ್ತಿರುವೆ ವಿಶ್ವಾಸದ ಕೆಲಸ ಭ್ರಮೆಯಿಂದ ನಾನು….
ಆದರೆ ನನ್ನ ಕಣ್ಣುಗಳು ಬೇರೆ ಏನೋ ಹೇಳಿದವು
ಮತ್ತೇನೋ ಹೇಳುತ್ತಲಿರುವೆ ನನ್ನ ನಾಲಿಗೆಯಿಂದ ನಾನು…
ಕನ್ನಡಿಯಿಂದ ಜಗಳಕ್ಕಿಳಿಯುವಾಗ ನನ್ನ ಬಿಂಬ
ಮರೆಮಾಚಿಕೊಳ್ಳುವೆ ದೃಷ್ಟಿ ಅದರೆಡೆಯಿಂದ ನಾನು..
ಕಾಣುವುದಿಲ್ಲ ನನ್ನ ಕಥೆಯಲ್ಲಿ ನಾನು ಎಲ್ಲೂ
ಕಣ್ಮರೆಯಾಗಿರುವೆ ಆವಾಗಿನಿಂದ ನಿನ್ನ ಕಥೆಯಿಂದ ನಾನು..
ದುಃಖ ಮಾರುತ್ತಿದ್ದರು ಜಾತ್ರೆಯಲ್ಲಿ ಸಂತೋಷದ ಹೆಸರಿನಿಂದ
ಬೇಸರದಿಂದ ಮರಳಿರುವೆ ಪ್ರತಿಯೊಂದು ಅಂಗಡಿಯಿಂದ ನಾನು…






0 Comments