ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನ ಕಣ್ಣಂಚಲಿ ಮೋಡ, ಮುಖದಿ ಬಿರುಗಾಳಿ …

ಮಳೆಗಾಲದ ಒಂದು ಸಂಜೆ

ತೇಜಸ್ ಕುಮಾರ ಹೆಗಡೆ
ಮರುಕಳಿಸಿತೊಂದು ದಿನ,
ಹಳೆಗಾಲದಂತೆ…

ಅದೇ ಸುರಿವ ಮಳೆ, ಮುರಿದ ಕೊಡೆ,
ಜನವಿರಳ ದಾರಿ…
ಊರು ಬೇರೆ , ಹಾದಿ ಬೇರೆ ,
ಮೊರೆವ ನೆನಪುಗಳ ಸವಾರಿ …

ನನ್ನೆಲ್ಲ ಸ್ಮರಣೆಗೂ
ನಿನ್ನ ಕನವರಿಕೆ ..
ಮನಸಿಂದು ಬಿಕ್ಕುತಿದೆ,
ಹಳೆಯ ಹಳಹಳಿಕೆ …

ಆ ಸಂಜೆ ಮಬ್ಬು, ತಂಗಾಳಿ ,
ನಿನ್ನ ಕಣ್ಣಂಚಲಿ ಮೋಡ, ಮುಖದಿ ಬಿರುಗಾಳಿ …
ಕಂಡ ಹುಚ್ಚು ಸ್ವಪ್ನ ಕರಗಿ ನೀರಾದಂತೆ ,
ಸುರಿಯಿತು ವರ್ಷಧಾರೆ ಇಳೆ ತೊಳೆಯುವಂತೆ …

ನನ್ನ ಕಣ್ಣುಗಳ ಚಿತ್ರ ಮಸುಕಾಗಿ ,
ಉರುಳಿದವು ಹನಿಗಳು,
ಮಳೆಯಲ್ಲ, ಕಂಬನಿ …
ನೋವಿನ ಬಿಸಿಗೆ ಕರಗಿದ
ಹೊಂಗನಸ ಲೆಕ್ಕಿಸದೆ
ತೊರೆದೇ ಹೋದೆಯಲ್ಲ ನೀ …

ಮರೆತು ಮಾದು ಹೋದ ಗಾಯ
ಹಸಿಯಾದಂತೆ,
ಗತಸ್ಮೃತಿಯ ಮೆರವಣಿಗೆ
ಮನಮುದುಡುವಂತೆ …

ಮತ್ತೆ ನೆನಪಾದಳು …

 

‍ಲೇಖಕರು avadhi

23 February, 2014

4 Comments

  1. mmshaik

    NICE..

  2. Anonymous

    keep moving…liked brother

  3. Nagaraj.G.S

    keep moving…liked brother

  4. Anonymous

    Chennaagidhe 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading