ಮತ್ತಷ್ಟು ನೀಲುವಿನ ಹಂಬಲಿಕೆಯಲಿ, ಹಿಂಬಾಲಿಕೆಯಲಿ ದಕ್ಕಿದ್ದು…
-೧-
ತುಂಡು ಬಟ್ಟೆಯುಟ್ಟು
ಚೋಟುದ್ದ ಹಾದಿಯ ನಡೆವ
ಹೆಣ್ಣುಗಳ ಸೌಂದರ್ಯಕೆ
ಆಹಾ! ಓಹೋ! ಎಂಬ ಗಾಂಪರು
ನಮ್ಮ ಹಳ್ಳಿಯ ಹೆಣ್ಣುಗಳು
ಕೆರೆಯಿಂದ ನೀರು ತರುವುದ,
ನೋಡಿಲ್ಲ ಎಂಬುದೇ ನನ್ನ ವಿಷಾದ!
-೨-
ಮೊನ್ನೆ ಬಸ್ಸಿನಲ್ಲಿ ಕೆಣಕಿದವಗೆ ಹೀಗೆಂದೆ…
ಅಣ್ಣನೋ ತಮ್ಮನೋ
ಪ್ರಿಯಸಖನೋ, ಆತ್ಮಬಂಧುವೊ
ಉತ್ತಮ ಸ್ನೇಹಿತನೋ
ಇನ್ನೇನೋ ಆಗಬಹುದಾದ ನೀನು…
ಕೈ ಹೊಸೆದುಕೊಳ್ಳುತ್ತಾ,
ಕಾಮುಕನಂತೆ ನಿಂತೆಯಲ್ಲೋ
ಕಪಿಯೇ …
-೩-
ಬರೆಯಲು, ಓದಲು ಬಾರದ
ನಮ್ಮ ಬೋರ
ತನ್ನ ದುಡಿಮೆಯಿ೦ದ
ಸಂಜೆಯ ಶರಾಬಿನಿಂದ
ಸುಖಿಸುವುದು
ಎಂತಹ ವಿಸ್ಮಯವಲ್ಲವೇ?
-೪-
ಮನಸಿನ ಚಂಚಲತೆ ಅರಿತಿದ್ದವ
‘ವೃದ್ಧನಾರಿ ಪತಿವ್ರತಾ’ ಎಂದ
ಸಹಜತೆ, ಮನಸಿನ ಚಂಚಲತೆ
ಸರಳತೆ ಒಪ್ಪಿಕೊಳ್ಳದ ಭಾರತ
ಕರ್ಮಠರ, ಕಪಟಿಗಳ ನಾಡಾಯಿತು…
-೫-
ಬಿಯರ್ ಕುಡಿದು
ಮಾಂಸ ಮೆದ್ದು
ಬ್ರಾಹ್ಮಣಿಕೆಯ ಬಿಟ್ಟೆ ಎಂದ
ಜ್ಞಾನಪೀಠಿಗಳ ಯಜಮಾನಿಕೆ
ನನ್ನನ್ನು ಹೊಸ ದುಗುಡಕ್ಕೆ ತಳ್ಳಿತು
-೬-
‘ನೀನೇ ನಾನು, ನಾನೇ ನೀನು’
ಎಂದು ಕ್ಯಾಸೆಟ್ ಕವಿಯಂತೆ ಮಾತಾಡಿ
ಮೆಚ್ಚಿಸಲು ಬಂದ ಹುಡುಗನಿಗೆ …
ನೀನು ನೀನಾಗಿರು ಮಾರಾಯ,
ನಾನು ಮಹಾ ಬೋರು…
ಎಂದ್ಹೇಳಿ ಸಾಗ್ಹಾಕಿದೆ…
ಹೆಣ್ಣಿನ ಕಷ್ಟ ನಿಮಗೆ ತಿಳಿದಿರಲಿ







neelu kvitey salugalu chennagive
tumba chennagive
oh!tumba arhaourn salugalu.chennagive.thanks.
sogasada salugalu…
ನಮ್ಮ ಹಳ್ಳಿಯ ಹೆಣ್ಣುಗಳು
ಕೆರೆಯಿಂದ ನೀರು ತರುವುದ,
ನೋಡಿಲ್ಲ ಎಂಬುದೇ ನನ್ನ ವಿಷಾದ!
ತುಂಬಾ ಚೆಂದದ ಸಾಲುಗಳು.
Felt like Fried Cashew nuts (along with Vodka on the rocks!)
😉
-Rj
cute Lines
ಹಾಯ್ ಹಾಯ್ ಹಾಯ್ಕ 🙂
ಮನಸಿನ ಚಂಚಲತೆ ಅರಿತಿದ್ದವ
‘ವೃದ್ಧನಾರಿ ಪತಿವ್ರತಾ’ ಎಂದ
ಸಹಜತೆ, ಮನಸಿನ ಚಂಚಲತೆ
ಸರಳತೆ ಒಪ್ಪಿಕೊಳ್ಳದ ಭಾರತ
ಕರ್ಮಠರ, ಕಪಟಿಗಳ ನಾಡಾಯಿತು…
…ಇಷ್ಟವಾಯ್ತು 🙂 ಎಲ್ಲವೂ ವಿಚಾರ ಮಾಡಬೇಕಾದಂತಹ ವಿಚಾರಗಳಿಂದ ತುಂಬಿವೆ 🙂