ಕೆಂಪು ದೀಪಗಳು ನಂಜಾಗಿ ಉರಿಯುತ್ತವೆ…
ವೈ.ಬಿ.ಹಾಲಬಾವಿ
ಹರಿದ ನೋಟು
ತೇಪೆ, ಗೆರೆ, ಗೀಚಿದ ಗುರುತು
ಮಾಸಿ ಮಸುಕಾದರೂ
ಕೈಯಿಂದ ಕೈಗೆ ಚಲಾವಣೆ ನಿಲ್ಲದು…
ಹೀಗೆ…ಬರುವ ಗಿರಾಕಿಗಳಿಗೆ
ಕಾಯಬೇಕು ನಿರಂತರ…ಮೈಯಾನಿಸಬೇಕು
ಹುರುಪಿಲ್ಲದಿದ್ದರೂ… ಹೊಸ ರೂಪಿನಲ್ಲಿ
ಬಟವಾಡೆಗೆ ಸಿದ್ಧವಾದ ಪತ್ರಗಳು
ಅಂಚೆ ಕಚೇರಿಯ ಮೋಹರಿಗೆ ಮೈಯೊಡ್ಡಿದಂತೆ…
ಮಾಯಾ ನಗರಿಯ ಆ… ಕೆಂಪು ಗಲ್ಲಿಗಳಲ್ಲಿ
ನಿಟ್ಟುಸಿರು ಹರಿಯುತ್ತದೆ ಒಳ ಚರಂಡಿಗಳಲ್ಲಿ
ನಾಗರೀಕತೆಯೇ ಹೊಳೆಯಾಗಿ
ನಿರ್ಲಿಪ್ತ ಬದುಕಿನ ಕಡಲ ಕಿನಾರೆಗೆ…
ಸಂಜೆ ನಂಜಾಗಿ ಉರಿಯುತ್ತವೆ
ಕೆಂಪು ದೀಪಗಳು
ಮಂಜಾದ ಕಣ್ಣುಗಳು
ಪಂಜಿನ ಮೆರವಣಿಗೆಯಲ್ಲಿ
ಸಂಭ್ರಮ ಕಳೆದುಕೊಂಡಂತೆ…
ಹೆಜ್ಜೆ ಊರಿದಡೆಲ್ಲೆಲ್ಲಾ ಹಾದಿ ಮೂಡಿ
ಹಸಿರು ಉಸಿರೆತ್ತುವುದಿಲ್ಲ
ಅನಾಥ ಪ್ರಜ್ಞೆ ಉಳಿದು ಬಿಡುತ್ತದೆ
ತಾಯಿಂದ ದೂರಾದ ಮಗುವಿನಂತೆ
ಕೆಚ್ಚಲಿಗೆ ಎರವಾದ ಕರುವಿನಂತೆ…!







koneya eradu saalugaLinda kavite aptavaayitu..sir!!!
koneya eradu saalugaLinda kavite aptavannisitu..sir!!!
ಹೀಗೆ…ಬರುವ ಗಿರಾಕಿಗಳಿಗೆ
ಕಾಯಬೇಕು ನಿರಂತರ…ಮೈಯಾನಿಸಬೇಕು
ಹುರುಪಿಲ್ಲದಿದ್ದರೂ… ಹೊಸ ರೂಪಿನಲ್ಲಿ
ಬಟವಾಡೆಗೆ ಸಿದ್ಧವಾದ ಪತ್ರಗಳು
ಅಂಚೆ ಕಚೇರಿಯ ಮೋಹರಿಗೆ ಮೈಯೊಡ್ಡಿದಂತೆ…
ಬದುಕು ದುಸ್ತರಗೊಂಡ ಜೀವಗಳ ಕಥೆಯನ್ನು ಹಿಡಿ ಹಿಡಿಯಾಗಿ ಕಟ್ಟಿಟ್ಟುಕೊಡುವ ನಿಮ್ಮ ಕವಿತೆಗೆ ಸಲಾಮು…
maarmika………
Liked it…