ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ಮೊಗಸಾಲೆ ಹೊಸ ಕವಿತೆ – ಒಂದು ಮುಂಜಾನೆ…

ಡಾ ನಾ ಮೊಗಸಾಲೆ

ಹೂಬಿಸಿಲು ಇದೇ ತಾನೆ ಹಾಸಿಗೆಯಿಂದ ಎದ್ದ
ಮೊಮ್ಮಗುವಾಗಿದೆ ನನ್ನ ತೋಟದಲ್ಲಿ
ಅದರ ನಗು ಕೇಕೆ ಗಿಡಮರಗಳ ನಡುವೆ
ಬಿಸಿಲಕೋಲಾಗಿ ಕಾಡುವಂತಿಹುದು ಇಲ್ಲಿ

ಮಂಡಿ ನೋವಿನಿಂದ ಬಳಲುವ ನನಗೆ
ಈಗ ಆ ಮಗುವಿನದ್ದೇ ಉಲ್ಲಾಸ
ಮೆಲ್ಲನೆ ಇಳಿದರೆ ಚಾವಡಿಯ ಮೆಟ್ಟಲುಗಳಿಂದ ಅಂಗಳಕ್ಕೆ
ತಬ್ಬಿಕೊಳಲು ಓಡಿ ಬರುವ ಮೊಮ್ಮಗ

ಸುಮ್ಮನೆ ನಿಂತೆ ಭೂಮಿ ಆಕಾಶವ ನೋಡುತ್ತ
ಧ್ಯಾನಿಸುವಂತೆ ಇಹಪರಗಳ
ಇಲ್ಲೇ ಇಲ್ಲೆ ಇರುವಂತಿದೆಯಲ್ಲ ಎರಡೂ
ಆಮೇಲೆ ಯಾಕೆ ಹುಡುಕಬೇಕು ನಾಕ ನರಕ?

ಇವಳು ಕರೆದಳು ಬನ್ನಿ ಒಳಗೆ
‘ತಂದಿದ್ದೇನೆ. ಬಿಸಿಬಿಸಿ ಟೀ ನಿಮಗೆ’
ನಾನೂ ನಗುತ್ತ ಅವಳಿಗೆಂದೆ ‘ನೀನೇ ಬಾ ಹೊರಗೆ
ಇಬ್ಬರೂ ಹಂಚಿಕುಡಿಯೋಣ ಟೀಯನ್ನು ಒಟ್ಟಿಗೆ!’

‍ಲೇಖಕರು Admin

8 January, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading