ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ನಾ ನಡೆದೆ ಕಡಿಮೆ ಸವೆದ ಕವಲಿನಲಿ…'

ಹೆಚ್ಚು ಸವೆಯದ ಹಾದಿ

( 1916 ರಲ್ಲಿ Robert Frost ಬರೆದ “The Road Not Taken”ಕವನದ ಸ್ಫೂರ್ತಿಯಿಂದ )

ಜಿ ವೆಂಕಟೇಶ

ಹಸಿರು ಕಾಡಿನ ನಡುವೆ ಕವಲೊಡೆದ ದಾರಿ
ಕ್ಷಮಿಸಿ, ಒಬ್ಬಂಟಿಯಾಗಿ ನಡೆಯಲಾರೆ ಎರಡೂ ಹಾದಿ
ಗಳಲಿ, ನಿಂತು ಇಣುಕಿದೆನು ಆ ಕವಲುಗಳನು
ದೂರದೂರಕೆ ದಟ್ಟಮರಗಳ ನಡುವೆ ಎಲ್ಲಿಹುದು ತಿರುವೆಂದು
 
ಎರಡೂ ದಾರಿಗಳು ತೋರಿದವು ಸಮ ಪಯಣ ಭಾವವನು
ಉದುರಿದ ಎಲೆಗಳೊಳಗೆ ಯಾರೂ ತುಳಿಯದ ಕುರುಹುಗಳನು
 
ಸುಮ್ಮನೆ, ನಡೆದೆ ಪಕ್ಕದ ಹಾದಿಯಲಿ ಸಮಚಿತ್ತ ಭಾವದಲಿ
ಹಾಸಿದ ಹುಲ್ಲುಗರಿಗಳ ಸ್ಪರ್ಶಸುಖವನು ನೆನೆದು
ದಾರಿ ಇದ್ದರೂ ಸಹ ಹೆಚ್ಚು ಸವೆಯದ ಹಾದಿಯಲಿ

 
ಯುಗಯುಗಗಳಿಂದಲೂ ಕವಲೆರಡಿವೆ ಕಾಡಿನ ಹಾದಿಯಲಿ
ನಾ ನಡೆದೆ ಕಡಿಮೆ ಸವೆದ ಕವಲಿನಲಿ
ಚುಚ್ಚಿದವು ಮುಳ್ಳುಕಂಟಿಗಳು, ಸುಟ್ಟವು ಕಲ್ಲುಬಂಡೆಗಳು
ಒಮ್ಮೊಮ್ಮೆ ಕಗ್ಗತ್ತಲು, ಮಗದೊಮ್ಮೆ ತೀಕ್ಷ್ಣಕಿರಣಗಳು
ಹಸಿವು ದಾಹಗಳ ಸುದೀರ್ಘ ಪಯಣ, ನಡೆಸಿತೆನ್ನ ಆಶಾಕಿರಣ
 
ಅಭಿಮಾನವೆನಗೆ ತಿಳಿಸಲು ನಿಮಗೆ
ನಿಲ್ಲಿಸಿತು ಈ ಪಯಣವೆನ್ನನು ಯಾರೂ ನಿಲ್ಲದ ತಾಣದಲಿ
ತೋರಿಸಿತು ಅಂತರವನು ಜಗವು ಮೆಚ್ಚುವ ರೀತಿಯಲಿ
 

‍ಲೇಖಕರು avadhi

25 April, 2014

5 Comments

  1. Anonymous

    sir, chennagide

  2. Venkatesha G

    Thank U Anonymus

  3. alamelu

    Super sir simply super

  4. mmshaik

    very nice..

  5. chowdary

    Good work sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading