ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ದಿವಾಕರ ಹೊಸ ಕವಿತೆ- ಅವಳೆಲ್ಲಿ ಮರೆಯಾದಳು ???

ನಾ ದಿವಾಕರ

ಅವರು ಷರಾ ಬರೆಯುತ್ತಿದ್ದರು
ಇವಳ ಕಂಬನಿ ಬತ್ತಿತ್ತು
ಅವನ ಕೊರಳಲಿ ಮಾಲೆಯಿತ್ತು ;

ಅವರು ವಾದ ಮಾಡುತ್ತಿದ್ದರು
ಇವಳ ಪಾದ ಬೆವತಿತ್ತು
ಅವನ ಕೈ ಜೇಬಿನೊಳಗಿತ್ತು ;

ಅವರು ದಡವ ದಿಟ್ಟಿಸುತಿದ್ದರು
ಇವಳ  ನೆಲ ಕುಸಿದಿತ್ತು
ಅವನ ಬೂಟು ಮಿನುಗುತ್ತಿತ್ತು ;

ಅವರು  ಚರ್ಚೆ ನಡೆಸುತ್ತಿದ್ದರು
ಇವಳ ಎದೆ ನಡುಗಿತ್ತು
ಅವನ ಮೊಗವು ಅರಳಿತ್ತು ;

ಅವರು ತಲೆ ಆಡಿಸುತಿದ್ದರು
ಇವಳ ಶಿರ ಬಾಗಿತ್ತು
ಅವನ ಕಣ್ಣು ಕೆಂಪಾಗಿತ್ತು ;

ಅವರು ಎದ್ದು ಹೊರಟರು
ಇವಳ ಉಸಿರಡಗಿತ್ತು
ಅವನ ಮೇಳ ಮುನ್ನಡೆದಿತ್ತು ! 

‍ಲೇಖಕರು Admin

3 September, 2022

2 Comments

  1. prathibha nandakumar

    ತುಂಬಾ ಚೆನ್ನಾಗಿದೆ ಸರ್ ನಿಮ್ಮ ಶೈಲಿ ಇಷ್ಟ ನನಗೆ

  2. ನಾ ದಿವಾಕರ

    ಧನ್ಯವಾದಗಳು ಮೇಡಂ. ನಿಮ್ಮ ಮೆಚ್ಚುಗೆ ಪ್ರಶಸ್ತಿಗೆ ಸಮಾನ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading