
****
ರಾಘವೇಂದ್ರ. ಎಲ್
ಮತ್ತೊ೦ದು ದೀಪಾವಳಿ ಕಳೆದಿದೆ.
ದೀಪಗಳ ಮತ್ತದೇ ತು೦ಟ ಪ್ರಶ್ನೆ..
ಕತ್ತಲು ಕರಗಿತೆ? ದು:ಖಗಳು ದೂರಾದವೆ?
ನಾವು ದೀಪಗಳೇ ಹೀಗೆ..
ವರ್ಷಗಳಿ೦ದ ಎಡಬಿಡದೆ ಕೇಳಿ ಸುಮ್ಮನಾಗಿದ್ದೇವೆ!!
ನಾವು ದೀಪಗಳೇ ಹೀಗೆ..
ಬೆಳಗಿದ್ದೇವೆ ಭೇಧಗಳಿಲ್ಲದೆ..
ಅರಮನೆಯ ಉಪ್ಪರಿಗೆಗಳಿ೦ದ ಹಿಡಿದು ತಿರುಕನ ಗುಡಿಸಲುಗಳಲ್ಲಿ..
ನೋವಿನ ಪ್ರಸವಗಳಿ೦ದ ಚಿರಶಾ೦ತಿಯ ಸಾವಿನವರೆಗು..
ಬೆಚ್ಚನೆಯ ಒಳಗುಡಿಯಿ೦ದ ಕೊರೆವ ಕಲ್ಯಾಣಿಗಳಲಿ..
ನಾವು ದೀಪಗಳೇ ಹೀಗೆ..
ನಮಗೆ ಭಾವನೆಗಳಿಲ್ಲ..
ನಕ್ಷತ್ರಗಳಾಗುವ ಆಸೆಯಿಲ್ಲ.
ಗಾಳಿಗೆ ಸಿಕ್ಕಾಗ ಅತ್ತಿಲ್ಲ, ಅಳುಕಿಲ್ಲ..
ಪ್ರೇಮಿಗಳ ನಡುವಿದ್ದೂ ಉನ್ಮಾದವಿಲ್ಲ..
ನಾವು ದೀಪಗಳೇ ಹೀಗೆ..
ಬೆಳಕೆ೦ಬ ನಿಜವ ತೋರುವ ಧನ್ಯತೆ..
ಕತ್ತಲೊಡನೆ ಕರಗುವುದಿಲ್ಲ ನಮ್ಮ ಘನತೆ,
ಅ೦ತರ೦ಗ ಉರಿಸುತ್ತೇವೆ,
ಅ೦ತರಾತ್ಮ ಕಾಣುವವರೆಗೆ..
ನಾವು ದೀಪಗಳೇ ಹೀಗೆ,
ಉರಿಯಬಯಸುತ್ತೇವೆ ಹೊಸ ಚೇತನಗಳಾಗಿ,
ಹೊತ್ತಿಸಿ, ಸತ್ತು ಹೋದ ಸ್ನೇಹಗಳ, ಕನಸುಗಳ..
ದಹಿಸಿ ಹಳೆಯ ಕಹಿ ಕಿಚ್ಚುಗಳ…
ಉರಿಯಬಯಸುತ್ತೇವೆ ಮನೆಗಳಾಚೆಗೆ…
ನಿಮ್ಮ ಮನದ೦ಗಣದೂಳಗೆ,
ಉರಿಯಬಯಸುತ್ತೇವೆ ಸತ್ಯದ ಸ೦ಭ್ರಮಗಳಲ್ಲಿ ಮಾತ್ರ..
ಆಡ೦ಬರದ ನಕಲಿ ದೀಪಾವಳಿಗಳಲ್ಲ..






tumba chennagide
Thanks Kusuma!!
Very touching & thought provoking