ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ನಾಳೆಯ ದಿನದ ಕನಸ ಬೆಸೆದು…’ – ಸುಚಿತ್ರಾ ದೇವಾಡಿಗ ಬರೀತಾರೆ

ಬೆಂಕಿಯ ಒಡಲು

ಸುಚಿತ್ರಾ ದೇವಾಡಿಗ


ಧಗ ಧಗನೆ ಉರಿಯುತಿದೆ ನೋಡಾ…
ಧರೆಯ ಸುಟ್ಟು…
ತನಗೆಯೇ ಎಲ್ಲ ಎಂದೆನುತ ಬಾಚಿ
ಸ್ವಚ್ಛಗೊಳಿಸಿ…..
ಇನ್ನು ಬೇಕೆಂದು ಧಾವಿಸಿ ಧಾವಿಸಿ
ಹರಡುತಿಹಳು…
ಒಂದು ಕಿಡಿಯು ಸಾಕೆನಗೆ
ಇಡೀ ಧರೆಯ ಸುಡುವೆನು..
ಅದು ಮಂದಿರ… ಇದು ಮಸೀದಿ…
ಅವ ನೀಚ… ಇವ ಉತ್ತಮ…
ಅವ ಹಿಂದು.. ಇವ ಮುಸ್ಲಿಮ- ಕ್ರೈಸ್ತನೆಂದು
ಭೇದವಿಲ್ಲೆನಗೆ ಎಲ್ಲರೂ ಒಂದೆಂದು…
ನನ್ನೊಡಲ ಕೆಣಕದಿರಿ ನೀವು
ಸಹಿಸಿದೆನು ನಿಮ್ಮಯ ಹಿಂಸೆ
ನಾಳೆಯ ದಿನದ ಕನಸ ಬೆಸೆದು
ಆದರೂ ಮಿತಿಮೀರಿದ ಆಟ
ಕೆಣಕಿತು ನನ್ನ, ನಿಮ್ಮದೇ ನೋಟ
ಅರಿಯಿರಿ ನೀವು ನನ್ನ ಕ್ರೋಧ
ನನ್ನೊಡಲು ತಂಪೆನಿಸಿ…
ತೀರಿದ ಮೇಲೆ
ನಾನೇ ಶಾಂತಳೆಂದು…

‍ಲೇಖಕರು avadhi

17 August, 2013

2 Comments

  1. suhana

    chennagide

  2. nitin

    Super

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading