ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನೊಪ್ಪುವುದಿಲ್ಲ.. ನಿಮ್ಮ ಕಳ್ಳಪ್ರೇಮದ ಸಮಜಾಯಿಸಿ..!!

ರಾಜೇಂದ್ರ ಪ್ರಸಾದ್

ಅಕ್ಕನಿಗೆ ಒಬ್ಬ ಚೆನ್ನಮಲ್ಲ
ಮೀರಾಳಿಗೊಬ್ಬ ಗೊಲ್ಲ
ಚೈತನ್ಯನಿಗೆ ಸೂರದಾಸನಿಗೆ
ಬಸವಣ್ಣನಿಗೆ ಇಳೆಯಾಗಂಡ ಗುಡಿಮಾರನಿಗೆ
ದಾಸಿಮಯ್ಯನಿಗೆ ದಾರಶಿಖೋವಿಗೆ
ಏನಿದು ಎಲ್ಲರಿಗೂ ಈ ಭಗವಂತನೇ
ಪ್ರಿಯಕರನಾಗುವುದಂತೆ!
ಹೇಗೆ? ಹೇಗೆ?
ಶರಣ ಸತಿಯಂತೆ ಲಿಂಗಪತಿಯಂತೆ!

ನಾನೊಪ್ಪುವುದಿಲ್ಲ. ತೆಗೆಯಿರಿ.
ನಿಮ್ಮ ಕಳ್ಳಪ್ರೇಮದ ಸಮಜಾಯಿಸಿ;
ಭಗವಂತನೆನಗೆ ಒಪ್ಪಿತವಲ್ಲ.
ನಾನೇನು ಅವನಂತೆ ದ್ವಿಲಿಂಗಿಯಲ್ಲ!

ಈ ಮರ್ತ್ಯದ ಮರುಜೇವಣಿಯಲ್ಲಿ
ಸಿಕ್ಕು ಆನು ಕಾಯುತ್ತಿರುವುದು
ಶ್ರೀಶೈಲದ ಭ್ರಮರಾಂಬೆಗೆ
ಮಥುರೆಯ ಭಾಮೆಗೆ
ಪಟ್ಟಣದ ರಂಗನಾಯಕಿಗೆ
ಅವಳ ಸಖಿ ಲೋಪಾಮುದ್ರೆಗೆ ..

‍ಲೇಖಕರು Avadhi GK

22 February, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading