ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ನಾನೇ ರಾಧೆ ಅವನೇ ಮಾಧವ…' – ಸ್ಮಿತಾ ಕವಿತೆ

ರಾಧಾ ಮಾಧವ

ಸ್ಮಿತಾ ಅಮೃತರಾಜ್, ಸ೦ಪಾಜೆ

ಅವ ಕೊಳಲ ತುಟಿಗಿಟ್ಟರೆ ಸಾಕು
ಮುದಗೊಳ್ಳುತ್ತಾರೆ ಗೋಪಿಕೆಯರು
ನಾಚಿ ನೀರಾಗುತ್ತಾರೆ ನೀರೆಯರು.
 
ಕಣ್ಣಲ್ಲಿ ಕಣ್ಣಿಳಿಸಿ ಬೆರಳಲ್ಲೇ ಕುಣಿಸಿ
ಮುರಲಿ ನುಡಿಸುವ ಪರಿಗೆ
ಹೃದಯ ತ೦ತಿಯ ಮೀಟಿ ಹರಿಯುತ್ತದೆ
ಪ್ರೇಮ ಪಲ್ಲವಿ ರಾಗ.

ಅಲ್ಲಿ ಧೇನಿಸುತ್ತಿದ್ದಾರೆ…
ಎಷ್ಟೊ೦ದು ಗೋಪಿಕೆಯರು
ಎಷ್ಟೊ೦ದು ನೀರೆಯರು
 
ಹಿಗ್ಗು ಮೊಗ್ಗೊಡೆದು ಒಳಗೊಳಗೇ
ಪುಳಕಗೊ೦ಡು ಅರಳುತ್ತಾ ವೇಣು
ನಾದಕ್ಕೆ ದನಿಯಾಗಿ ಹಾಡುತ್ತಿದ್ದಾರೆ
ನಾನೇ ರಾಧೆ
ಅವನೇ ಮಾಧವ.
 
ಕೃಷ್ಣನೆ೦ಥ ಬಲ್ಲ ಜಾಣ ರಸಿಕ
ಎಲ್ಲರೆದೆಯ ಕೊಳದೊಳಗೆ ಇಳಿದು
ಈಜಾಡಿದ೦ತೆ ಕೊಳಲ ನುಡಿಸುವ ಮೋಡಿಗೆ
ಯಮುನೆ ತೀರೆಯ ತು೦ಬಾ ನಾಚಿಕೆಯ
ಅಲೆಗಳು.
 
ತಪ್ಪು ಒಪ್ಪುಗಳರಿಯದ ಚೆಲುವೆ
ರಾಧೆಯೆಷ್ಟು ಮುಗುದೆ?
 
ಸಿಗದೆ ಸತಾಯಿಸುತ್ತಾ
ಲಲ್ಲೆಗೆರೆಯುತ್ತಾ ಬರುವ ಅವನ
ಮೋಹಕ ನಾದಕ್ಕೆ ಪರವಶಳಾಗುತ್ತಾ
ಕಣ್ಮುಚ್ಚಿ ಪ್ರತೀ ಬಾರಿ ಮೆಲ್ಲನುಸುರುತ್ತಾಳೆ….
 
 
ನಾನೇ ಸೀತೆ
ಅವನೇ ರಾಮ
ಗೋಪಿಕೆಯರಿಗೇನೋ ಮರಳು
ಸುಮ್ಮಗ್ಯಾಕೆ ಇಲ್ಲಸಲ್ಲದ ಅನುಮಾನದ
ನೆರಳು?!

‍ಲೇಖಕರು avadhi

2 September, 2013

3 Comments

  1. Vedanta Adiga

    ಚೆನ್ನಾಗಿದೆ, ಒಬ್ಬ ಸರಳ ಸಹಜ ಸುಂದರಿಯ ಮುಗ್ಧ ನಗುವಿನ ಹಾಗೆ!

  2. Anonymous

    ಚೆನ್ನಾಗಿದೆ

  3. Gururaj katriguppe

    nice, good poem.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading