ಜಿ ವಿ ಜಯಶ್ರೀ ಇದ್ದಕ್ಕಿದ್ದಂತೆ ‘ಮೀಡಿಯಾ ಮೈಂಡ್’ ಹಾಗೂ ‘ಅವಧಿ’ಯಲ್ಲಿ ಕಾಣಿಸಿಕೊಳ್ಳತೊಡಗಿದ್ದೇ ತಡ, ‘ಯಾರವರು?’ ಎಂದು ಕೇಳಿ ಸಾಕಷ್ಟು ಮೇಲ್ ಗಳು ಬಂದವು. ಫೋನ್ ಕರೆಗಳಿಗಂತೂ ಲೆಕ್ಕವೇ ಇಲ್ಲ, ಹೋದ ಕಡೆ ಅದೇ ಕುತೂಹಲ..
ಮೊದಲನೆಯದಾಗಿ ಜಯಶ್ರೀ ಯಾರು ಎಂಬುದು ‘ಅವಧಿ’ ಬಳಗಕ್ಕೂ ಗೊತ್ತಿರಲಿಲ್ಲ. ಫೇಸ್ ಬುಕ್ ನಲ್ಲಿ ಪ್ರಕಟವಾಗುತ್ತಿದ್ದ ಮೀಡಿಯಾ ವಿಮರ್ಶೆ ಸಾಕಷ್ಟು ಬೋಲ್ಡ್ ಆಗಿತ್ತು, ಜೊತೆಗೆ ಫ್ಲರ್ಟಿಂಗ್ ಶೈಲಿ, ಕಿಕ್ಕಿಂಗ್ ಮಾತು.. ಹಾಗಾಗಿ ಜಯಶ್ರೀಗೆ ಒಂದು ಮೇಲ್ ಮಾಡಿದೆವು. ಫೇಸ್ ಬುಕ್ ನಲ್ಲಿ ಬರೆಯುತ್ತಿರುವ ನಿಮ್ಮ ಕಾಲಂ ನಾವು ಬಳಸಿಕೊಳ್ಳಬಹುದೇ ಅಂತ.
ಒಂದೆರಡು ಅಂಕಣ ಪ್ರಕಟವಾಯ್ತು ನೋಡಿ.. ಜಯಶ್ರೀ ಅವರಿಗೂ ಉಮೇದು ಬಂತು. ಪ್ರತಿಕ್ರಿಯೆಗಳಿಗಂತೂ ಬರವಿರಲಿಲ್ಲ. ಆದರೂ ಆಕೆ ಪತ್ರಕರ್ತೆ ಎಂದು ಅವರ ಫೇಸ್ಬುಕ್ ಪ್ರೊಫೈಲ್ ನಲ್ಲಿ ಬರೆದುಕೊಂಡಿದ್ದನ್ನು ಬಿಟ್ಟರೆ ಉಳಿದಂತೆ ಯಾವುದೇ ವಿವರ ಗೊತ್ತಿರಲಿಲ್ಲ.
ಬರಹವೇ ಮಾತನಾಡುತ್ತಿರುವಾಗ ವ್ಯಕ್ತಿಯ ಪರಿಚಯ ಏಕೆ ಎಂದು ನಾವೂ ಸುಮ್ಮನಾದೆವು. ಸುಘೋಷ್ ಒಮ್ಮೆ ಮಾತನಾಡಿ ಅವರು ಈಟಿವಿ ಯವರಲ್ಲವಾ..? ಅಂತ ಕೇಳಿದ್ದರು. ಹಾಗೆ ಅವರಿರಬಹುದು, ಇವರಿರಬಹುದು ಎಂದು ಊಹೆ ಮಾಡಿ ಕೇಳಿದರು ಸಾಕಷ್ಟು ಜನ. ಇನ್ನು ಕೆಲವರು ಊಹೆ ಮಾಡಲಿಲ್ಲ, ಅದು ಜಯಶ್ರೀ ಹೆಸರಿನ ನಾನೇ ಎಂದು ಷರಾ ಬರೆದು ಕೂತುಬಿಟ್ಟರು.
ಹಾಗಿರುವಾಗಲೇ ಮೇಫ್ಲವರ್ ಪ್ರಕಟಿಸಿದ ‘ತುಂಗಾ’ ಕಾದಂಬರಿ ಬಿಡುಗಡೆ ಆಕೃತಿ ಮಳಿಗೆಯಲ್ಲಿ ಹಮ್ಮಿಕೊಂಡಾಗ ದಿಢೀರ್ ಎದುರಾದವರು ಜಯಶ್ರೀ. ವಿಶೇಷವೆಂದರೆ ಆ ದಿನ ಸುಘೋಷ್ ಸಹಾ ನಮ್ಮ ಜೊತೆಗೆ ಇದ್ದರು. ನಾನೇ ಎಂದು ಸಾಕಷ್ಟು ಮಂದಿ ಅಂದುಕೊಂಡದ್ದರಿಂದ ‘ಅವರನ್ನು ಫೋಟೋದಲ್ಲಿ ದಾಖಲಿಸಿರಪ್ಪಾ..’ ಎಂದು ತಮಾಷೆ ಮಾಡಿದೆ. ಅವರ ಹಿರಿಯರೂ ಪತ್ರಿಕೋದ್ಯಮದಲ್ಲಿದ್ದವರೇ .
ಈ ಮಧ್ಯೆ ಜಯಶ್ರೀ ತಮ್ಮ ಬ್ಲಾಗ್ ನಲ್ಲಿ ಎಷ್ಟೋ ಮಂದಿ ಅವರ ಬರಹದ ಮೇಲೆ ನಾನು ಒತ್ತಡ ಹಾಕುತ್ತಿದ್ದೇನೆ ಎಂದು ಅಂದುಕೊಂಡ ಬಗ್ಗೆ ಬರೆದಿದ್ದರು. ಒತ್ತಡ ಹಾಕಿದ್ದೇನೆ-ಒಂದು ಬಾರಿ- ನನ್ನ ಬಗ್ಗೆ ಹೊನ್ನ ಶೂಲಕ್ಕೆರಿಸಿದ ಪ್ರಸಂಗ ಬಂದಾಗ. ದಯವಿಟ್ಟು ನನ್ನ ಬಗ್ಗೆ ಬೇಡ ಅಂತ.
ಆದರೂ ಜಯಶ್ರೀ ಅದನ್ನು ಬಿಟ್ಟಿಲ್ಲ ಏನು ಮಾಡುವುದು?
ಇರಲಿ, ಈ ಜಯಶ್ರೀ ಬ್ಲಾಗ್ ಗೆ ಒಂದು ವರ್ಷದ ಸಂಭ್ರಮ. ವಸುದೇವ ಅನ್ನುವ ಹೆಸರಿನ ಅವರ ಬ್ಲಾಗ್ ನೀವು ಓದಬೇಕು. ಅವರ ಹೆಸರು ಜಿ ವಿ ಜಯಶ್ರೀ ಆದ್ದರಿಂದ ನಾನು ಅವರನ್ನು ‘ಜೀವಿ’ ಎಂದು ಕರೆಯುತ್ತಿದ್ದೆ. ಬ್ಲಾಗ್ ‘ಜೀವಿ’ಗೆ ತುಂಬು ಅಭಿನಂದನೆಗಳು. ಅವರು ಫೋಟೋ ಹಾಕಲು ಅವಕಾಶ ಕೊಟ್ಟ ದಿನ ಖಂಡಿತಾ ನಾವು ತೆಗೆದಿರುವ ಫೋಟೋಗಳು ಪ್ರಕಟವಾಗುತ್ತದೆ..
ಇಲ್ಲಿದೆ ಜಯಶ್ರೀ ಬ್ಲಾಗ್ ಗೆ ಒಂದು ತುಂಬಿದ ಕಾರಣಕ್ಕೆ ಬರೆದುಕೊಂಡದ್ದು
ಒಹ್ ! ನನ್ನ ಬ್ಲಾಗಿಗೆ ಮತ್ತೊಂದು ಹುಟ್ಟು ಹಬ್ಬ 🙂 . ನನ್ನ ಬದುಕಿನಲ್ಲಿ ಈ ದಿನ ಅತ್ಯಂತ ಸಂತೋಷ ನೀಡುವ ದಿನ. ಒಂದು ಸಲ ನನ್ನ ಬರಹ ಓದಿದ ಅವಧಿ-ಮೀಡಿಯ ಮೈಂಡ್ ಓದುಗರೊಬ್ಬರು ಈ ಎಲ್ಲದಕ್ಕೂ ನೀವು ಹೇಗೆ ಸಮಯ ಹೊಂದಿಸಿ ಕೊಳ್ತೀರಿ ಎಂದು ಪ್ರಶ್ನೆ ಮಾಡಿದ್ದರು . ಅವರು ಕೇಳಿದ್ದ ಈ ಪ್ರಶ್ನೆ ನನ್ನನ್ನು ಬಹಳಷ್ಟು ಮಂದಿ ಕೇಳಿದ್ದರು. ನಿಜ ಈಗ ನನ್ನ ಬ್ಲಾಗಿಂಗ್ ವಿಷ್ಯ ಸುಲಭ ಹಾಗೂ ಸರಳವಾದ ವಿಷ್ಯ ಆಗಿರಲಿಲ್ಲ. ಓದುಗರಿಗೆ ಅಯ್ಯೋ ಇದೂ ಒಂದು ಸಂಗತೀನ, ಆರಾಂಸೆ ಟೀವಿ , ನೋಡಿ ರೇಡಿಯೋ ಕೇಳಿದ್ರಾಯ್ತು ಅಂತ ಮೂಗು ಮುರಿಯ ಬಹುದು, ಆದರೆ ಅದರಷ್ಟು ಹಿಂಸೆ ( ಅನೇಕ ಬಾರಿ) ಆಗುವಷ್ಟು ಮತ್ತೊಂದು ಕೆಲಸಕ್ಕೆ ಆಗದು.ಮಾಮೂಲಿ ವೀಕ್ಷಣೆಗೂ ಹಾಗೂ ಬರೆಯುವ ಉದ್ದೇಶದಿಂದ ಮಾಡುವ ವೀಕ್ಷಣೆಗೂ ತುಂಬಾ ವ್ಯತ್ಯಾಸ ಇದೆ.
ಪತ್ರ ಕರ್ತೆ ಆಗಿರುವುದರಿಂದ ಬರೆಯುವ ಕೆಲಸ ನನಗೆ ಹೊಸತಲ್ಲ. ಅದೇ ರೀತಿ ಸ್ವಲ್ಪ ಮಟ್ಟಿನ ಕೆಲಸವೂ ಈ ಕ್ಷೇತ್ರದಲ್ಲಿ ನಾನು ಮಾಡಿದ್ದೇನೆ. ಫ್ರೀಲ್ಯಾನ್ಸರ್ ಆದಾಗಿನಿಂದ ಈವರೆಗೂ ನನ್ನ ಯಾವುದೇ ಲೇಖನಗಳು ಜನರಿಗೆ ಬೇಸರ ಹುಟ್ಟಿಸಿಲ್ಲ. ಕೇವಲ ಪತ್ರಿಕೆ ಹಾಗೂ ಬ್ಲಾಗಿಂಗ್ ಮಾತ್ರ ನಾನು ಮಾಡಿಲ್ಲ. ಟೀವಿ ಒಂದರ ಸೀರಿಯಲ್ಗೆ ಸಂಭಾಷಣೆಯನ್ನು ಬರೆದಿದ್ದೇನೆ. ಆಮಟ್ಟಿಗೆ ಬರಹ ಪ್ರಪಂಚದಲ್ಲಿ ನನಗೇ ಅಲ್ಪಮಟ್ಟಿಗಾದರು ಸ್ಥಾನ ಇದೆ ಎನ್ನುವ ಮಾತನ್ನು ಧೈರ್ಯದಿಂದ ಹೇಳ ಬಯಸುತ್ತೇನೆ.
ಯಾಕೋ ಗೊತ್ತಿಲ್ಲ ನನ್ನ ವಿಷಯಕ್ಕೆ ಬಂದ್ರೆ ಹೆಸರು ಜಯ ಆದ್ರೆ ಸದಾ ಸೋಲು, ಆ ಸೋಲಿನ ಹೊಡೆತದಿಂದ ಹೊರಗೆ ಬರ ಬೇಕಾದರೆ ಸಿಕ್ಕಾಪಟ್ಟೆ ಶ್ರಮ . ಪ್ರಾಯಶ: ಆ ಒಂದು ಹೊಡೆದಾಡುವ ಗುಣ ಹೊಸ ಪ್ರಯತ್ನಗಳನ್ನು ಖುಷಿಯಾಗಿ ಮಾಡಲು ಸಾಧ್ಯ ಆಗಿರೋದು. ಮೊಟ್ಟ ಮೊದಲ ಬಾರಿ ಈ ವಿಷಯದ ಬಗ್ಗೆ ನಾನು ಬ್ಲಾಗಿಂಗ್ ಆರಂಭಿಸಿದಾಗ ನಕ್ಕವರ ಸಂಖ್ಯೆ ಅಧಿಕ. ಕೆಲವರಂತೂ ನಾನು ಪ್ರಪಂಚದ ಅತಿ ದೊಡ್ದ ಪೆದ್ದಿ ಆನ್ನುವಂತೆ ತಿರಸ್ಕಾರವಾಗಿ ಕಂಡಿದ್ದರು. ಅವರ ಪ್ರಕಾರ ಇದು ಅನವಶ್ಯಕ ಕೆಲಸ. ಬಿಡಿ ಅದು ಅವರ ಮನಸ್ಥಿತಿ , ಯಾರೇನೂ ಮಾಡೋಕೆ ಆಗಲ್ಲ…
ಯಾವಾಗ ಈ ವಿಷಯದಲ್ಲಿ ಬರೆಯುವ ಕೆಲಸ ಆರಂಭ ಮಾಡಿದೆನೋ ಆಗ ಹೆಚ್ಚುಇದರ ಬಗ್ಗೆ ಗಮನ ಕೊಟ್ಟ ಚಾನೆಲ್ ಸುವರ್ಣ..ಅವರಿಗೆ ನಾನು ಸದಾ ಥ್ಯಾಂಕ್ಸ್ ಹೇಳೋಕೆ ಇಷ್ಟ ಪಡ್ತೀನಿ. ಅಲ್ಲಿನವರು ನನ್ನ ಜೊತೆ ಬಾಂಧವ್ಯ ಬೆಳೆಸಿಕೊಂಡರು. ಒಂದರ್ಥದಲ್ಲಿ ಇಂತಹ ಒಂದು ವಿಷಯವನ್ನು ನಾನು ಮುಂದುವರೆಸ ಬಲ್ಲೆ ಎನ್ನುವ ವಿಷಯಕ್ಕೆ ಶಕ್ತಿ ನೀಡಿದ್ದೆ ಆ ಚಾನೆಲ್ ಮಂದಿ. ಶಶಿಧರ್ ಭಟ್, ಚಾಮರಾಜ್ ಸವಡಿ .. ಯಾರೇ ಆಗಿರ ಬಹುದು.. ನನ್ನ ಪಯಣವನ್ನು ಯಶಸ್ವಿ ಮಾಡುವ ಈ ಕೆಲ್ಸಕ್ಕೆ ಅವರ ವಿಶ್ವಾಸ ತುಂಬಾ ಹೆಲ್ಪ್ ಮಾಡಿತು. ಈ ಪಯಣದಲ್ಲಿ ನೀವು ನಂಬಲಿಕ್ಕಿಲ್ಲ ನಾನು ಅತಿ ಆದರ್ಶವಂತ ವ್ಯಕ್ತಿಗಳು ಅನ್ನಿಸಿಕೊಂಡ ಕೆಲವು ಮೀಡಿಯ ಪರ್ಸನಾಲಿಟಿಗಳು ನನ್ನ ಕಣ್ ಮುಂದೆ ತುಂಬಾ ಅಲ್ಪರಾಗಿ ಬಿಟ್ರು. ಆ ಸಂಗತಿ ನನ್ನ ಮನಕ್ಕೆ ತುಂಬಾ ಘಾಸಿ ಮಾಡಿ ಬಿಡ್ತು. ಯಾಕಾಗಿ ಈ ಬರೆಯುವ ಕೆಲಸ ಆರಂಭಿಸಿ ಬಿಟ್ಟೆ ಅನ್ನುವಷ್ಟು ದುಃಖ ಆಗಿತ್ತು. ( ನಾನು ಎಕನಾಮಿಕ್ಸ್ ಪೋಸ್ಟ್ ಗ್ರಾಜ್ಯುಯೇಟ್ ).ಆದರ ಜೊತೆಗೆ ನನಗೆ ಚಂದ್ರೇ ಗೌಡ್ರು, ವಿನಾಯಕ್ ಜೋಶಿ, ನಿರಂಜನ ದೇಶಪಾಂಡೆ, ಕೀರ್ತಿಯಂತಹ ತರ್ಲೆ ಗಳು, ಖುಷಿ ಹಂಚುವ ಫ್ರೆಂಡ್ಸ್ ಗಳು ಜೊತೆಯಾದರು. ನನ್ನ ಮೌನವನ್ನು ಸಹಿಸದ ಮಂದಿ ಹೆಚ್ಚಾದರು. ಎಂಥಹ ಸಮಯದಲ್ಲೂ ನನಗೆ ಬೋರ್ ಆಗದೆ ಇರುವಂತಹ ಅಪರೂಪದ ವ್ಯಕ್ತಿಗಳು ಬ್ಲಾಗಿಂಗ್ ನಿಂದ ಸ್ನೇಹಿತರಾದರು. ಬರಿಯಿರಿ ಬರಹ ನಿಮ್ಮ ಆತ್ಮಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಸದಾ ಪ್ರೋತ್ಸಾಹ ನೀಡುವ ಚಾಮರಾಜ್ ಸವಡಿ ಸರ್ ನನ್ನ ಆಪ್ತವಲಯದವರಲ್ಲಿ ಒಬ್ಬರಾದರು.
ಸಾಮಾನ್ಯವಾಗಿ ಸಮಾಜ ಹೊಗಳುವುದು ,ಗುರುತಿಸುವುದು ಗೆದ್ದ ಕುದುರೆಗಳನ್ನು ಮಾತ್ರ, ಸೋತ ಕತ್ತೆಯನ್ನಲ್ಲ. ಇದು ಪ್ರಪಂಚದ ನಿಯಮ. ಆದರೆ ಅದೇ ಗೆದ್ದ ಕುದುರೆ ಸೋತರೆ ಅದರ ಸ್ಥಿತಿ ಹೀನಾಯಮಾನ . ಯಾರೇ ಆಗಲಿ ಯಶಸ್ವಿ ಆಗುವಮುನ್ನ ಅವರ ಪ್ರಯತ್ನವು ಸಣ್ಣ ಪ್ರಮಾಣದಿಂದ ಆರಂಭ ಆಗಿರುತ್ತದೆ. ಟೀವಿ ಹಾಗೂ ರೇಡಿಯ ಲೋಕ ಸಹ ಇದಕ್ಕೆ ಹೊರತಲ್ಲ.ಕೆಟ್ಟ ಕಾರ್ಯಕ್ರಮಗಳು, ಕೆಟ್ಟ ನಿರೂಪಣಾ ಶೈಲಿ, ಬೇಡದ ಆಂಗಿಕಾಭಿನಯ, ಬೋರ್ ಹೊಡಿಸುವ ವಿಚಾರಧಾರೆ ಇವೆಲ್ಲವನ್ನೂ ಹತ್ತು ಮಂದಿ ಸೇರಿದಾಗ ಚರ್ಚಿಸುವುದನ್ನು ನಾನು ಗಮನಿಸ್ತಾ ಇದ್ದೆ. ಪತ್ರಿಕೆಗಳಲ್ಲಿ ಈ ವಿಷಯದ ಬಗ್ಗೆ ಕಾಲಂ ಇರೋದು, ಆದರೆ ನಿರೀಕ್ಷಿತ ಮಟ್ಟಕ್ಕೆ ಈ ವಿಷಯದ ಬಗ್ಗೆ ಯಾರೂ ಬರಿತಾ ಇರಲಿಲ್ಲ. ಅದರಲ್ಲೂ ಕಾರ್ಯಕ್ರಮಗಳ ಜೀವಾಳ ನಿರೂಪಕರ ಬಗ್ಗೆ ಸಾಕಷ್ಟು ಬುದ್ಧಿವಂತರು ಎಂದು ತಿಳಿದವರು ಮಾಡ್ತಾ ಇದ್ದುದು ಅವಹೇಳನ ಇಲ್ಲವೇ ನಿರ್ಲಕ್ಷದ ಮಾತು. ಯಾವುದೇ ಕಾರ್ಯಕ್ರಮದಲ್ಲಿ ನಿರೂಪಕರ ಪಾತ್ರ ಏನು ಎಂದು ತಿಳಿದಾಗ ಮಾತ್ರ ಆ ಕಾರ್ಯಕ್ರಮ ಅದ್ಭುತವಾಗಿ ಹೊರಹೊಮ್ಮುತ್ತದೆ.
ನನ್ನ ಗಮನಕ್ಕೆ ಬಂದ ಕೆಲವು ಸಂಗತಿಗಳನ್ನು ನಾನು ಹೇಗಾದರೂ ಸರಿಯೇ ಸಂಬಂಧಿತರಿಗೆ ಮುಟ್ಟಿಸ ಬೇಕು ಎಂದು ಪ್ರಯತ್ನಿಸುತ್ತಾ ಇದ್ದೆ ಅದರ ಫಲ ಬ್ಲಾಗಿಂಗ್. ಸಿಕ್ಕಾಪಟ್ಟೆ ಬೈಸಿಕೊಂಡೆ , ಬುದ್ಧಿ ಇಲ್ಲದ ಕತ್ತೆ ಎನ್ನುವ ಬಿರಿದು ಬಂತು,ಆದ್ರು ನನ್ನ ಕೆಲಸ ಮುಂದುವರೆಸಿಕೊಂಡು ಈಗ ಎರಡು ವರ್ಷ ಪೂರ್ಣ ಮಾಡಿದ್ದೇನೆ. ಸಾಕು ಬಿಡಿ ಈ ವಿಷ್ಯ ಬರೆದಿದ್ದು ಎಂದು ನನ್ನ ಮನಸ್ಸು ಕಳೆದ ಕೆಲವು ತಿಂಗಳ ಹಿಂದೆ ಹೇಳಲು ಆರಂಭ ಮಾಡಿತು. ಆದರೆ ಇಲ್ಲ ನೀನು ಬರೆಯುವ ಕೆಲಸ ಇನ್ನು ಹೆಚ್ಚು ಹೆಚ್ಚು ಇದೆ ಎಂದು ನನ್ನಲ್ಲಿ ಶಕ್ತಿ ತುಂಬಿದವರು ಜಿ. ಎನ್. ಮೋಹನ್.
ವಯುಕ್ತಿಕವಾಗಿ ಅವರು ನನಗೆ ಪರಿಚಿತರಾಗಿರಲಿಲ್ಲ , ಆದರೆ ಅವರ ಬರಹಗಳನ್ನು ಓದಿದ್ದೆ, ಅವರ ಬಗ್ಗೆ ಅಲ್ಪ-ಸ್ವಲ್ಪ ತಿಳಿದಿದ್ದೆ. ನಾನು ನನ್ನ ಬ್ಲಾಗ್ ನ್ನು ರೈಟಪ್ ಫೆಸ್ಬುಕ್ನಲ್ಲಿ ಪಬ್ಲಿಶ್ ಮಾಡುವ ಪರಿಪಾಟ ಆರಂಭಿಸಿದಾಗ ಮೋಹನ್ ನನ್ನ ಬರಹದತ್ತ ಸೂಕ್ಷ್ಮ ನೋಟ ನೆಟ್ಟರು. ದಿನೇದಿನೆ ಅವರಿಗೆ ನಾನು ಅತ್ಯಂತ ಆಸಕ್ತಿದಾಯಕ ವ್ಯಕ್ತಿತ್ವವಾದೆ, ಅದರ ಫಲ ಈಗ ನಾನು ಅವಧಿ ಹಾಗೂ ಮೀಡಿಯಮೈಂಡ್ ನಲ್ಲಿ ಇರುವುದು.ಕೆಲವರು ಮೋಹನ್ ನನ್ನ ಬರಹದ ಮೇಲೆ ಇನ್ಫ್ಲುಯನ್ಸ್ ಮಾಡ್ತಾರೆ ಎನ್ನುವ ಅಭಿಪ್ರಾಯ ಹೊಂದಿದ್ದರು .ಆದ್ರೆ ಜಿನ್ ನನ್ನ ಬರಹಗಳಿಂದ ತುಂಬಾ ಇನ್ಫ್ಲುಯನ್ಸ್ ಆದ್ರು 🙂 ಅಲ್ವ ಜಿನ್ ;-). ಯಾವ ಚಾನೆಲ್, ಯಾವ ವಿಷ್ಯ ಎನ್ನುವ ಬಗ್ಗೆ ಅವರು ಗಮನ ನೀಡಲಿಲ್ಲ ನನ್ನ ತುಂಟತನ , ತರ್ಲೆ ಗುಣ, ಗಲಾಟೆ ಸ್ವಭಾವ ತುಂಬಾ ತುಂಬಾ ಇಷ್ಟ ಪಟ್ಟು ಎಂಜಾಯ್ ಮಾಡಿದ್ರು, ಈ ಕ್ಷಣವೂ ಇಷ್ಟಪಡ್ತಾ ಇದ್ದಾರೆ. ನನ್ನನು ಅವರು ಕ್ರಿಟಿಕ್ ಜೀವಿ ಎಂದೇ ಕರೆಯೋದು :-).ಜಿನ್ ಅವರಿಂದ ನನ್ನ ಓದುಗ ವ್ಯಾಪ್ತಿ ತುಂಬಾ ಹೆಚ್ಚಾಯಿತು. ಹೇಳುವವರ ಮುಂದೆ ಒಳ್ಳೆಯ ಮಾತು ಹೇಳ್ತಾರೆ ನನ್ನ ಬಗ್ಗೆ, ಅದಕ್ಕಿಂತ ಏನು ಬೇಕು ಈ ಜೀವಕ್ಕೆ.
ನನ್ನ ಬ್ಲಾಗ್ ಪ್ರಪಂಚದ ಬರಹಗಳಿಗೆ ತುಂಬಾ ಪ್ರೀತಿ ಹಾಗೂ ಪ್ರೋತ್ಸಾಹ ಕೊಟ್ಟವರು ನನ್ನ ಅಮ್ಮ ಹಾಗೂ ಅಣ್ಣ ರವಿ . ಅವರಿಗೆ ತುಂಬಾ ಥ್ಯಾಂಕ್ಸ್ :-). ನನ್ನ ಈ ಬ್ಲಾಗ್ ಪಯಣದಲ್ಲಿ ಸಮಯ ಹೊಂದಿಸಿ ಕೊಳ್ಳುವುದು ಹೇಗೆ ಅಂದ್ರೆ ಮನಸ್ಸಿದ್ದರೆ ಮಾರ್ಗ 🙂 ಇದಕ್ಕಿಂತ ಒಳ್ಳೆಯ ಉತ್ರ ನನಗೆ ಗೊತ್ತಿಲ್ಲ :-). ನನ್ನ ಈ ವರ್ಷದ ಶ್ರಮ ಹಾಗೂ ಸಾಧನೆಯನ್ನು ಪ್ರೀತಿಯ ಮಾಷ್ಟ್ರು ಜಿನ್ ಮೋಹನ್ ಅವರಿಗೆ ಡೆಡಿಕೇಟ್ ಮಾಡ್ತಾ ಇದ್ದೀನಿ ಸ್ವೀಕರಿಸಿ ಜಿನ್ ವಿಥ್ ಲಾಟ್ಸ್ ಆಫ್ ಲವ್ ಅಂಡ್ ಅಫೆಕ್ಷನ್ 🙂
ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





ಜಯಶ್ರೀಯವರೇ ಜಯ್ ಹೋ .. 🙂
ನಮ್ ಗಣೇಶ(ಮುಂಗಾರು ಮಳೆ ಅಲ್ಲ) ನಿಮಗೆ ಇನ್ನೂ ಜಾಸ್ತಿ ಜಾಸ್ತಿ ಬರೆಯೋ ತಾಕತ್ ನೀಡಲಿ ಅನ್ನೋ ಹಾರೈಕೆ.
ಮಿಡೀಯಗಳ ಬಗ್ಗೆ ಇಷ್ಟೊಂದು ಬರಿತಿರಲ್ಲ, ಟೀ.ವಿ ನೋಡೋದು,ರೇಡಿಯೋ ಕೇಳೋದೆನಾ ನಿಮ್ಮ ಕೆಲ್ಸ ಅಂತ ಕೇಳೋಣ ಅನ್ಕೊಂಡಿದ್ದೆ,ಅಷ್ಟರಲ್ಲಿ ನೀವ್ಯಾರು ಅಂತ ಹೇಳಿದ್ದಿರಾ 😉
ಒಂದು ವರುಷ ಪೂರೈಸಿದ್ದಕ್ಕೆ ಅಭಿನಂದನೆಗಳು ಜಯಶ್ರೀ ಅವರೇ. ನಿಮ್ಮ ಬರಹ ಖುಷಿ ಕೊಡುತ್ತೆ. ಬರೆಯುತ್ತಾ ಇರಿ.
ವಾರ್ಷಿಕೋತ್ಸವದ ಶುಭಾಶಯ
ಜಯಶ್ರೀ ಯವರ ಬರಹಗಳಿಗೆ ಅದೊಂದು ವಿಶಿಷ್ಟವಾದ ಸೂಕ್ಷಮತೆಯಿದೆ ಅದೆಷ್ಟೋ ಗಹನವಾದ ವಿಚಾರಗಳನ್ನು ಸರಳವಾಗಿ ತಮ್ಮ ಬರಹಗಳಲ್ಲಿ ವ್ಯಕ್ತಪಡಿಸುವ ಅವರ ಶೈಲಿ ನಿಜವಾಗಿ ರಂಜನೀಯವಷ್ಟೇ ಅಲ್ಲ ಮೌಲ್ಯಾಧರಿತವು ಹೌದು ಮತ್ತು ಈ ಬರಹಗಾರ್ತಿ ಬೆಂಗಳೂರಿನಲ್ಲಿ ನೆಲೆಸಿದರು ಮೂಲತಃ ನಮ್ಮ ಕೋಲಾರ ಜಿಲ್ಲೆಯವರು ಎಂಬುದು ನಮಗೆ ಹೆಮ್ಮೆಯ ವಿಷಯ
ಅವರ ಬರವಣಿಗೆ ನಿರಂತರವಾಗಿ ಸಾಗಲಿ ಎಂಬುದು ನಮ್ಮೆಲ್ಲರ ಹಾರೈಕೆ .
JaiShree avre, nimma barahagalu, heege muduvareyali. Yene aadaru neevu eda bida Thivikramiyanthe, bareyuthale iri.
ಎಲ್ಲರಿಗು ಧನ್ಯವಾದಗಳು ನಿಮ್ಮ ವಿಶ್ವಾಸ ಹೀಗೆ ನಿರಂತರವಾಗಿದ್ದರೆ ನನ್ನ ಬರೆಯುವ ಕೈಗಳು ಮತ್ತಷ್ಟು ಬಲಿಷ್ಠವಾಗುತ್ತದೆ 🙂