ಸುಚಿತ್ರ ಕೆ ಮಂಗಳೂರು

ನಾನು ಮಗುವಾಗಿದ್ದಿದ್ದರೆ
ಈ ಎಲ್ಲ ಬೇಗುದಿ ನಿಟ್ಟುಸಿರು ಇರ್ತಾ ಇರಲಿಲ್ಲ
ನಾನು ಮಗುವಾಗಿದ್ದಿದ್ದರೆ
ಮನಸ್ಸಿನ ತೊಳಲಾಟದಲ್ಲಿ ಒದ್ದಾಟದಲ್ಲಿ ಬೆಂದು ನಲುಗುತಿರಲಿಲ್ಲ ..
ನಾನು ಮಗುವಾಗಿದ್ದಿದ್ದರೆ
ಕಳ್ಳತನದ ಅರಿವಿರುತಿರಲಿಲ್ಲ; ಸುಳ್ಳಿನ ಮಾತು ಆಡುತಿರಲಿಲ್ಲ
ನಾನು ಮಗುವಾಗಿದ್ದಿದ್ದರೆ
ಭೇದ-ಭಾವದ ಜಾತಿ-ಧರ್ಮದ ಎಳೆಗೆ ಎಂದೂ ಸಿಲುಕುತ್ತಿರಲಿಲ್ಲ
ಮಗುವುನಲ್ಲಿ ಮಗುವಾಗಿ ಬೆರೆಯುವ ಮನಸ್ಸು ತಿಳಿದಿಲ್ಲ..
ಹೌದು….
ನಾನು ಮಗುವಾಗಲಿಲ್ಲ..
ಮಗುವಿನ ನಗು ಕಲಿಯಲಿಲ್ಲ
ಓ ಮನವೇ
ಇನ್ನಾದರೂ ಬದಲಾಯಿಸು
ರಚ್ಚೆ ಹಿಡಿದು ಕಾಡುವ ಮನವ
ಮಗುವಿನ ಎಳೆ ಸೆಳೆತದ ಮುಗ್ಧ ನಗುವ ಕಲಿತುಕೋ…






0 Comments