ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನು, ನಾಗು (ಪರಿಶಿಷ್ಟ ಪಂಗಡ)..

nagu talvar

ನಾಗು ತಳವಾರ್ 

ಥೂ.. ನಿಜಕ್ಕೂ ಸಖತ್ ಬೇಜಾರಾಗಿದೆ ಈ ದಿನ.

ಆತ್ಮೀಯ ಮಿತ್ರರೊಬ್ಬರು ನನ್ನ ಇನ್ನೊಬ್ಬ ಗೆಳೆಯನ ಬಳಿ ‘ನಾಗು ತಳವಾರ್ ನಮ್ಮ ಜಾತಿಯವರೆಂದು ತಪ್ಪಾಗಿ ತಿಳಿದು ಆತ್ಮೀಯವಾಗಿ, ಅಡುಗೆ ಮನೆಯಲ್ಲಿ ಕೂಡಿಸಿಕೊಂಡು ಉಂಡು ಬಿಟ್ಟೆ. ಛೆ, ಅವರಾದರೂ ತಾನು S.T. ಅಂತ ಹೇಳಬಹುದಿತ್ತು’ ಎಂದು ತುಂಬಾ ನೊಂದುಕೊಂಡರಂತೆ.

ನನ್ನಗೆಳೆಯ ಅಲ್ಲರೀ ಅವರ ಹೆಸರ ಹಿಂದೆಯೇ ತಳವಾರ ಅಂತ ಇದೆ ನಿಮಗೆ ಗೊತ್ತಾಗಲಿಲ್ಲವೇ? ಅಂದದ್ದಕ್ಕೆ.”ಇಲ್ಲ ಅದು ಸರ್ ನೇಮ್ ಎಂದು ಭಾವಿಸಿದ್ದೆ” ಅಂದರಂತೆ.

ಕೂಡಲೇ ಅವರಿಗೆ ಪೋನ್ ಮಾಡಿ ಜಾತಿ ಕೇಳದೇ ಸ್ನೇಹ ಮಾಡಿದ ಅವರ ಮರೆವಿಗೆ ಬಯ್ಯುತ್ತಾ.. ಉಂಡ ತಪ್ಪಿಗೆ, ಆದ ಅವರ ಮಡಿ ಮೈಲಿಗೆಗೆ ಕ್ಷಮೆ ಕೇಳಿ., ಒಂದು ನಿರ್ಧಾರಕ್ಕೆ ಬಂದಿದ್ದೇನೆ ಇನ್ನು ಮುಂದೆ ನನ್ನ ಹೆಸರನ್ನ ಕೊಂಚ ಬದಲಿಸಿಕೊಳ್ಳತ್ತೇನೆ, ಬಲ್ಲವರು ಮೊದಲಿನಂತೆ ಸಹಕರಸಿ.

ನಾಗು ತಳವಾರ್ ಆದ ನಾನು ಇಂದಿನಿಂದ ಅಗೋಚರ ಮಿತ್ರನಿಂದಾಗಿ ನಾಗು (ಪರಿಶಿಷ್ಟ ಪಂಗಡ) ಎಂದು ಬದಲಿಸಿಕೊಳ್ಳುತ್ತಿದ್ದೇನೆ. so ಇನ್ನು ಮುಂದೆ ನಾನು
ನಾಗು ಪ.ಪಂ.ದೂಪದಹಳ್ಳಿ.

‍ಲೇಖಕರು Admin

21 January, 2016

2 Comments

  1. Dr. Prabhakar M. Nimbargi

    Let’s hope to see the day when the bars of caste, creed, religion, colour etc. don’t remain and humans are recognised by their virtues.

  2. Manjula gh

    ಹೇಳಿಕೊಳ್ಳಲು ಜ್ಯಾತತೀತ ದೇಶ ಮತ್ತೆ ದೊಡ್ಡ ದೊಡ್ಡ ವ್ಯಕ್ತಿಗಳು ಊಟದಲ್ಲೂ ನಿಷ್ಕಲ್ಮಷಾ ಸ್ನೇಹದಲ್ಲೂ ಬಣ್ಣದ ಬಗ್ಗೆ ಅಪಸ್ವರ
    ನಿಜಕ್ಕೂ ಅಮಾನವೀಯ ಘಟನೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading