‘ಹನಿ’ಗಳು
– ಹೆಚ್.ಸಿ. ಭವ್ಯ ನವೀನ್
ಹೌದು !
ನಾನು ಕಣ್ಣೀರಿನಂಥ
ಹುಡುಗಿ
ಜಾರಿಬಿಟ್ಟೆ
**
ಬೇರೆ ಏನಿಲ್ಲ !
ನಾನು ಖಾಲಿಯಾಗುವವಳಲ್ಲ
ಅದಕ್ಕೇ ಮಾತನಾಡುತ್ತೇನೆ
**
ಶರದೃತು ಎಂದರೆ
ಒಳಗೆ ಶೆಖೆ ;
ಹೊರಗೆ ಚಳಿಯಂತೆ
ನನಗೂ ಅದೇ ಹೆಸರಿಡಬೇಕಿತ್ತು
**
ಛೇ!
ಸುಮ್ಮನಿರು ನೆನಪೇ
ನನಗೆ ಬದುಕುವ ಆಸೆ..
ನಿನಗೋ ಸತ್ತ
ಕನಸಿನದೇ ಚಿಂತೆ
**
ಮಾತುಗಳೂ ಬಿಕ್ಕುತ್ತವೆ
ಬಿಕ್ಕುಗಳು
ಮೌನವಾದಾಗ
**
ಕಣ್ಣೊಳಗೇ ಉಳಿದ
ನಿರೀಕ್ಷೆಗಳು
ಹೊಟ್ಟೆಗಿಳಿದು ಘೀಳಿಡುತ್ತಿವೆ..
ಯಾತನೆ ನಿರಂತರ
**
ಹೇಳಲೇ ಬೇಕು
ನಿನಗೆ…
ನಾನು ನನ್ನ ಕನಸು
ಮಾರಾಟಕ್ಕಿಲ್ಲ
**
ಕಣ್ಣ
ಕೆಳಗಿನ
ಕಪ್ಪೂ
ಕಥೆ ಹೇಳುತ್ತದೆ…
ಜೀಕುವ ಪ್ರೀತಿಯದ್ದು
**
ಇನ್ನು
ಮುಗಿಸುತ್ತೇನೆ..
ಹಾಳೆಗಳಿಗೆ
ಹಿಂಸೆ ಕೊಡಬಾರದಂತೆ






nice…
ಚಂದದ ಹನಿಗಳು.
”Innu mugisuthene, halegalige,himse kodabaradanthe.” Exellent lines, keep on writing in such true way,that is the real poem.
hnigalu chennagive…
uttama..
tumba ishtavaytu
ಹನಿಗಳು ಶರದೃತುವಿಂತೇ ಇವೆ.