ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನು ಅವಳತ್ತ ಕೈ ಚಾಚಿದೆ..

rashmi tendulkar by ravi kulakarni

ರಷ್ಮಿ ತೆಂಡುಲ್ಕರ್

ಮದ್ವೆ ಆದ ಮೇಲೆ ಇದೇ ಮೊದಲ ಬಾರಿಗೆ ನಮ್ಮ ನಡುವೆ ಜಗಳ ನಡೆದಿದ್ದು..
ಈ ಜಗಳ ನಡೆದದ್ದು ಮದುವೆಯಾದ ಮೂರನೇ ದಿನ…ಈ ಜಗಳದ ಕಾರಣ ಗಂಭೀರ ವಿಷಯವೇನೂ ಅಲ್ಲ.

ಒಬ್ಬ ವ್ಯಕ್ತಿಯಲ್ಲಿ ಪ್ರೀತಿ ಎಂಬುದು ಎಲ್ಲಿರುತ್ತದೆ ಎಂಬ ಪ್ರಶ್ನೆಯೇ ನಮ್ಮಿಬ್ಬರ ನಡುವಿನ ಜಗಳಕ್ಕೆ ಕಾರಣ.

ಪ್ರೀತಿ?

5301a35a2add2e8088bae575f8aa1bd4ಅವಳು ಹೃದಯದಲ್ಲಿ ಎಂದು ವಾದಿಸಿದಳು.
ಅಲ್ಲ, ಪುರುಷರಿಗೆ ಪ್ರೀತಿ ಹೃದಯದಲ್ಲಿರುವುದಿಲ್ಲ ಎಂದು ನಾನು ಹೇಳಿದೆ. ಹಾಗಾದರೆ ಎಲ್ಲಿ ಇದೆ? ಹೇಳು ಅಂದಳು.
ಆಕೆಯ ಪ್ರಶ್ನೆಗೆ ನಾನು ಉತ್ತರಿಸಲಿಲ್ಲ. ಅದರ ಬದಲು ಹೀಗೆ ಹೇಳಿದೆ
ಹೆಣ್ಣಿನ ಪ್ರೀತಿ ಹೃದಯದಲ್ಲಿರುತ್ತದೆ, ಆದರೆ ಗಂಡಸು ಹಾಗಲ್ಲ
ಬೇಗ ಉತ್ತರ ಹೇಳು ಎಂದು ಅವಳು ಒತ್ತಾಯಿಸುತ್ತಿದ್ದಳು…

ನಾನು ಹೇಳಿದೆ…
ಈ ಎರಡು ಕೈಗಳಲ್ಲಿ..

ಮಣ್ಣಾಂಗಟ್ಟಿ …ಅವಳು ಮೂತಿ ತಿರುವಿದಳು
ಅವಳನ್ನು ಬರಸೆಳೆದು ನಾನು ಹೇಳಿದೆ..

ನೋಡು, ನಿನ್ನ ಅಪ್ಪ ನಿನ್ನನ್ನು ನನ್ನ ಇದೇ ಕೈಗೆ ಒಪ್ಪಿಸಿದ್ದರು
ಪ್ರೀತಿಯಿಂದಲೇ ನಿನ್ನ ನಾಜೂಕು ಕೈಯನ್ನು ನಾನು ಹಿಡಿದ್ದಿದ್ದೆ
ಇದೇ ಕೈಗಳಿಂದ ನಿನಗೆ ತಾಳಿ ಕಟ್ಟಿದೆ, ಹಣೆಗೆ ಕುಂಕುಮವಿಟ್ಟೆ
ಏಕಾಂತ ನಿಮಿಷಗಳಲ್ಲಿ ನಿನ್ನನ್ನು ಇದೇ ಕೈಗಳಿಂದ ಮುದ್ದಿಸಿದೆ
ನೀನು ಕಣ್ಣೀರು ಹಾಕುವಾಗ ಇದೇ ಕೈಬೆರಳುಗಳಲ್ಲಿ ಒರೆಸಿದೆ
ನನ್ನ ಎದೆಗೆ ನಿನ್ನನ್ನು ಬರ ಸೆಳೆದು ಬಿಗಿದ್ದಪ್ಪಿದ್ದು ಇದೇ ಕೈಗಳು
ಯಾವುದೇ ಸಂದಿಗ್ಧ ಸ್ಥಿತಿಯಲ್ಲಿ ನಿನ್ನನ್ನು ರಕ್ಷಿಸುತ್ತಿರುವುದು ಇದೇ ಕೈ
ನೀ ಮಲಗುವಾಗಲೂ ನನ್ನ ಕೈಯೊಂದಿಗೆ ಕೈ ಜೋಡಿಸಿಯೇ ಮಲಗಿದ್ದು
ಕಷ್ಟ ಬಂದಾಗ ನಿನ್ನನ್ನು ಕೈ ಬಿಡದೇ ಗಟ್ಟಿಯಾಗಿ ಹಿಡಿದುಕೊಂಡಿದ್ದು
ನಾನಿದ್ದೇನೆ, ನಿನ್ನ ಜತೆ ಎಂದು ಹೇಳಲು ಕೈಗಳನ್ನು ಮುಟ್ಟಿ ಹೇಳಿದರಷ್ಟೇ ಸಾಕು

ಇದಕ್ಕಿಂತ ಮಿಗಿಲಾಗಿ, ಒಬ್ಬ ಅಪ್ಪ ತನ್ನ ಮಗಳನ್ನು ಮೊದಲ ಬಾರಿಗೆ ನೇವರಿಸಿದ್ದು ಇದೇ ಕೈಗಳಿಂದ…
ಅಲ್ಲಿ ಈ ಕೈಗಳೇ ಅಪ್ಪನ ಸಾನಿಧ್ಯವನ್ನು ತೋರಿಸುತ್ತವೆ
ಮನಸ್ಸು ಎಲ್ಲೆಲ್ಲಿ ಓಡುವಾಗ ಕೈ ಮುಷ್ಟಿ ಹಿಡಿದು ಎಲ್ಲವನ್ನೂ ಸಂಭಾಳಿಸುತ್ತೇನೆ
ಮನಸ್ಸಲ್ಲಿ ಎಷ್ಟೇ ಪ್ರೀತಿಯಿದ್ದರೂ ಕೈಗಳ ಮೂಲಕ ಅದನ್ನು ದಾಟಿಸದೇ ಇದ್ದರೆ ಪ್ರೀತಿಯ ಅನುಭವವೂ ಆಗುವುದಿಲ್ಲ..
ನನ್ನ ಪ್ರೀತಿಯಿರುವುದು ಈ ಕೈಗಳಲ್ಲಿ…

ಅವಳು ನನ್ನನ್ನೇ ನೋಡುತ್ತಿದ್ದಳು…
ನಾನು ಅವಳತ್ತ ಕೈ ಚಾಚಿದೆ, ಅವಳು ಮೆಲ್ಲನೆ ಹಿಡಿದುಕೊಂಡಳು.
ಬೆರಳುಗಳು ಬೆಸೆದು ಕೊಂಡವು…ಅಲ್ಲಿಗೆ ನಮ್ಮ ಜಗಳವೂ ಕೊನೆಯಾಯಿತು

(ಮಲಯಾಳಂನಲ್ಲಿದ್ದ ಪೋಸ್ಟ್ ಒಂದರ ಅನುವಾದ)

‍ಲೇಖಕರು Admin

15 January, 2016

1 Comment

  1. Krishna

    simply superb!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading