ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ನಾನು, ಅಮ್ಮ ಮತ್ತು ನನ್ನ ಗೆಳೆಯ ಸೂರ್ಯ’

ಲಕ್ಷ್ಮೀಕಾಂತ ಇಟ್ನಾಳ


ಮುಂಜಾವಿನಲ್ಲಿ ಸೂರ್ಯ ಇನ್ನೂ ನಿದ್ದೆಗಣ್ಣಿನಲ್ಲಿ ಇರುತ್ತಾನೆ, ಅವನಮ್ಮ ಎಬ್ಬಿಸಿದಾಗ,
ಅದಕ್ಕೆ ಅವನ ಮನೆಯ ಅಂಗಳ ಕೆಂಪು ಕೆಂಪಾಗಿರುತ್ತದೆ…., ಅಮ್ಮ ಹೇಳುತ್ತಾಳೆ
ನಮ್ಮ ಮನೆಯಿಂದ ಅವನ ಮನೆ ಪೂರ್ವಕ್ಕೆ ಆಗುತ್ತದೆ,, ನಿಮ್ಮದು?
ಬೆಳಿಗ್ಗೆ ನಾನೂ ಸರಿಯಾದ ಸಮಯಕ್ಕೆ ಎದ್ದೆನೊ ಇಲ್ಲವೊ ಎಂದು ನೋಡಲು
ನಮ್ಮ ಮನೆಯ ಮೇಲೆಯೇ ಏರಿ ಮರಗಳ ಹಿಂದಿನಿಂದ ಹಣಿಕುತ್ತಾನೆ, ಅಂವ ಮುಗಿಲಿನಲ್ಲಿ!
ಒಮ್ಮೊಮ್ಮೆ ಮೋಡದ ಪರದೆಗಳ ಮರೆಯಲ್ಲಿಯೂ ನಿಂತು ನೋಡುತ್ತಾನೆ, ತುಂಟ ಹುಡುಗ ಅಂವ
ದಿನವೂ ತನ್ನ ಕಿರಣವೊಂದನ್ನು ನಮ್ಮ ಮನೆಯ ಗೋಡೆಗೆ ಕಿಟಕಿಯ ಮೂಲಕ ಛಾಯೆ ಬಿಡುತ್ತಾನೆ
ನಾನೂ ಆ ಕಿರಣಕ್ಕೆ ಕನ್ನಡಿ ಹಿಡಿದು ಮನೆಯೆಲ್ಲಾ ಬೆಳಗುತ್ತೇನೆ, ಝಗ್ಗನೆ!
 
ಬಲು ಚುರುಕಿನ , ತಲೆಬಿಸಿ ಹುಡುಗನಂತೆ,, ಬಲು ಶಕ್ತಿಶಾಲಿ,…..ನನ್ನಂತೆಯೆ….. ಅಮ್ಮ ಹೇಳುತ್ತಾಳೆ
ಏನನ್ನು ಕುಡಿಯುವನೋ?, ಹಾಲರ್ಿಕ್ಷ , ಕಾಂಪ್ಲಾನ್…..ಅವನನ್ನೇ ಕೇಳಬೇಕು ಈ ಸಾರಿ ಭೇಟಿಗೆ ಸಿಕ್ಕರೆ,
ನಮಗೆಲ್ಲಾ ಹಸಿರನ್ನು, ಹೂವು ಹಣ್ಣು, ರೆ ೂಟ್ಟಿ ಅನ್ನ ಎಲ್ಲವನ್ನೂ ಅವನೇ ಕೊಡುತ್ತಾನಂತೆ,
ಯಾವಾಗ ಬಂದು ಹೋಗುತ್ತಾನೊ! ಬೇರೆ ಬೇರೆ ರೂಪದಲ್ಲಿ ಬರುತ್ತಾನಂತೆ ….ಅಮ್ಮ ಹೇಳುತ್ತಾಳೆ,
ನಾನು ಒಮ್ಮೆಯೂ ನೋಡಿಲ್ಲಪ್ಪ, ಆದರೆ, ಅಮ್ಮ ಹೇಳುತ್ತಾಳಲ್ಲ, ಸುಳ್ಳಾಗಿರಲು ಸಾಧ್ಯವೇ!
 
ಸಂಜೆ ಶಾಲೆ ಬಿಡುತ್ತಲೇ, ನಿದ್ದೆಗಣ್ಣಲ್ಲಿ ಮತ್ತೆ ಮಲಗಲು ತೆರಳುತ್ತಾನೆ,
ಮತ್ತೆ ಅವನ ನಿದ್ದೆಯ ತೇಲುಗಣ್ಣಿಗೆ ಸಂಜೆಯೆಲ್ಲ ರಂಗು ರಂಗು
ನಿದ್ದೆ ಬಡಕ! ಸಂಜೆಯೇ ಮಲುಗುತ್ತಾನೆ, ಬೇಗ ಏಳಬೇಕಲ್ಲ ಅದಕ್ಕೇ!
ಊಹೂಂ, ಅದಕ್ಕಲ್ಲವಂತೆ!, ‘ಹೋಂ ವಕರ್್’ ತಪ್ಪಿಸಿಕೊಳ್ಳಲು ಹಾಗೆ ಮಾಡುತ್ತಾನಂತೆ,…. ಅಮ್ಮ ಹೇಳುತ್ತಾಳೆ
ಆದರೆ ಎಲ್ಲದಕ್ಕೂ ಇವನೇ ‘ಮೇನ್’ ಗಡಿಯಾರವಂತೆ, ಕುರುಕ್ಷೇತ್ರ ಯುದ್ಧದಲ್ಲೂ ಇವನೇ ‘ಸ್ಟಾಪ್ ವಾಚ್’ ಅಂತೆ!
ಶಾಲೆಗೆ ನಿತ್ಯವೂ ಸರಿಯಾದ ವೇಳೆಗೆ ಮನೆಯಿಂದ ಹೊರಡುತ್ತಾನೆ….., ಬಹಳಷ್ಟು ‘ಚಾವಿ’ ಅವನ ಹತ್ತಿರವೇ ಇರುತ್ತವಂತೆ!
 
ಬಲು ನೀಟ್ ಹುಡುಗ, ಎಂದೂ ಏನೂ ಮರೆಯುವುದೇ ಇಲ್ಲವಂತೆ,
ಏನಾದಾರೂ ಮರೆತು ಹಿಂದಿರುಗಿ ಹೋದದ್ದೇ ಇಲ್ಲವಂತೆ!
ನೀನಿದ್ದೀ ನೋಡು, ಒಮ್ಮೆ ಪೆನ್ನು, ಹೋಂ ವಕರ್್, ಮತ್ತೊಮ್ಮೆ ನೀರು ಬಾಟಲು ಏನೆಲ್ಲಾ ಮರೆಯುತ್ತೀ.,
‘ಅವನ ಹಾಗೆ ಇರಲು ಕಲಿ’ ಅನ್ನುತ್ತಾಳೆ ಅಮ್ಮ,….. ಅವನೊಮ್ಮೆ ಸಿಗಲಿ ನನ್ನ ಕೈಯಲ್ಲಿ, ಮಾಡುತ್ತೇನೆ ಅಂವಗೆ!
 
ನದಿ ತೊರೆ, ಕೆರೆಗಳನ್ನು ಕಂಡರೆ, ಮಜವಾಗಿ , ಸಣ್ಣ ಸಣ್ಣ ತುಣುಕುಗಳಾಗಿ ಹೊಳೆಯುತ್ತ,
ಸುತ್ತ ಕಿರಣಗಳ ಛಾಯೆ ಬಿಡುತ್ತ, ತುಂಟಾಟ ಆಡುತ್ತಾ ಸಾಗುತ್ತಾನೆ, ಅಂವ ನನ್ನ ಗೆಳೆಯ!
ಪಾಪ! ಗೊತ್ತಾ,…. ಅವನ ಶಾಲೆಗೆ ರಜೆಯೇ ಇಲ್ಲವಂತೆ, …. ಅಮ್ಮ ಹೇಳುತ್ಥಾಳೆ.
ಅವನಿಗೆ ಹಸಿವು, ನೀರಡಿಕೆ, ಮತ್ತೆ ….ಒಂದಕ್ಕೆ ಬಂದರೆ?, ….. ಕೇಳುತ್ತೇನೆ ಅಮ್ಮನಿಗೆ,…. ಅಮ್ಮ ನಗುತ್ತಾಳೆ ಮಾತ್ರ!
ಒಮ್ಮೊಮ್ಮೆ ಮಳೆಗಾಲದಲ್ಲಿ ಎಂಟಾನು ಎಂಟು ದಿನ ಅಂವ ಕಾಣದಿದ್ದರೆ, ಪೇಪರಲ್ಲಿ ಸುದ್ದಿಯಾಗುತ್ತದಂತೆ
ನಾನು ಬೇಸಿಗೆ ರಜೆಯಲ್ಲಿ ಪೂರಾ ಒಂದು ತಿಂಗಳು ಅಜ್ಜನ ಮನೆಗೆ ಹೋಗಿದ್ದು ಸುದ್ದಿಯಾಗಲೇ ಇಲ್ಲ!
ಅಂವ ಇಲ್ಲೆ ನೆತ್ತಿಯ ಮೇಲೆ ಬಂದಾಗ ಮೈದಾನದಲ್ಲಿ ಆಟ ಆಡಿದರೆ, ನನ್ನ ಗೆಳೆಯರ ಅಮ್ಮಂದಿರು ಬಯ್ಯುತ್ತಾರೆ,
ಮತ್ತೆ ಅವೆನೊಂದಿಗೆ ಆಟ ಅಡುತ್ತಿರುವ ಯಾರನ್ನೂ ಕಂಡಿಲ್ಲ ನಾನೂ
ಇವನ ಗೆಳೆಯರೆಲ್ಲಾ ಇವನನ್ನು ರಾತ್ರಿ ಹುಡುಕುತ್ತ ಬರುತ್ತಾರೆ, ಇಂವ ಬಂದ ಕೂಡಲೇ ಮರೆಯಾಗಿ ಬಿಡುತ್ತಾರೆ!
 
ಅವನು ಯಾವಾಗಲೂ ಒಂಟಿಯಾಗಿರಲು ಬಯಸುತ್ತಾನಂತೆ…. ಕತ್ತಲೆಯೆಂದರೆ ತುಂಬ ಭಯವಂತೆ!
ರಾತ್ರಿ ಮಾತ್ರ ಎಂದೂ, ಯಾವುದಕ್ಕೂ ಹೊರಗೆ ಬರುವುದಿಲ್ಲವಂತೆ,
ರಾತ್ರಿಯ ಎರಡನೆಯ ಸಿನೇಮಾವನ್ನು ಎಂದೂ ನೋಡಿಯೇ ಇಲ್ಲವಂತೆ, ಪಾಪ, ಅಲ್ಲವೇ?
 
‘ಏ ಪೋತಪ್ಪ, ಬಾರೋ ಶಾಲೆಗೆ ತಡವಾಗುತ್ತದೆ, … …..ಅಮ್ಮ ಕರೆಯುತ್ತಿದ್ದಾಳೆ
ಶಾಲೆಗೆ ಹೋಗಬೇಕಪ್ಪ, …… ಮತ್ತೆ ಸಿಗುತ್ತೇನೆ,
ಅಮ್ಮಾ…. ‘ನನ್ನ ಹೋಂ ವರ್ಕ್ ಎಲ್ಲಿ?’……
 

‍ಲೇಖಕರು G

17 November, 2014

2 Comments

  1. sangeetha raviraj

    Chennagide.

  2. mahesh kalal

    sir thumba chennagide

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading