ನರೇಶ ಮಯ್ಯ
ಎಂದೂ ಯಾರೂ ಬಂದು ಆಹ್ವಾನ ತಂದವರಲ್ಲ
ಬಾರಣ್ಣ ಬಾ ಬಾ ನಿನ್ನಿಂದಲೇ ಬೆಳಕು ಎಂದವರಲ್ಲ
ಋಣಭಾದೆ ತೃಣನಾದೆ ಬರಿಗೂದೆ ಬೊಗಳೋದೆ
ಪ್ರತಿ ರಾತ್ರಿ ಹಗಲಿಡೀ ಹಂಡೆ ಹಂಡೆ.
ಹಸಿವನ್ನೇ ಮಿಂದ್ದೆದ್ದ ಕಂದಮ್ಮ ಕಿರುಲಿದ್ದು ಬರಿ ಕಿವುಡು ಕುರುಡು
ಕೇಳಿ ಕನಲಿದ್ದ ಆರ್ತ ಅಂತಃಕರಣ ಬಲಿಬಿದ್ದು ಬರಡು.
ನಿತ್ಯವೂ ನಿನ್ನದದೇ ನಿಶ್ಯಬ್ಧ-ನೀರವ ಕಲರವ
ಆ ಗೈವೆ ಈ ಗೈವೆ ಜಗವನೇ ಎತ್ತೊಯ್ವೆ –
ಜಂಬದಂಬಾರಿ ಅಲ್ಲವದು ಶನಿ ಶ್ವಾನ ಸವ್ವಾರಿ.
ಕಂಡು ಕೇಳಿರಲಿಲ್ಲ ಮೂಸಿ ಮುಸುರಿರಲಿಲ್ಲ
ಹಾದಿ ಬೀದಿಗುಂಟ ಬೈದು ಬೊಗಳಿದ್ದು ಉಂಟಿಲ್ಲ
ಹೆಸರೇ ಹಚ್ಚಿರದ ನಿನ್ಹಣೆಬರಹ ಗೀಚಿದ್ದು ಗೋಜಲುಗಳೆಲ್ಲ
ಇಂದು ಯಾರೂ ಬಂದವರಲ್ಲ ಸಾವನ್ನ ತಂದವರಲ್ಲ
ಬಾ ಬಾಪ್ಪ ಬಾಬಾ ನಿನ್ನಿಂದಲೇ ಮುಕುತಿ ಎಂದವರಲ್ಲ .
ಮರುಕಳಿಸಿಕೋ ಒಮ್ಮೆ ನೀ ನಡೆದ ಮೈಲುಗಳ.
ಹೈಕಳು,ಹಂದಿಗಳು,ಬಾಲಂಗೂಚಿಗಳು
ನಾಯಿಕೊಡೆ ನಾಯಿಂದನಾ ನಾಪಿತನ ಬುತ್ತಿಯು
ಎತ್ತೆತ್ತ ತಿರುಗಿದರು ಕತ್ತೆತ್ತಿ ಕೂಗಿದರು
ಮುಗಿಲನರಸುವ ಮರಗೂಬೆಯಾಟದಲಿ
ಇರುಳಿರುಳು ಬಿದ್ದೆದ್ದು ಬಂಡುಹೋದ ವರುಷಗಳು
ಮರಳೊಲ್ಲವೇಕೋ ಆ ರಸದ ನಿಮಿಷಗಳು
ಕಾಯು.
ಕಾದು ಕಾದೂ ಹಣ್ಣಾಗು, ಹಸಿರಾಗು ಮತೆ ್ತ ಮಣ್ಣಾಗಿ ಹೆಣ್ಣಾಗು
ಮಡಿಲೊಡಲ ಮಮಕಾರ ಮೆರೆದು ಮಹಾಮಾಯಿಯಾಗು:
ಮಮತೆಯಾಗು
ಆ ಮಮತೆಯರಸುವ ಮುದ್ದು ಕಂದಮ್ಮನಾಗು.
ಅಂದು ಯಾರೂ ಬರುವವರೊ ಎಲ್ಲ
ಬರಿ ಬಳುಕು ತಡಿ ತಳುಕು ಕಲಕುವವರೆಲ್ಲ
ಇಂತೀ ಬೃಹನ್ನಾಟಕದ ಆಟವದು ನಡೆದದ್ದು ಉಂಟೆ ?
ಅಹುದಹುದು
ಅಂಗಾಂಗ ಭಂಜಿರ್ಪ ಸುಂದ್ರಾಂಗ ತಂದಿರ್ಪ
ಸ್ಫುರದ್ರಮಣೀ ಪರಿಣಯವಿದುವೆ ಇದು
ಕಲಿ ಕೊಂದ ಕಾವ್ಯ
ಕೊಂದುಕೊಂಡವ ಕಂಡ ಬಲು ರಮ್ಯ ಕಾವ್ಯ.








Nice Kavana
Ambeka Pramod
Adbhutavaada kavite, prasakta vataavaranada sthitiyannu yathavattaagi pratibimbisidamtide….
dhanyavaadagalu, Naresh….