ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನರೇಶ್ ಮಯ್ಯ ಕವಿತೆ: ಮಥನ ಮೀಮಾಂಸೆ

ನರೇಶ್ ಮಯ್ಯ   ಎದೆಯ ಬಾಂದಳದ ಅಂಗಳದ ಒಳಗಲ್ಲಿ ಧುತ್ತೆಂದು ಎರಗಿತ್ತು ಮಾಯಾ ನಿನಾದವೊಂದು ಏಕಿಂತು ಏನಿಂತೆಂದರಿವ ಮೊದಲೇ ಮರೆಯಾಗಿಹೋಗಿತ್ತು ಇನ್ನೂ ಅರಸುತ್ತಿದ್ದೇನೆ ನಿನ್ನ ಬರವ ಬಹೆಯೋ ಬಾರದಿಹೆಯೋ . . . ಎನ್ನೊಡಲ ಕಡಲೊಳಗೆ ಹಾಯಿದೋಣಿಯೊಂದು ಕಾದಿಹುದು ಸದಾ ನಿನಗಾಗಿ ಬೇಕೆಂದಾಗ ಬಾ ಸುಖಿಸು, ರತಿಸು ನಿನ್ನದೇ ಈ ಎಲ್ಲ   ಜಗದ ಮೊಗದ ನಗುವಿನೊಳಗೆ ಹರಳುಗಟ್ಟಿದ್ದ ಮೌನ ಅಂದು ಕರಗಬೇಕು ಕಣ್ಣ ಬಣ್ಣ ಎಂದೂ ಕಾಣದ ಚಿತ್ತಾರವೊಂದನ್ನ ಬಿಡಿಸಿ ಹಾಯಿ ಹಾಯೆಂದು ಲಾಲಿ ಹಾಡಬೇಕು   ಅಹುದು ಎಂದೋ ಬಚ್ಚಿಟ್ಟ ಪುಟ್ಟ ಕನಸುಗಳ ಕಿಸೆಯಿಂದೆತ್ತಿ ಬಿಚ್ಚಿ ಅವುಗಳೊಡನೆ ಹಾರಿ ಆಚೆ ಹೋಗಬೇಕು ದೂರ . . ನೀಲಿ ನಭದಾಚೆ, ನಿಭರ್ಿಡೆಯಿಂದ ನೀರವ ನಿದ್ದೆ ಹಾಡಬೇಕು    ]]>

‍ಲೇಖಕರು G

6 February, 2012

2 Comments

  1. ravi

    kvite chennagide.

  2. jaya

    nireekshe..!!! thumbaaa chennagide…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading