ನೇಹಿಗನ ನೆನಪಿನ ನೊಗ ಹೊತ್ತು ನಡೆದಿದ್ದೇನೆ.
ಆಗರ್ಭ ಆಲಿಂಗನದೊಂದಿಗೆ ಸಂಗ ತೊರೆದಿದ್ದೆವಲ್ಲ;
ಹಿಂಗೇ ಅಂಗ-ಭಂಗ ಅನಂಗ ರಾತ್ರಿಯ
ಅವಾಂತರ ಅರಿತೆದ್ದೇಳಿದ್ದೇ ತಡ
ನಡೆದಿದ್ದೆ
ನಾಕದ ಯಾನಕ್ಕೆ, ನರಕ-ಪುಲಕಗಳನ್ನೊತ್ತ
ನವ್ಯನೌಕೆಯ ಸನಿಹಕ್ಕೆ.
ತೇಲು ತೇಲುತ್ತ
ಲೋಲುಪತೆಯ ಲೋಕದೊಳಗೆ ಲೀನವಾಗುತ್ತೆ,
ಇಹದ ನೇಣೊಳಗೆ
ಪರಸಂಗದ ಸಂಗತಿಗಳೇ ಕಾಣುತ್ತೆ.
ಬಿಟ್ಟೂ ಬಿಡದೇ ಮೀಟುತ್ತಲೇ ಇದೆ
ಏಕತಾರಿಯ ಏಕತಾನ ತಾನು,
ಘಟ್ಟ ಘಟ್ಟದಾಚೆಗೂ ನಿನ್ನ ಮಹಿಮೆಯ ಮಹೋತ್ಸವ;
ಸುಟ್ಟು-ಸುಡದಿದ್ದರೂ ಉದುಗಡ್ಡಿಧೂಪಗಳ ದಾಂಧಲೆ.
ಹುಲಿಬರುವ ಭಯವಿರದ ತಪ್ತ ಜೀವಗಳು
ಹಲುಬುವುವು ಇಲ್ಲಿ.
ಹೇಳು
ನೀ ಬರುವ ಆ ಘಳಿಗೆಗೆ ಮೊಳಗುತ್ತೆೆ ಕಂಸಾಳೆ ತಾಳ
ಡೊಳ್ಳೂ ಕೂಡ ಕಳ್ಳು ಕುಡಿದು ಬಡಿದುಕೊಳ್ಳುತ್ತೆ
ಧೋಂ ಎಂದು.
ಹುಲಿವಾಹನ,
ಇಲ್ಲೇ ಈ ನಿನ್ನ ಕಮಟು ಕಾನನದಲ್ಲೇ ಕಳೆದಿದ್ದೆ
ನಿನ್ನನಂಗ ಸಂಗ.
ಸಿಕ್ಕಿತ್ತೇ ನಿನಗೆ ಆ ಘಮಲು!
ಕಂಡು ಕಂಡಿದ್ದೂ ಕೂಡಲಿಲ್ಲವೇ ಅಕ್ಕನ್ನ?
ಸಂಗಮಿಸು, ಬಯಲಿಂದ ಬರಿದಾದ ನಿರಾಭರಣ ಸ್ಥಿತಿಯ
ನಿನ್ನಭಯಾರಣ್ಯದಲ್ಲಿ.
ಊಟಕ್ಕಿಷ್ಟು ಬಡಿಸುತ್ತೇನೆ ಹುಲಿಬಾಡ ಹುಳಿಸಾರ.
ಮದುವೆಗೋ, ಮಸಣಕೋ ನಡೆದಿದ್ದೇನೆ ನಿನ್ನ ಸಂಗ
ಈ ಕಾಡುವ ಕನಸ ಕಾನನ ಯಾನ
ನಿನಗಪರ್ಿತ
ಬಾ ನೊಗದೊಂದು ಭಾಗ ನೀನೇ ಹೊರಬೇಕು ನನ್ನ ಸಂಗ.







kavite channaagide
dear maiyya, navyottarada pratinidika kavanadante nimma kavite tumbaa channagi muudi bandide. sahitya krushi heege munduvariyali.
thank you
sure sir,thank you.
good one mayya keep it up…………!
thumba artha garbhithavada kavithe…
thanks for your words