ಪ್ರಮೋದ್ ಹಾಗೂ ಚೇತನ್ ಸೊಲಗಿ ಇಬ್ಬರೂ ಗೆಳೆಯರು. ಈಗ ಉದ್ಯೋಗದ ಕಾರಣಕ್ಕಾಗಿ ಎಲ್ಲೆಲ್ಲೋ ಇದ್ದಾರೆ. ಅಂತಹ ಗೆಳೆಯರಿಬ್ಬರ ಭೇಟಿ ನಡೆದು ಹೋಯ್ತು. ನರಗುಂದದಲ್ಲಿ. ಒಗ್ಗರಣೆ ಕಟ್ಟಿಕೊಟ್ಟ ಒಂದು ಪೇಪರ್ ತುಂಡಿನಲ್ಲಿ-

ಪಂಚು ಪ್ರಮೋದ್-
ನರಗುಂದದಲ್ಲಿ ಒಗ್ಗರಣೆಗೆ ಆರ್ಡರ್ ಮಾಡಿದರೆ, ಅಂಗಡಿಯವರು ನಿಮ್ಮ ಲೇಖನದ ಪೇಪರ್ ನಲ್ಲಿಯೇ ಕೊಟ್ಟರು…
ಆಗಲೇ ಗೊತ್ತಾಗಿದ್ದು ನಿಮ್ಮ ಲೇಖನ ಪ್ರಕಟಗೊಂಡಿದೆ ಎಂದು…
ಓದಿದೆ ಚೆನ್ನಾಗಿದೆ…
ನಿಮ್ಮೊಂದಿಗೇ ಕುಳಿತು ಒಗ್ಗರಣೆ ತಿಂದಷ್ಟು ಖುಷಿಯಾಯಿತು..

ಚೇತನ್ ಸೊಲಗಿ –
ಹಾಸ್ಟೆಲ್ ಒಂದು ಭಾವದ ಮನೆಯಿದ್ದಂತೆ
ಈ ಭಾವದ ಕನಸಿನ ಲೋಕದ ಕುರಿತಾಗಿ ನಾನು ಬರೆದ ಒಂದು ಲೇಖನ ‘ಕನ್ನಡಪ್ರಭ’ದಲ್ಲಿ.. (೨೧- ಅಗಸ್ಟ್)






0 Comments