ವಸುಧೇಂದ್ರ ಕಡೆಯಿಂದ ಬಹುಮಾನ

ಕನ್ನಡ ನಮಗೆಷ್ಟು ಗೊತ್ತು?

chandaಇತ್ತೀಚೆಗೆ ಕರ್ನಾಟಕ ಲೇಖಕಿಯರ ಸಂಘ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರ ಜೊತೆಯಾಗಿ ಮಹಿಳೆಯರಿಗಾಗಿಯೇ ಪುಸ್ತಕ ಪ್ರಕಾಶನ ಕಾರ್ಯಾಗಾರ ಏರ್ಪಡಿಸಿತ್ತು.

ಈ ಕಾರ್ಯಾಗಾರದಲ್ಲಿ ಶ್ರೀ ಕೆ. ರಾಜಕುಮಾರ್‌ ಅವರು “ಕರಡು ತಿದ್ದುವಿಕೆಯ ಮಹತ್ವ”ದ ಕುರಿತು ಒಂದು ಚಟುವಟಿಕೆಯನ್ನು ನಡೆಸಿದರು.

imagesಇದು ಬಹುತೇಕರ ಕನ್ನಡ ಕರುಡು ತಿದ್ದುವಿಕೆಯ ಅಜ್ಞಾನವನ್ನು ಸ್ಪಷ್ಟವಾಗಿ ತೋರಿಸಿಕೊಟ್ಟಿತು. ನಿಮ್ಮೊಡನೆ ಅದನ್ನು ಹಂಚಿಕೊಳ್ಳಬೇಕೆಂಬ ಆಸೆಯಿಂದ ಇಲ್ಲಿ ಲಗತ್ತಿಸಿರುವೆ.
ಈ ಕಡತದಲ್ಲಿ ನಿಮಗೆ ಸಾಧ್ಯವಾದಷ್ಟು ತಪ್ಪುಗಳನ್ನು ಗುರುತಿಸಿ. ಸುಮಾರು ೯೦% ಕರಡನ್ನು ತಿದ್ದಿದ ಮೊದಲ ಮೂರು ಜನಕ್ಕೆ ಛಂದ ಪುಸ್ತಕದಿಂದ ಪ್ರಕಟವಾದ ಯಾವುದೇ ಪುಸ್ತಕವನ್ನಾದರೂ ಉಡುಗೊರೆಯಾಗಿ ಕೊಡುವೆ.

ನಾಡದ್ದು ಬೆಳಿಗ್ಗೆ ಸರಿಯಾದ ಉತ್ತರವನ್ನು ವಿವರಣೆಯೊಂದಿಗೆ ಹಾಕುವೆ. ಕಾರ್ಯಾಗಾರದಲ್ಲಿ ಭಾಗವಹಿಸಿದವರು ಇದರಲ್ಲಿ ಸ್ಪರ್ಧಿಸುವಂತಿಲ್ಲ. ಸಂಪೂರ್ಣ ಕರಡು ತಿದ್ದಿದ ಪ್ರತಿಯ ಫೋಟೋ ಹಂಚಿಕೊಂಡರೆ ಸಾಕು.

ಇದನ್ನು ಇಲ್ಲಿ ಪ್ರಕಟ ಮಾಡಲು ಅನುಮತಿ ಕೊಟ್ಟ ಕೆ. ರಾಜಕುಮಾರ್‌ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಈ ಚಟುವಟಿಕೆಯಿಂದಾಗಿ ನಮ್ಮಲ್ಲಿ ಕರುಡು ತಿದ್ದುವ ಪ್ರೀತಿ ಬೆಳೆಯಲಿ ಎಂದು ಹಾರೈಸುವೆ.

proof reading1

‍ಲೇಖಕರು Admin

August 24, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

… ಆಮೆನ್! 

… ಆಮೆನ್! 

6 ಪ್ರತಿಕ್ರಿಯೆಗಳು

  1. Anonymous

    ನಕ್ಕೂ ನಕ್ಕೂ ಸಾಕಾಯ್ತು:
    1. ‘ನಡ’ ಗೀತೆ :
    2. ‘ರೌರವ’ ಸೆಕ್ರೆಟರಿ
    3. ಷರಬತ್ತಿನ ಶೋಕಾದ್ಯಕ್ಷರು
    4. ‘ವದನಾ’ರ್ಪಣೆ

    ಪ್ರತಿಕ್ರಿಯೆ
  2. Bhagyachikkanna

    ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವ ಸದಸ್ಯರ 99ನೇ ವಾರ್ಷಿಕ ಸಭೆಯು 2015ರ ಸೆಪ್ಟೆಂಬರ್ 25ರಂದು ಬೆಳಿಗ್ಗೆ 10 ಗಂಟೆಗೆ ಶ್ರೀ ನಾಲ್ವಡಿ ಕೃಷ್ಣರಾಜೇಂದ್ರ ಪರಿಷನ್ಮಂದಿರದಲ್ಲಿ ಅಧ್ಯಕ್ಷ ದಿ.ಪುಂಡಲೀಕ ಹಾಲಂಬಿಯವರ ಅಧ್ಯಕ್ಷತೆಯಲ್ಲಿ ನಡೆದಿತ್ತು. ಕಾರ್ಯಕ್ರಮವನ್ನು ಗಾಯಕಿ ವೇದಾವತಿ ಪ್ರಸನ್ನ ಅವರ ನಾಡಗೀತೆಯೊಂದಿಗೆ ಆರಂಭಿಸಲಾಯಿತು. ಗೌರವ ಕಾರ್ಯದರ್ಶಿ ಸಿ.ಕೆ.ರಾಮೇಗೌಡರು ಸ್ವಾಗತ ಕೋರಿದರು. ಪರಿಷತ್ತಿನ ಕೋಶಾಧ್ಯಕ್ಷರು ಲೆಕ್ಕಪತ್ರಗಳನ್ನು ಮಂಡಿಸಿದರು. ಆನಂತರ ಅದರ ಬಗ್ಗೆ ಪ್ರಸ್ತುತ ಚರ್ಚೆ ನಡೆಸಿ, ಲೆಕ್ಕಪತ್ರಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಸಭೆ ಅದಕ್ಕೆ ಒಪ್ಪಿಗೆ ನೀಡಿತು.
    ಸಭೆಯಲ್ಲಿ ಮಾತನಾಡಿದ ಭುವನಾ ಅವರು, ಮಹಿಳಾ ಲೇಖಕಿಯರ ಪುಸ್ತಕಗಳ ಬಿಡುಗಡೆಗೆ ಪರಿಷತ್ತಿನ ಕುವೆಂಪು ಸಭಾಂಗಣವನ್ನು ಉಚಿತವಾಗಿ ನೀಡಬೇಕೆಂದು ಕೋರಿದರು. ಕವಯತ್ರಿಯರಾದ ಸುಷ್ಮಾ ಜನಾರ್ಧನ ಮತ್ತು ಎಚ್.ಎಸ್.ರಮ್ಯ ಗೋವರ್ಧನ್ ಅವರು ಪರಿಷತ್ತಿನ `ಕನ್ನಡ ನುಡಿ’ ಪತ್ರಿಕೆಯನ್ನು ಪರಿಷತ್ತಿನ ಅಂತರ್ಜಾಲದಲ್ಲಿ ಪ್ರಕಟಿಸಬೇಕೆಂದು ಒತ್ತಾಯಿಸಿದರು.
    ಎನ್.ಸುಜಾತ ರವರು ಮಾತನಾಡಿ ಶ್ರವಣಬೆಳಗೋಳದಲ್ಲಿ ನಡೆದ 81ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವೇದಿಕೆ ರಮಣೀಯವಾಗಿತ್ತೆಂದೂ, ಮುಂದಿನ ಸಮ್ಮೇಳನದಲ್ಲೂ ಅದು ಹಾಗೆಯೇ ವೈಭವಯುತವಾಗಿ ಇರಬೇಕೆಂದು ಸೂಚಿಸಿದರು.
    ಲೇಖಕ ವೆಂಕಟೇಶ್ ಅವರು ಮಾತನಾಡಿ, ಬೆಂಗಳೂರಿನಲ್ಲಿ ಅತಿವೃಷ್ಟಿಗೆ ಬಲಿಯಾದವರನ್ನು ಟಿವಿಯಲ್ಲಿ ನೋಡಿ ಬಹಳ ಬೇಸರವಾಯಿತು. ಅಂತಹ ಸಂದರ್ಭಗಳಲ್ಲಿ ಪರಿಷತ್ತು ನೆರವಿಗೆ ಧಾವಿಸಬೇಕೆಂದೂ ಹಾಗೂ ಕರ್ನಾಟಕದ ಏಕೀಕರಣವಾಗಿ ಅರವತ್ತು ವರ್ಷವಾಗುತ್ತಿದೆ. ಹಾಗಾಗಿ ಕಸಾಪ ಕರ್ನಾಟಕ ಏಕೀಕರಣದ ವೈಢೂರ್ಯ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಬೇಕೆಂದು ಅಪೇಕ್ಷೆಪಟ್ಟರು.
    ಕಾರ್ಯಕ್ರಮದ ಕೊನೆಯಲ್ಲಿ ಪರಿಷತ್ತಿನ ಕೋಶಾಧ್ಯಕ್ಷ ಮಲ್ಲಿಕಾರ್ಜುನಪ್ಪರವರು ವಂದನಾರ್ಪಣೆ ಮಾಡಿದರು. ಸಭೆಯಲ್ಲಿ ಹಾಜರಿದ್ದವರಿಗೆ ಪುಷ್ಕಳ ಭೋಜನವನ್ನು ಏರ್ಪಡಿಸಲಾಗಿತ್ತು.

    1. ಕ್ರೋಡೀಕರಣ
    2. ಉಪಾಹಾರ
    3. ಉಚ್ಛಾರಣೆ
    4. ಬರವಣಿಗೆ
    5. ಭೀಭತ್ಸ

    ಪ್ರತಿಕ್ರಿಯೆ
  3. Dr. Prabhakar M. Nimbargi

    ಕಳಿಸಬೇಕಾದ ವಿಳಾಸವಾಗಲಿ ಇ-ಮೇಲ್‍ ಐಡಿಯಾಗಲಿ ನೀವು ಉಲ್ಲೇಖಿಸಿಲ್ಲ. ಹೇಗಪ್ಪಾ ಕಳಿಸೋದು?

    ಪ್ರತಿಕ್ರಿಯೆ
  4. Sathyakama Sharma K

    ಪ್ರಾಮುಖ್ಯತೆ, ಐಕ್ಯತೆ, ಪ್ರಾಧಾನ್ಯತೆ, ವೈವಿಧ್ಯತೆ, ವೈಶಿಷ್ಟ್ಯತೆ, ಮೌಢ್ಯತೆ … ( ಸ್ವಾತಂತ್ರ್ಯ ಎಂಬ ಪದ ಮಾತ್ರ ಅಚ್ಚರಿ ಎಂಬಂತೆ ‘ತೆ ‘ಯಿಂದ ಸ್ವತಂತ್ರವಾಗಿದೆ) ಎಂದು ಬರೆಯುವ ಎಲ್ಲಾ ಬರಹಗಾರರನ್ನು ತಿದ್ದಬೇಕು. ಕರಡನ್ನಲ್ಲ!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: