
ಮೂಲ – ಆಲಿಸ ವಾಕರ್

ಕನ್ನಡಕ್ಕೆ- ಪ್ರಮೋದ ಮುತಾಲಿಕ
ಚಿಕ್ಕದಿರಲಿ ದೊಡ್ಡದಿರಲಿ
ಗೆದ್ದಾಗ
ನೀವು ಎಂದಾದರೂ ಆ ಕ್ಷಣ
ಹುತಾತ್ಮರು ಎಲ್ಲಿದ್ದಾರೆ
ಅಂದುಕೊಂಡಿದ್ದೀರಾ?
ತಮ್ಮದೆಲ್ಲವನ್ನು ಮಾಡಿ ತ್ಯಾಗ
ಹೊಸ ಬದುಕನ್ನ ನಿಜವಾಗಿಸಿದ
ತಮ್ಮ ರಕ್ತಕ್ಕಿಂತ ಹೆಚ್ಚು ಮಹತ್ವದ್ದು
ಅಂದುಕೊಂಡವರು.

ನನಗಿದೆ ಅವರ ಕಾಳಜಿ.
ಖುಷಿ ಪಡುವಾಗ, ದುಃಖದಲ್ಲಿದ್ದಾಗ
ಇದ್ದಾರವರು ಇಲ್ಲೇ ಎಲ್ಲೋ
ನಮ್ಮ ಸುತ್ತ.
ಒಣಗಿವೆ ಅವರ ರಕ್ತ ಕಣಗಳು
ಆಗಿವೆ ಅವು ಗುಲಾಬಿ ದಳಗಳು.
ನಿಮ್ಮ ಕೆನ್ನೆಯ ಮೇಲೆ ಉದುರುವವು
ಈ ದಳಗಳೇ.
ಬೇಸರಿಸರು ಆವರೆಂದೂ
ತಮ್ಮ ತ್ಯಾಗಕ್ಕೆ,
ಕೋಪಿಸಿ ಕೊಳ್ಳರು ಸಹ.
ಇದ್ದಾರವರು ನಮ್ಮನ್ನು ಮೀರಿ
ನಮ್ಮ ಸುತ್ತ
ನಮ್ಮೊಳಗೆ.
ಇದೊಂದು ಪವಾಡ.
ಉದಯಿಸುವದು ಅವರಿಂದ
ಮಾನವೀಯ ಸೂರ್ಯೋದಯ
ಇದೇ ಹೆಮ್ಮೆ ಅವರಿಗೆ.






0 Comments