ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಮ್ಮ ಸ್ಥಳವನ್ನು ತೋರಿಸಲಾಯಿತು..

ಸ್ಟೇಜ್ 

ಸಂವರ್ಥ ಸಾಹಿಲ್

ಸ್ಟೇಜ್ ಹತ್ತಲಿಲ್ಲ ನಾವು

ಮೇಲೆ ಕರೆಯಲೂ ಇಲ್ಲ ಅವರು ನಮ್ಮನ್ನು.

ಕೈ ಬೀಸುತ್ತಲೇ

ನಮ್ಮ ಸ್ಥಳವನ್ನು ತೋರಿಸಲಾಯಿತು.

ನಾವೂ ಕುಳಿತೆವು.

ಅವರು ಸ್ಟೇಜ್ ಮೇಲೆ ನಿಂತು

ನಮ್ಮ ಕಷ್ಟಗಳ ಕುರಿತು

ನಮಗೇ ತಿಳಿಹೇಳಿದರು

ನಮ್ಮ ಕಷ್ಟ

ನಮ್ಮದಾಗಿಯೇ ಉಳಿಯಿತು

ಎಂದೂ ಅವರದಾಗಲಿಲ್ಲ.

ಪಿಸುಗುಟ್ಟಲು ನಾವು ನಮ್ಮ ಸಂದೇಹ

ಮೈಯೆಲ್ಲಾ ಕಿವಿಯಾಗಿಸಿ ಆಲಿಸಿ

ನಿಟ್ಟುಸಿರು ಬಿಡುತ್ತಾ

ಕಿವಿ ಹಿಂಡಿದರು.

ತುಟಿ ಎರಡಾಗಿಸದಿರಲು ಆದೇಶಿಸಿದರು.

ಕ್ಷಮೆ ಯಾಚಿಸು. ಇಲ್ಲವಾದಲ್ಲಿ…

– ವಹರು ಸೋನವಣೆ (ಮೂಲ ಮರಾಟಿ)

(ಕವಿ ವಹರು ಭೀಲ್ ಆದಿವಾಸಿ ಸಮುದಾಯಕ್ಕೆ ಸೇರಿದವರು.)

 

‍ಲೇಖಕರು G

5 November, 2012

3 Comments

  1. Tejashree

    Nice poem and a good translation too…
    tejashree ja.na.

  2. Raghunandan K

    ನಮ್ಮ ಕಷ್ಟಗಳು ಎಂದೂ ಅವರದಾಗುವುದಿಲ್ಲ
    ಆದರೂ, ನಮ್ಮ ಕಷ್ಟಗಳ ಬಗ್ಗೆ ಅವರು ನಮಗೆ ತಿಳಿ ಹೇಳುತ್ತಾರೆ
    ಕೊನೆಗುಳಿಯುವುದು ಅವರು ತೋರಿಸಿದಲ್ಲಿ ನಿಟ್ಟುಸಿರಿಡುತ್ತ ಕುಳಿತುಕೊಳ್ಳುವ ನಮ್ಮ ಸ್ಥಳಗಳು

    – ಇಷ್ಟವಾಯಿತು ಕವನ ಮತ್ತದರ ಭಾವ….

  3. hi

    ನಮ್ಮ ಕಷ್ಟಗಳು ಎಂದೂ ಅವರದಾಗುವುದಿಲ್ಲ!!hmmm

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading